Breaking News

ಯಾವುದೇ ಯೋಜನೆಗೆ ಅನುದಾನದ ಕೊರತೆ ಇಲ್ಲ ಗೃಹ ಲಕ್ಷ್ಮಿ ಯೋಜನೆ ಗೊಂದಲ ವಿಚಾರ: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ​ಹೇಳೋದೇನು

Spread the love

ಧಾರವಾಡ : ಗೃಹಲಕ್ಷ್ಮಿ ಯೋಜನೆ ಗೊಂದಲ ವಿಚಾರ ಈಗ ಎಲ್ಲವೂ ಸರಳ ಮಾಡಿದ್ದೇವೆ.

ಈಗಾಗಲೇ 1.9 ಕೋಟಿ ಜನರಿಗೆ ತಲುಪಿದ್ದೇವೆ. ಇನ್ನಾದರೂ ಐದಾರು ಲಕ್ಷ ಜನರದ್ದು ಕ್ಲಿಯರ್ ಆಗಬೇಕಿದೆ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಹೇಳಿದರು.

ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಯಾವುದೇ ಅನುದಾನದ ಕೊರತೆ ಇಲ್ಲ. ಆದರೆ ತಾಂತ್ರಿಕ ತೊಂದರೆ ಕಾರಣಕ್ಕೆ ವಿಳಂಬ ಆಗಿದೆ. 15 ಲಕ್ಷ ಜನ ಆಧಾರ್ ಲಿಂಕ್ ಇಲ್ಲದ ಬ್ಯಾಂಕ್ ಖಾತೆ ನೀಡಿದ್ದರು. ಹೀಗಾಗಿ ಅಂಥವರಿಗೆ ವಿಳಂಬ ಆಗಿದೆ. ಕೆಲವರ ಅಕೌಂಟ್ ಚಾಲ್ತಿ ಇರಲಿಲ್ಲ. ಅದರಿಂದಲೂ ತಡವಾಗಿದೆ. ಆದರೆ ಈಗ ಎಲ್ಲ ಕ್ಲಿಯರ್ ಆಗುತ್ತಿದೆ. ಯಾವುದೇ ಯೋಜನೆಗೆ ಅನುದಾನದ ಕೊರತೆ ಇಲ್ಲ. ಅದಕ್ಕಾಗಿ ಸಿಎಂ ಹಣ ತೆಗೆದಿಟ್ಟಿದ್ದಾರೆ ಎಂದು ಸ್ಪಷ್ಟಪಡಿಸಿದರು.

ಅಭಿವೃದ್ಧಿ ಕೆಲಸಗಳನ್ನು ನಾವು ನಿಲ್ಲಿಸಿಲ್ಲ. ಆದರೆ ಹಿಂದಿನ ಸರ್ಕಾರ ಯದ್ವಾತದ್ವಾ ಟೆಂಡರ್ ಮಾಡಿತ್ತು. ಆದರೆ, ಅವರೇ ಈಗ ಅಭಿವೃದ್ಧಿ ಬಗ್ಗೆ ಕೇಳುತ್ತಿದ್ದಾರೆ. ಅವರು ಮಾಡಿಟ್ಟ ರಾಡಿಯನ್ನು ನಾವು ತೊಳಿತಾ ಇದ್ದೇವೆ. ಇದು ಒಂದು ಹಂತಕ್ಕೆ ಬರುತ್ತದೆ. ಇದು ಜನಸಾಮಾನ್ಯರಿಗೆ ಗೊತ್ತಾಗಬೇಕು ಎಂದು ಹೇಳಿದರು. ಲೋಕಸಭೆ ಚುನಾವಣೆಗೆ ಕೈ ಅಭ್ಯರ್ಥಿ ಆಯ್ಕೆ ವಿಚಾರವಾಗಿ ಮಾತನಾಡಿದ ಅವರು, ಮುಂದಿನ ವಾರ ಧಾರವಾಡ ಕ್ಷೇತ್ರದ ಆಕಾಂಕ್ಷಿ ಜೊತೆ ಸಭೆ ಮಾಡುವುದಾಗಿ ಹೇಳಿದರು.

ಧಾರವಾಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ವೀಕ್ಷಕಿಯಾಗಿರೋ ಹೆಬ್ಬಾಳಕರ್ ಅವರು, ಆಕಾಂಕ್ಷಿಗಳು ಯಾರು ಯಾರಿದ್ದಾರೆ ಗೊತ್ತಿಲ್ಲ. ಅದಕ್ಕಾಗಿ ಸಭೆ ಮಾಡಬೇಕಿದೆ. ಎಲ್ಲ ಮುಖಂಡರನ್ನು ಭೇಟಿಯಾಗಬೇಕಿದೆ. ಆಕಾಂಕ್ಷಿಗಳ ಭೇಟಿಯೂ ಆಗಬೇಕಿದೆ. ಅದಕ್ಕಾಗಿಯೇ ಸಭೆ ಮಾಡಬೇಕಿದೆ. ಇಲ್ಲಿಯವರೆಗೆ ಯಾವುದೇ ಆಕಾಂಕ್ಷಿಗಳು ಪ್ರಸ್ತಾಪ ಸಲ್ಲಿಸಿಲ್ಲ. ಈ ಸಂಬಂಧ ಮುಂದಿನ ವಾರದಲ್ಲಿ ಸಭೆ ಮಾಡುವೆ. ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕಿದೆ. ಹುಬ್ಬಳ್ಳಿ ಅಥವಾ ಧಾರವಾಡದಲ್ಲಿ ಸಭೆ ಮಾಡುತ್ತೇವೆ ಎಂದು ಹೇಳಿದರು.

ಗೃಹಲಕ್ಷ್ಮಿ ಯೋಜನೆಯ ತಾಂತ್ರಿಕ ಸಮಸ್ಯೆ ಬಗೆಹರಿಸುವಂತೆ ಸೂಚನೆ: ಕರ್ನಾಟಕ ಸರ್ಕಾರದ ಬಹುನಿರೀಕ್ಷಿತ ಯೋಜನೆಗಳಲ್ಲಿ ಒಂದಾಗಿರುವ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಿಗೆ ತ್ವರಿತಗತಿಯಲ್ಲಿ ಹಣ ಸಂದಾಯ ಮಾಡಬೇಕು. ತಾಂತ್ರಿಕ ಕಾರಣಗಳಿಂದ ಸಮಸ್ಯೆ ಎದುರಿಸುತ್ತಿರುವ ಫಲಾನುಭವಿಗಳ ಖಾತೆಗೆ ಶೀಘ್ರ ಹಣ ಸಂದಾಯವಾಗುವಂತೆ ಇಲಾಖೆ ಅಧಿಕಾರಿಗಳು ಕಾರ್ಯಪ್ರವೃತ್ತರಾಗಬೇಕು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವರಾದ ಲಕ್ಷ್ಮಿ ಹೆಬ್ಬಾಳ್ಕರ್‌ (ನವೆಂಬರ್ -2-2023) ಸೂಚಿಸಿದ್ದರು.


Spread the love

About Laxminews 24x7

Check Also

ಹುಬ್ಬಳ್ಳಿಯಲ್ಲಿ ಸಿಲಿಂಡರ್ ಬ್ಲಾಸ್ಟ್ ತಪ್ಪಿದ ದೊಡ್ಡ ದುರಂತ

Spread the love ಹುಬ್ಬಳ್ಳಿಯಲ್ಲಿ ಸಿಲಿಂಡರ್ ಬ್ಲಾಸ್ಟ್ ತಪ್ಪಿದ ದೊಡ್ಡ ದುರಂತ ಹುಬ್ಬಳ್ಳಿಯಲ್ಲಿ ನಿನ್ನೆ ಮಧ್ಯ ರಾತ್ರಿ ಎರಡು ಗಂಟೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ