ಬೆಂಗಳೂರು: ರಾಜ್ಯದಲ್ಲಿ ಮಹಾಮಾರಿ ಕೊರೊನಾ ರಣಕೇಕೆ ಹಾಕುತ್ತಿದ್ದು, ದಿನೇ ದಿನೇ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಇದೀಗ ಕರ್ನಾಟಕದಲ್ಲಿ ಸೆಕೆಂಡ್ ಸಂಡೇ ಲಾಕ್‍ಡೌನ್ ಇಂದು ರಾತ್ರಿಯಿಂದಲೇ ಜಾರಿಯಾಗಲಿದೆ.
ಇಂದು ರಾತ್ರಿ 8 ಗಂಟೆಯಿಂದ ಸೋಮವಾರ ಬೆಳಗ್ಗೆ 5 ಗಂಟೆವರೆಗೆ ಕರ್ಫ್ಯೂ ಜಾರಿಯಾಗಲಿದೆ. ತುರ್ತು, ಅಗತ್ಯ ಸೇವೆ ಹೊರತುಪಡಿಸಿ ಉಳಿದವೆಲ್ಲಾ ಕಂಪ್ಲೀಟ್ ಬಂದ್ ಆಗಲಿದೆ. ಕೊರೊನಾ ತಡೆಗೆ ಈಗಾಗಲೇ ಹಲವೆಡೆ ಸೆಲ್ಫ್ ಲಾಕ್‍ಡೌನ್ ಮಾಡಲಾಗಿದೆ.
ರಾಜ್ಯದಲ್ಲಿ ಶುಕ್ರವಾರ 2,313 ಮಂದಿಗೆ ಕೋವಿಡ್-19 ಸೋಂಕು ತಗಲುವ ಮೂಲಕ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 33,418ಕ್ಕೆ ಏರಿಕೆಯಾಗಿದೆ. ಈ ಪೈಕಿ 13,836 ಮಂದಿ ಬಿಡುಗಡೆಯಾಗಿದ್ದು, 19,035 ಸಕ್ರಿಯ ಪ್ರಕರಣಗಳಿವೆ. ಒಟ್ಟು 1,003 ಮಂದಿ ಡಿಸ್ಚಾರ್ಜ್ ಆಗಿದ್ದಾರೆ.
ಸೆಕೆಂಡ್ ಸಂಡೇ ಲಾಕ್
* ಸರ್ಕಾರಿ ಕಚೇರಿಗಳು ಸಂಪೂರ್ಣ ಬಂದ್
* ವಿಧಾನಸೌಧ, ವಿಕಾಸ ಸೌಧ ಬಹುತೇಕ ಬಂದ್
* ಎಂ.ಎಸ್ ಬಿಲ್ಡಿಂಗ್, ಕೆಜಿ ರಸ್ತೆಯ ಲೋಕಪಯೋಗಿ ಇಲಾಖೆ ಬಂದ್
* ಸರ್ಕಾರಿ ಕಚೇರಿ ಸಿಬ್ಬಂದಿಗೆ ರಜೆ
* ಬಿಎಂಟಿಸಿ, ಕೆಎಸ್‌ಆರ್‌ಟಿಸಿ ಬಸ್‍ಗಳು ಬಹುತೇಕ ಖಾಲಿ
* ಸೀಲ್‍ಡೌನ್ ಎಫೆಕ್ಟ್ ನಿಂದಾಗಿ ಎಸ್.ಪಿ ರೋಡ್ ಬಂದ್
* ಎಸ್.ಪಿ ರೋಡ್, ಬಿವಿಕೆ ಅಯ್ಯಂಗಾರ್ ರೋಡ್, ಚಿಕ್ಕಪೇಟೆ ಬಂದ್
* ಧರ್ಮರಾಯಸ್ವಾಮಿ ದೇವಸ್ಥಾನ ರೋಡ್, ಕೆ.ಆರ್.ಮಾರುಕಟ್ಟೆ ಸಂಪೂರ್ಣ ಬಂದ್
ನಾಳೆ ಏನಿರುತ್ತೆ?
* ಮಾಂಸದ ಅಂಗಡಿಗಳು ಓಪನ್
* ಹಣ್ಣು, ತರಕಾರಿ, ದಿನಸಿ ಪದಾರ್ಥ ಖರೀದಿಗೆ ಅವಕಾಶ
* ಆಸ್ಪತ್ರೆ, ಮೆಡಿಕಲ್ ಸ್ಟೋರ್ಸ್ ಓಪನ್
* ಡಾಕ್ಟರ್ಸ್, ನರ್ಸ್, ಅಂಬುಲೆನ್ಸ್ ಓಡಾಟಕ್ಕಿಲ್ಲ ನಿರ್ಬಂಧ
* ಅನಾರೋಗ್ಯ ಸಮಸ್ಯೆವುಳ್ಳರಿಗೆ ಆಸ್ಪತ್ರೆಗೆ ಹೋಗಲು ಅವಕಾಶ
* ಗರ್ಭಿಣಿಯರ ತಪಾಸಣೆಗೆ ಸಮಸ್ಯೆ ಇಲ್ಲ
* ತುರ್ತು ಚಿಕಿತ್ಸೆ, ರೋಗಿಗಳಿಗೆ ಆಸ್ಪತ್ರೆ ಹೋಗಲು ಅವಕಾಶ
* ಮಾಧ್ಯಮ ಪ್ರತಿನಿಧಿಗಳಿಗೆ ಅವಕಾಶ
* ಹೋಟೆಲ್‍ಗಳಲ್ಲಿ ಪಾರ್ಸಲ್ ಮಾತ್ರ
ನಾಳೆ ಏನಿರಲ್ಲ?
* ಎಲ್ಲಾ ಪಾರ್ಕ್ ಗಳು ಬಂದ್
* ರಸ್ತೆಗಿಳಿಯಲ್ಲ ಆಟೋ, ಕ್ಯಾಬ್, ಬೈಕ್
* ಬಾರ್, ಸೆಲೂನ್, ಬ್ಯೂಟಿ ಪಾರ್ಲರ್, ಪಾರ್ಕ್ ಕ್ಲೋಸ್
* ಮದ್ಯದಂಗಡಿ ಸಂಪೂರ್ಣ ಬಂದ್
* ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಬಸ್ ಓಡಲ್ಲ (ಭಾನುವಾರ ಬೆಳಗ್ಗೆಯಿಂದ ಸೋಮವಾರ ಬೆಳಗ್ಗೆಯವರೆಗೂ ಇರುವುದಿಲ್ಲ)
* ಗಾರ್ಮೆಂಟ್ಸ್, ಫ್ಯಾಕ್ಟರಿ, ಕಾರ್ಖಾನೆಗಳು, ಕಂಪನಿಗಳು ಸ್ತಬ್ಧ
* ಬೆಂಗಳೂರಿನಲ್ಲಿ ಎಲ್ಲಾ ಫ್ಲೈಓವರ್‌ಗಳು ಇಂದು ಸಂಜೆಯಿಂದ ಕ್ಲೋಸ್