Breaking News

ಪ್ರಿಯಾಂಕಾ ಉಪೇಂದ್ರ ಹುಟ್ಟುಹಬ್ಬ: ಡ್ರೋನ್​ ಮೂಲಕ ರಿವೀಲ್ ಆಯ್ತು ‘ಕ್ಯಾಪ್ಚರ್’ ಪೋಸ್ಟರ್

Spread the love

ಕ್ಯಾಪ್ಚರ್​’ ಸಿನಿಮಾ ತಂಡ ಪ್ರಿಯಾಂಕಾ ಉಪೇಂದ್ರ ಅವರ ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಿಸಿದರು.

ಕನ್ನಡ ಚಿತ್ರರಂಗದ ನಟಿ ಪ್ರಿಯಾಂಕಾ ಉಪೇಂದ್ರ ಅವರಿಗಿಂದು 46ನೇ ವರ್ಷದ ಹುಟ್ಟುಹಬ್ಬದ ಸಂಭ್ರಮ. ರಿಯಲ್​ ಸ್ಟಾರ್​ ಪತ್ನಿಗೆ ಸ್ನೇಹಿತರು, ಅಭಿಮಾನಿಗಳು, ಆತ್ಮೀಯರು ಹಾಗೂ ಸ್ಯಾಂಡಲ್​​ವುಡ್​​ ಗಣ್ಯರು ಸಾಮಾಜಿಕ ಜಾಲತಾಣಗಳಲ್ಲಿ ಶುಭಾಶಯ ಕೋರುತ್ತಿದ್ದಾರೆ.

ಇಂದು ಪ್ರಿಯಾಂಕಾ ಅವರು ಅಭಿಮಾನಿಗಳು ಹಾಗೂ ಕುಟುಂಬಸ್ಥರ ಜೊತೆ ಜನ್ಮದಿನವನ್ನು ಅದ್ಧೂರಿಯಾಗಿ ಆಚರಿಸಿಕೊಂಡಿದ್ದಾರೆ.

ಅಲ್ಲದೇ, ‘ಕ್ಯಾಪ್ಚರ್​’ ಸಿನಿಮಾ ತಂಡ ಪ್ರಿಯಾಂಕಾ ಅವರ ಹುಟ್ಟುಹಬ್ಬವನ್ನು ವಿಶೇಷವಾಗಿ ಸಂಭ್ರಮಿಸಿದರು. ವಿಭಿನ್ನವಾಗಿ ಕೇಕ್​ ತಯಾರಿಸಿದ್ದ ಚಿತ್ರತಂಡ ಪ್ರಿಯಾಂಕಾ ಅವರಿಗೆ ಬಿಗ್​ ಸರ್​ಪ್ರೈಸ್​ ನೀಡಿದರು. ಇದೇ ಸಮಯದಲ್ಲಿ ‘ಕ್ಯಾಪ್ಚರ್​’ ಸಿನಿಮಾದ 2ನೇ ಪೋಸ್ಟರ್ ಅನ್ನು ಡ್ರೋನ್​ ಮೂಲಕ ಬಿಡುಗಡೆಗೊಳಿಸಲಾಯಿತು. ಈ ಮೂಲಕ ಅವರ ಹುಟ್ಟುಹಬ್ಬವನ್ನು ಚಿತ್ರತಂಡ ಮತ್ತಷ್ಟು ವಿಶೇಷ ಮತ್ತು ವಿಭಿನ್ನವಾಗಿಸಿದೆ.

 ಪ್ರಿಯಾಂಕಾ ಉಪೇಂದ್ರ ಹುಟ್ಟುಹಬ್ಬ ಆಚರಣೆಪ್ರಿಯಾಂಕಾ ಹುಟ್ಟುಹಬ್ಬದ ಸಂಭ್ರಮಕ್ಕೆ ಪತಿ ರಿಯಲ್​ ಸ್ಟಾರ್​ ಉಪೇಂದ್ರ ಅವರು ಸಾಥ್​ ನೀಡಿದರು. ಪ್ರಿಯಾಂಕಾ ಅವರಿಗೆ ಕೇಕ್​ ತಿನ್ನಿಸುವ ಮೂಲಕ ಬರ್ತ್​ಡೇ ವಿಶ್​ ಹೇಳಿದರು. ಜೊತೆಗೆ ‘ಕ್ಯಾಪ್ಚರ್​’ ತಂಡಕ್ಕೂ ಶುಭ ಹಾರೈಸಿದರು. ಬಳಿಕ ತಮ್ಮ ಚಿತ್ರತಂಡದ ವಿಭಿನ್ನ ಪ್ರಯತ್ನಕ್ಕೆ ಪ್ರಿಯಾಂಕಾ ಅವರು ಸಂತಸ ವ್ಯಕ್ತಪಡಿಸಿದರು.

 

ಕೇಕ್​ ಕತ್ತರಿಸಿ ಮಾಧ್ಯಮದೊಂದಿಗೆ ಮಾತನಾಡಿದ ಪ್ರಿಯಾಂಕಾ, “ದೀಪಾವಳಿಗೆ ಬರ್ತ್​ಡೇ ಬಂದಿದ್ದು ತುಂಬಾ ಖುಷಿ ಇದೆ. ಉಪೇಂದ್ರ ಅವರ ಹುಟ್ಟುಹಬ್ಬ ಗಣೇಶ ಹಬ್ಬದ ಸಮಯದಲ್ಲಿ ಬರುತ್ತದೆ. ಇದೊಂದು ರೀತಿಯಲ್ಲಿ ತುಂಬಾ ವಿಶೇಷ. ನನಗೆ ಸಿನಿಮಾ ಅಂದ್ರೆ ತುಂಬಾ ಇಷ್ಟ. ಮದುವೆ ಆದ್ಮೇಲೂ ನನ್ನ ಗ್ರಾಫ್​ ಹೀಗೆ ಹೋಗುತ್ತೆ ಎಂದು ಅಂದುಕೊಂಡಿರಲಿಲ್ಲ. ಒಳ್ಳೆಯ ಸಿನಿಮಾಗೆ ಆಡಿಯನ್ಸ್​ ಸಪೋರ್ಟ್​ ಇದ್ದೇ ಇರುತ್ತದೆ. ಇದು ನನ್ನ ಟೀಂ ಎಫರ್ಟ್. ನನ್ನ ಜೀವನ ಹೀಗೆ ಇರಬೇಕೆಂದು ನಾನು ಯಾವುದೇ ಪ್ಲಾನ್​ ಮಾಡಿಲ್ಲ. ಈ ಕ್ಷಣವನ್ನು ಎಂಜಾಯ್​ ಮಾಡುತ್ತೇನೆ ಅಷ್ಟೇ. ನನ್ನಿಂದ ಸ್ವಲ್ಪ ಜನಕ್ಕಾದರೂ ಪ್ರೇರಣೆ ಸಿಕ್ಕಿರುವ ಬಗ್ಗೆ ತುಂಬಾ ಖುಷಿ​ಯಿದೆ” ಎಂದರು.

ಸದ್ಯ ಪ್ರಿಯಾಂಕಾ ಉಪೇಂದ್ರ ಅವರು ‘ಕ್ಯಾಪ್ಚರ್​’ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಅವರ ಅಭಿಮಾನಿಗಳು ಚಿತ್ರದ ಬಿಡುಗಡೆಗಾಗಿ ಎದುರು ನೋಡುತ್ತಿದ್ದಾರೆ. ಲೋಹಿತ್​ ನಿರ್ದೇಶನದಲ್ಲಿ ಮೂಡಿಬರುತ್ತಿರುವ ‘ಕ್ಯಾಪ್ಚರ್​’ ಸಿನಿಮಾದ ಪ್ರಮೋಷನ್​ ಭರ್ಜರಿಯಾಗಿಯೇ ನಡೆಯುತ್ತಿದೆ. ಟೈಟಲ್​ ಹಾಗೂ ಪೋಸ್ಟರ್​ನಿಂದಲೇ ಸದ್ದು ಮಾಡುತ್ತಿರುವ ಚಿತ್ರ ಡಿಸೆಂಬರ್​ ಮೊದಲ ವಾರದಲ್ಲಿ ತೆರೆಗೆ ಬರುವ ಸಾಧ್ಯತೆ ಇದೆ. ಸಿನಿಮಾವನ್ನು ರಾಧಿಕಾ ಕುಮಾರಸ್ವಾಮಿ ಸಹೋದರ ರವಿರಾಜ್​ ಅವರು ತಮ್ಮ ಶ್ರೀ ದುರ್ಗಾಪರಮೇಶ್ವರಿ ಬ್ಯಾನರ್​ ಮೂಲಕ ನಿರ್ಮಾಣ ಮಾಡಿದ್ದಾರೆ. ಸಿಸಿಟಿವಿ ಕಾನ್ಸೆಪ್ಟ್​​ನಲ್ಲಿ ಚಿತ್ರ ಮೂಡಿಬರಲಿದೆ.


Spread the love

About Laxminews 24x7

Check Also

ಇನ್ಮುಂದೆ ಆನ್​ಲೈನ್ ಬೆಟ್ಟಿಂಗ್ ನಿಷೇಧ:

Spread the loveಬೆಂಗಳೂರು: ಆನ್​ಲೈನ್ ಬೆಟ್ಟಿಂಗ್ ಹಾಗೂ ಗ್ಯಾಂಬ್ಲಿಂಗ್​ಗೆ ಅಂಕುಶ ಹಾಕಲು ರಾಜ್ಯ ಸರ್ಕಾರ ಹೊಸ ಮಸೂದೆಯನ್ನು ರೂಪಿಸಿದೆ.‌ ಕರ್ನಾಟಕ ಪೊಲೀಸ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ