ಸೌತಾಂಪ್ಟನ್: ಬರೋಬ್ಬರು 117 ದಿನಗಳ ಬಳಿಕ ಕ್ರಿಕೆಟ್ ಚಟುವಟಿಕೆಗಳು ಆರಂಭವಾಗಿದ್ದು, ಇಂಗ್ಲೆಂಡ್ ವೆಸ್ಟ್ ಇಂಡೀಸ್ ನಡುವಿನ ಟೆಸ್ಟ್ ಪಂದ್ಯ ಮಳೆಯ ಅಡೆತಡೆಯ ನಡುವೆಯೂ ಸಾಗುತ್ತಿದೆ. ಇತ್ತ ಇಂಗ್ಲೆಂಡ್ ಕ್ರಿಕೆಟ್ ತಂಡ ಭಾರತ ಮೂಲದ ನಾಲ್ವರು ವೈದ್ಯರಿಗೆ ವಿಶೇಷವಾಗಿ ಗೌರವ ಸಲ್ಲಿಸಿದೆ.
ಕೋವಿಡ್-19 ಸಂದಿಗ್ಧ ಸಂದರ್ಭದಲ್ಲಿ ಮುಂಚೂಣಿಯಲ್ಲಿ ನಿಂತು ಕಾರ್ಯನಿರ್ವಹಿಸಿದ್ದ ವೈದ್ಯರ ಹೆಸರಗಳನ್ನು ತಮ್ಮ ಜೆರ್ಸಿ ಮೇಲೆ ಮುದ್ರಿಸಿ ಕಣಕ್ಕೆ ಇಳಿಯುವ ಮೂಲಕ ವಿಶೇಷ ಗೌರವ ಅರ್ಪಿಸಿದೆ. ‘ರೈಸ್ ದಿ ಬ್ಯಾಟ್’ ಅಭಿಯಾನಕ್ಕೆ ಡಾ. ವಿಕಾಸ್ ಕುಮಾರ್ ಅವರು ನಾಮನಿರ್ದೇಶನ ಮಾಡಲಾಗಿದೆ. ವಿಕಾಸ್ ಕುಮಾರ್ ನ್ಯಾಷನಲ್ ಹೆಲ್ತ್ ಸರ್ವಿಸ್ (ಎನ್‍ಎಚ್‍ಎಸ್) ಟಸ್ಟ್ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸಿದ್ದರು.
35 ವರ್ಷದ ವಿಕಾಸ್ ಅವರ ಹೆಸರು ಮುದ್ರಿಸಿರುವ ಜೆರ್ಸಿಯನ್ನು ಇಂಗ್ಲೆಂಡ್ ತಂಡದ ನಾಯಕ ಬೆನ್ ಸ್ಟೋಕ್ಸ್ ಧರಿಸಿದ್ದರು. ಈ ಕುರಿತು ಪ್ರತಿಕ್ರಿಯೆ ನೀಡಿರುವ ವಿಕಾಸ್ ಅವರು, ಸ್ಟೋಕ್ಸ್ ಹಾಗೂ ಇತರೇ ಆಟಗಾರರು ವೈದ್ಯರ ಸಂದೇಶದ ಜೆರ್ಸಿ ಧರಿಸಿದ್ದನ್ನು ಕಂಡಾಗ ಸಂತಸವಾಗಿತ್ತು. ಈ ಸಂದರ್ಭ ನಮಗೆಲ್ಲರಿಗೂ ತುಂಬಾ ಕಷ್ಟಕರವಾಗಿದೆ. ಎನ್‍ಎಚ್‍ಎಸ್ ಸಿಬ್ಬಂದಿ ಸಾಕಷ್ಟು ತ್ಯಾಗ ಮಾಡಿದ್ದಾರೆ. ಈ ಗೌರವ ಭಾರತದ ವೈದ್ಯ ಸ್ನೇಹಿತರು ಸೇರಿದಂತೆ ಎಲ್ಲ ಸಿಬ್ಬಂದಿಗೂ ಸಲ್ಲುತ್ತದೆ ಎಂದು ಹೇಳಿದ್ದಾರೆ.
ವಿಕಾಸ್ ಕುಮಾರ್ ದೆಹಲಿಯ ವಿಶ್ವವಿದ್ಯಾಲಯದಿಂದ ಪದವಿ ಪಡೆದಿದ್ದು, ಮೌಲಾನಾ ಅಜಾದ್ ಮೆಡಿಕಲ್ ಕಾಲೇಜಿನಲ್ಲಿ ಅರಿವಳಿಕೆ ವಿಷಯದಲ್ಲಿ ಸ್ನಾತಕೋತ್ತರ ಡಿಪ್ಲೋಮಾ ಪೂರೈಸಿದ್ದರು. 2019ರಲ್ಲಿ ಇಂಗ್ಲೆಂಡ್‍ಗೆ ಕುಟುಂಬದೊಂದಿಗೆ ತೆರಳಿದ್ದ ವಿಕಾಶ್ ಕುಮಾರ್ ಅಲ್ಲಿಯೇ ಸೇವೆ ಸಲ್ಲಿಸುತ್ತಿದ್ದಾರೆ.
ಇಂಗ್ಲೆಂಡ್ ತಂಡದ ನಾಯಕ ಬೆನ್ ಸ್ಟೋಕ್ಸ್ ವಿಡಿಯೋ ಸಂದೇಶದ ಮೂಲಕ ವೈದ್ಯ ವಿಕಾಸ್ ಕುಮಾರ್ ಅವರ ಕಾರ್ಯಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ. ವಿಕಾಸ್ ಕುಮಾರ್ ಅವರೊಂದಿಗೆ ಭಾರತದ ಮೂಲದ ಡಾ.ಜಮಾಸ್ಲ್ ಕೈಕುಸ್ರೂ ದಸ್ತೂರ್, ಡಾ. ಹರಿಕೃಷ್ಣ ಶಾ, ಕ್ರಿಶನ್ ಅಘಾದಾ ಅವರ ಹೆಸರುಗಳನ್ನು ಆಟಗಾರರ ಜೆರ್ಸಿ ಮೇಲೆ ಮುದ್ರಿಸಿ ಗೌರವ ಸೂಚಿಸಲಾಗಿತ್ತು.
https://youtu.be/eP5kqN8ixFA