Breaking News

ದೀಪಾವಳಿ ಹಣತೆಗಳಿಗೆ ಬಣ್ಣದ ಸ್ಪರ್ಶ ನೀಡಿದ ವಿಶೇಷ ಚೇತನರು

Spread the love

ಮಂಗಳೂರು: ನಾಡಿನೆಲ್ಲೆಡೆ ದೀಪಾವಳಿ ಹಬ್ಬಕ್ಕೆ ಬಿರುಸಿನ ತಯಾರಿ ನಡೆಯುತ್ತಿದೆ. ದೀಪಾವಳಿ ದಿನ ಪಟಾಕಿ ಸಿಡಿಸುವುದರ ಜೊತೆಗೆ ಹಣತೆಯ ಮೂಲಕ ದೀಪವನ್ನು ಬೆಳಗುವುದು ಸಾಮಾನ್ಯ. ದೀಪಾವಳಿ ದಿನ ಹೀಗೆ ಬೆಳಗುವ ಹಣತೆಗೆ ಮಂಗಳೂರಿನಲ್ಲಿ ವಿಶೇಷ ಚೇತನರು ವಿಶೇಷ ರಂಗು ನೀಡುತ್ತಿದ್ದಾರೆ. ನಗರದ ಶಕ್ತಿನಗರದಲ್ಲಿರುವ ಸಾನಿಧ್ಯ ವಿಶೇಷ ಮಕ್ಕಳ ಶಾಲೆಯ ಸಾನಿಧ್ಯ ಸ್ಕಿಲ್ ಡೆವಲಪ್ಮೆಂಟ್ ವಿಭಾಗದಲ್ಲಿನ ಇಪ್ಪತ್ತೈದು ವರ್ಷ ಮೇಲ್ಪಟ್ಟ ವಿಶೇಷ ಚೇತನರು ಹಣತೆಗಳಿಗೆ ರಂಗು ರಂಗಿನಿನ ಬಣ್ಣ ಬಳೆಯುವ ಕಾಯಕದಲ್ಲಿ ತೊಡಗಿಕೊಂಡಿದ್ದಾರೆ.

ಕುಂಬಾರರಿಂದ ನೇರವಾಗಿ ಖರೀದಿಸಿದ ಮಣ್ಣಿನ ಹಣತೆಗಳನ್ನು ಈ ವಿಶೇಷ ಚೇತನರು ಮೊದಲಿಗೆ ನೀರಿನಿಂದ ತೊಳೆದು ಅದಕ್ಕೆ ಬಣ್ಣ ಹಚ್ಚುತ್ತಾರೆ. ಆ ಬಳಿಕ ಅವುಗಳಿಗೆ ಟಿಕಿಲಿಗಳನ್ನು ಅಂಟಿಸಿ ಚಂದಗಾಣಿಸುತ್ತಾರೆ. ಬಳಿಕ ವಿಶೇಷ ಚೇತನ ವಿದ್ಯಾರ್ಥಿಗಳೇ ಬಾಕ್ಸ್​ಗೆ ತುಂಬಿಸಿ ಪ್ಯಾಕ್ ಮಾಡುತ್ತಾರೆ. ಶಾಲೆಯಲ್ಲಿ ಇವರು ಸದಾ ಚಟುವಟಿಕೆಯಿಂದ ಇರಲು ಈ ರೀತಿಯ ಟಾಸ್ಕ್​ಗಳನ್ನು ನೀಡಲಾಗುತ್ತದೆ. ಈ ವಿಶೇಷ ಚೇತನ ವಿದ್ಯಾರ್ಥಿಗಳ ಹಣತೆಗಳಿಗೆ ಸ್ಥಳೀಯವಾಗಿ ಉತ್ತಮ ಬೇಡಿಕೆಯೂ ಇದೆ.

ಶಿಕ್ಷಕರ ಮಾರ್ಗದರ್ಶನದಲ್ಲಿ ಇವರು ಹಣತೆಗೆ ವಿಶೇಷ ಟಚ್ ನೀಡುತ್ತಿದ್ದಾರೆ. ಅಲ್ಲದೇ ಹೆಣ್ಣು ಮಕ್ಕಳು ಕ್ಯಾಂಡಲ್​ಗಳನ್ನು ತಯಾರಿಸುತ್ತಾರೆ.‌ ದೀಪಾವಳಿಗೆ ಗ್ರೀಟಿಂಗ್ ಕಾರ್ಡ್, ರಕ್ಷಾ ಬಂಧನಕ್ಕಾಗಿ ರಾಕಿಯನ್ನು ತಯಾರಿಸುತ್ತಾರೆ. ಆರಂಭದಲ್ಲಿ ಮಕ್ಕಳಿಗೆ ಮಣ್ಣಿನ ಹಣತೆಗಳನ್ನು ಮಾಡಿಸಲಾಗಿತ್ತು. ಆದರೆ, ಆಕಾರ ಸರಿಬಾರದಿದ್ದರಿಂದ ತುಂಬಾ ತಡವಾಗಿ ತಯಾರು ಮಾಡುತ್ತಿದ್ದರಿಂದ ಸದ್ಯ ಮಾರುಕಟ್ಟೆಯಿಂದಲೇ ಹಣತೆಗಳನ್ನು ಖರೀದಿಸಿ ಅವುಗಳಿಗೆ ಬಣ್ಣ ಬಳೆಯಲಾಗುತ್ತಿದೆ. ಈ ಬಾರಿ ಎರಡು ಸಾವಿರಕ್ಕೂ ಅಧಿಕ ಹಣತೆಗಳು ಮಾರಾಟವಾಗಿದ್ದು, ಮತ್ತಷ್ಟು ಹಣತೆಗಳಿಗೆ ಬೇಡಿಕೆಯಿದೆ.


Spread the love

About Laxminews 24x7

Check Also

ಶಾಸಕ ಕೆ.ಸಿ.ವೀರೇಂದ್ರ ಮತ್ತೆ 6 ದಿನ ಇ.ಡಿ ಕಸ್ಟಡಿಗೆ

Spread the love ಬೆಂಗಳೂರು: ಚಿತ್ರದುರ್ಗದ ಕಾಂಗ್ರೆಸ್ ಶಾಸಕ ಕೆ.ಸಿ.ವೀರೇಂದ್ರ (ಪಪ್ಪಿ) ಅವರ ಐದು ದಿನಗಳ ಪೊಲೀಸ್ ಕಸ್ಟಡಿ ಅಂತ್ಯವಾದ ಹಿನ್ನೆಲೆಯಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ