Breaking News

16ನೇ ಹಣಕಾಸು ಆಯೋಗದ ನಿಮಯಗಳಿಗೆ ಕೇಂದ್ರ ಸಚಿವ ಸಂಪುಟ ಅಸ್ತು

Spread the love

ನವದೆಹಲಿ: ಕೇಂದ್ರ ಮತ್ತು ರಾಜ್ಯಗಳ ನಡುವೆ ತೆರಿಗೆ ಆದಾಯ ಹಂಚಿಕೆ ಕುರಿತು ಶಿಫಾರಸುಗಳನ್ನು ಮಾಡುವ 16ನೇ ಹಣಕಾಸು ಆಯೋಗದ ಉಲ್ಲೇಖದ ನಿಯಮಗಳಿಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ.

ಮಂಗಳವಾರ ಸಂಜೆ ನಡೆದ ಕೇಂದ್ರ ಸಚಿವ ಸಂಪುಟವು ಈ ಅನುಮೋದನೆ ನೀಡಿದೆ.

 

 

ಸಂಪುಟ ಸಭೆಯಲ್ಲಿ ತೆಗೆದುಕೊಂಡ ನಿರ್ಧಾರಗಳ ಬಗ್ಗೆ ಇಂದು ವಿವರಿಸಿದ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್, 16ನೇ ಹಣಕಾಸು ಆಯೋಗದ ಶಿಫಾರಸುಗಳು 2026ರ ಏಪ್ರಿಲ್ 1ರಿಂದ ಜಾರಿಗೆ ಬರಲಿದ್ದು, ಇವು ಐದು ವರ್ಷಗಳ ಅವಧಿಯನ್ನು ಒಳಗೊಂಡಿರುತ್ತವೆ. ಆಯೋಗವು ತನ್ನ ವರದಿಯನ್ನು 2025ರ ಅಕ್ಟೋಬರ್ 31ರೊಳಗೆ ಸಲ್ಲಿಸಲಿದೆ ಎಂದು ತಿಳಿಸಿದರು.

2017ರ ನವೆಂಬರ್ 27ರಂದು ರಚನೆಗೊಂಡ 15ನೇ ಹಣಕಾಸು ಆಯೋಗವು ತನ್ನ ಮಧ್ಯಂತರ ಮತ್ತು ಅಂತಿಮ ವರದಿಗಳ ಮೂಲಕ 2020ರ ಏಪ್ರಿಲ್ 1ರಿಂದ ಆರು ವರ್ಷಗಳ ಅವಧಿ ಒಳಗೊಂಡ ಶಿಫಾರಸುಗಳನ್ನು ಮಾಡಿದೆ. ಈ ಶಿಫಾರಸುಗಳು 2025-26ರ ಹಣಕಾಸು ವರ್ಷದವರೆಗೆ ಮಾನ್ಯವಾಗಿರುತ್ತವೆ.

ಸಂವಿಧಾನದ 280(1) ವಿಧಿಯು ಕೇಂದ್ರ ಮತ್ತು ರಾಜ್ಯಗಳ ನಡುವೆ ತೆರಿಗೆಗಳ ನಿವ್ವಳ ಆದಾಯದ ವಿತರಣೆಯ ಮೇಲೆ ಶಿಫಾರಸು ಮಾಡಲು ಹಣಕಾಸು ಆಯೋಗ ಸ್ಥಾಪಿಸುವ ವಿಧಾನಗಳನ್ನು ತಿಳಿಸಿದ್ದು, ಆದಾಯದ ಆಯಾ ಷೇರುಗಳ ರಾಜ್ಯಗಳ ನಡುವಿನ ಹಂಚಿಕೆ, ಅನುದಾನ – ಸಹಾಯ ಮತ್ತು ರಾಜ್ಯಗಳ ಆದಾಯಗಳು ಮತ್ತು ಅವಧಿಯಲ್ಲಿ ಪಂಚಾಯತ್​ಗಳ ಸಂಪನ್ಮೂಲಗಳಿಗೆ ಪೂರಕವಾದ ಕ್ರಮಗಳನ್ನು ಉಲ್ಲೇಖಿಸಿದೆ.


Spread the love

About Laxminews 24x7

Check Also

ಇನ್ಮುಂದೆ ಆನ್​ಲೈನ್ ಬೆಟ್ಟಿಂಗ್ ನಿಷೇಧ:

Spread the loveಬೆಂಗಳೂರು: ಆನ್​ಲೈನ್ ಬೆಟ್ಟಿಂಗ್ ಹಾಗೂ ಗ್ಯಾಂಬ್ಲಿಂಗ್​ಗೆ ಅಂಕುಶ ಹಾಕಲು ರಾಜ್ಯ ಸರ್ಕಾರ ಹೊಸ ಮಸೂದೆಯನ್ನು ರೂಪಿಸಿದೆ.‌ ಕರ್ನಾಟಕ ಪೊಲೀಸ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ