Breaking News

ಈ ನಗರದಲ್ಲಿ ಎಲ್ಲೆಂದರಲ್ಲಿ ಉಗುಳಿದ್ರೆ ಜೋಕೆ; ಉಗಿದ್ರೆ ಬೀಳುತ್ತೆ ದಂಡ!

Spread the love

ಸೂರತ್​(ಗುಜರಾತ್) : ಸೂರತ್​ ನಗರದ ರಸ್ತೆಗಳಲ್ಲಿ ಗುಟ್ಕಾ ತಿಂದು ಉಗುಳುವವರ ವಿರುದ್ಧ ಕ್ರಮಕೈಗೊಳ್ಳಲು ನಗರ ಪಾಲಿಕೆ ಮುಂದಾಗಿದೆ.

ಈ ಸಂಬಂಧ ನಗರದ ರಸ್ತೆಗಳಲ್ಲಿ ಗುಟ್ಕಾ, ಪಾನ್ ಮಸಾಲ ತಿಂದು ಉಗುಳುವವರನ್ನು ಪತ್ತೆ ಹಚ್ಚಲು ನಗರದೆಲ್ಲೆಡೆ ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ.

ಸೂರತ್ ನಗರ ಪಾಲಿಕೆಯು ನಗರವನ್ನು ಅಂದವಾಗಿಡಲು ವಿವಿಧ ಕ್ರಮಗಳನ್ನು ಕೈಗೊಂಡಿದೆ. ಸ್ಮಾರ್ಟ್​ ಸಿಟಿ ಯೋಜನೆ ಅಡಿಯಲ್ಲೂ ಸೂರತ್​ ನಗರದಲ್ಲಿ ಹಲವು ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗಿದೆ. ನಗರವನ್ನು ಚಂದಗಾಣಿಸಲು ಇಲ್ಲಿನ ರಸ್ತೆಗಳ ಬದಿಯಲ್ಲಿನ ಗೋಡೆಗಳಿಗೆ, ಸೇತುವೆಗಳಿಗೆ, ರಸ್ತೆ ವಿಭಜಕಗಳಿಗೆ, ಟ್ರಾಫಿಕ್​ ವೃತ್ತಗಳಿಗೆ ಬಣ್ಣಗಳನ್ನು ಬಳೆಯಲಾಗಿದೆ.

3250 ಸಿಸಿಟಿವಿ ಕ್ಯಾಮರಾ ಅಳವಡಿಕೆ : ಆದರೆ ಕೆಲ ವಾಹನ ಸವಾರರು ಗುಟ್ಕಾ, ಪಾನ್​ ಮಸಾಲ ತಿಂದು ರಸ್ತೆಗಳಲ್ಲೇ ಉಗುಳುತ್ತಿರುವುದು ನಗರದ ಸೌಂದರ್ಯವನ್ನು ಹಾಳು ಮಾಡುತ್ತಿದೆ. ಅಲ್ಲದೆ ಟ್ರಾಫಿಕ್​ ಸ್ಥಳಗಳಲ್ಲಿ, ಪಾದಚಾರಿ ರಸ್ತೆಗಳಲ್ಲಿ ವಿವಿಧೆಡೆ ಜನರು ಉಗುಳುತ್ತಿರುವುದು ಸಾಮಾನ್ಯವಾಗಿದೆ. ಈ ಸಂಬಂಧ ರಸ್ತೆಗಳಲ್ಲಿ ಉಗುಳುವವರ ವಿರುದ್ಧ ಕ್ರಮಕೈಗೊಳ್ಳಲು ಮುಂದಾಗಿರುವ ನಗರ ಪಾಲಿಕೆ ನಗರದೆಲ್ಲೆಡೆ ಸಿಸಿಟಿವಿ ಕಣ್ಗಾವಲು ಇರಿಸಿದೆ. ಒಟ್ಟು ನಗರದಾದ್ಯಂತ ಸುಮಾರು 3250 ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಸದ್ಯ 10 ದಿನಗಳ ಪ್ರಾಯೋಗಿಕ ಪರೀಕ್ಷೆ ನಡೆಸಿದ್ದು, 88 ಬೈಕ್​ ಸವಾರರ ವಿರುದ್ಧ ಕ್ರಮಕೈಗೊಳ್ಳಲಾಗಿದೆ.

ಈ ಬಗ್ಗೆ ಮಾಹಿತಿ ನೀಡಿದ ಆರೋಗ್ಯ ಇಲಾಖೆ ಅಭಿಯೋಜಕ ಪ್ರದೀಪ್​ ಉಮ್ರಿಗಾರ್, ಸೂರತ್​ ನಗರದಲ್ಲಿ ಒಟ್ಟು 3250 ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವವರ ವಿರುದ್ಧ ಕ್ರಮಕೈಗೊಳ್ಳಲು ನಗರ ಪಾಲಿಕೆ ಮುಂದಾಗಿದೆ. ಯೋಜನೆಯ ಪ್ರಾಯೋಗಿಕ ಹಂತದ 10 ದಿನಗಳಲ್ಲಿ ಸಾರ್ವಜನಿಕರ ಸ್ಥಳಗಳಲ್ಲಿ ಉಗುಳಿದ 88 ಮಂದಿಗೆ ನೋಟಿಸ್​ ನೀಡಲಾಗಿದೆ ಎಂದು ತಿಳಿಸಿದರು.ಮಹಾನಗರ ಪಾಲಿಕೆಯು ಉಗುಳುವವರ ವಿರುದ್ಧ 100 ರೂಪಾಯಿ ದಂಡ ವಿಧಿಸಲು ಮುಂದಾಗಿದೆ. ಈ ದಂಡವನ್ನು ಏಳು ದಿನಗಳಲ್ಲಿ ಪಾವತಿಸದಿದ್ದರೆ ಅಂತವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ. ಮೊದಲ ಬಾರಿ ಸಿಕ್ಕಿಬಿದ್ದರೆ 100 ರೂ. ದಂಡ, ಎರಡನೇ ಬಾರಿ ಸಿಕ್ಕ ಬಿದ್ದರೆ 250 ರೂ. ದಂಡ ವಿಧಿಸಲಾಗುತ್ತದೆ. ಎರಡಕ್ಕಿಂತ ಹೆಚ್ಚು ಬಾರಿ ಸಿಕ್ಕಿ ಬಿದ್ದರೆ 5000ಕ್ಕೂ ಅಧಿಕ ದಂಡ ವಿಧಿಸುವುದಾಗಿ ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ. ದಂಡ ವಿಧಿಸಿದ 7 ದಿನಗಳ ಒಳಗಾಗಿ ಮಹಾನಗರ ಪಾಲಿಕೆಯ ನಾಗರಿಕ ಕೇಂದ್ರ ಮತ್ತು ಪಾಲಿಕೆ ವೆಬ್​ಸೈಟ್​ನಲ್ಲಿ ಪಾವತಿ ಮಾಡಬೇಕು ಎಂದು ತಿಳಿಸಿದ್ದಾರೆ.


Spread the love

About Laxminews 24x7

Check Also

ಜನರಲ್ಲಿ ವೈಚಾರಿಕತೆ, ವೈಜ್ಞಾನಿಕತೆ ಬೆಳೆಯದಿದ್ದರೆ, ಕೇವಲ ಮೌಢ್ಯ ನಿಷೇಧ ಕಾನೂನಿನ ಮೂಲಕ ನಿರೀಕ್ಷಿತ ಬದಲಾವಣೆ ಸಾಧ್ಯವಿಲ್ಲ ಎಂದ ಸಿಎಂ

Spread the loveಬೆಂಗಳೂರು: ”ದ್ವಿಭಾಷಾ ಸೂತ್ರ ನನ್ನ ಅಭಿಪ್ರಾಯವಾಗಿದೆ. ಅದನ್ನು ಸರ್ಕಾರದ ಅಭಿಪ್ರಾಯ ಮಾಡುವ ದಿಕ್ಕಿನಲ್ಲಿ ಪ್ರಯತ್ನಿಸುತ್ತೇನೆ” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ