ಚಿಕ್ಕೋಡಿ : ಬಂಗಾರಪೇಟೆ ತಹಸೀಲ್ದಾರ್ ಬಿ.ಕೆ.ಚಂದ್ರಮೌಳೇಶ್ವರ ಹತ್ಯೆ ಹಿನ್ನೆಲೆ ಕಠಿಣ ಕಾನೂನು ರೂಪಿಸುವ ಮುಖಾಂತರ ಸರ್ಕಾರಿ ಅಧಿಕಾರಿಗಳು ಮತ್ತು ನೌಕರರಿಗೆ ರಕ್ಷಣೆ ನೀಡುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಚಿಕ್ಕೋಡಿ ತಾಲೂಕಾ ಘಟಕದಿಂದ ಶುಕ್ರವಾರ ತಹಸೀಲ್ದಾರ ಎಸ್.ಎಸ್.ಸಂಪಗಾಂವಿ ಅವರಿಗೆ ಮನವಿ ಸಲ್ಲಿಸಿದರು.
ಸರ್ವೇ ಕಾರ್ಯದಲ್ಲಿ ನಿರತರಾಗಿದ್ದಾಗ ಪೊಲೀಸರ ಸಮ್ಮುಖದಲ್ಲಿಯೇ ತಹಸೀಲ್ದಾರ್ ಗೆ ಚಾಕುವಿನಿಂದ ಇರಿದು ಹಲ್ಲೆ ಮಾಡಿರುವುದು ಖಂಡನಾರ್ಹ. ರಾಜ್ಯಾದ್ಯಂತ ಸರ್ಕಾರಿ ಅಧಿಕಾರಿಗಳು ಕರ್ತವ್ಯ ನಿರ್ವಹಿಸುವ ಸಂದರ್ಭದಲ್ಲಿ ಇಂತಹ ಘಟನೆಗಳು ಸಂಭವಿಸುತ್ತಿದ್ದು, ನೌಕರರು ಭಯದ ವಾತಾವರಣದಲ್ಲಿಯೇ ಕರ್ತವ್ಯ ನಿರ್ವಹಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ರಾಜ್ಯದಲ್ಲಿ ಸರ್ಕಾರಿ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ರಕ್ಷಣೆ ನೀಡುವ ನಿಟ್ಟಿನಲ್ಲಿ ಕಠಿಣ ಕಾನೂನು ಜಾರಿಯಲ್ಲಿ ತರುವಂತೆ ಒತ್ತಾಯಿಸಿದರು.
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕಾ ಅಧ್ಯಕ್ಷ ಎಸ್.ಎ.ಮೆಳವಂಕಿ, ಎಸ್.ಎನ್.ಬೆಳಗಾವಿ, ಸಿ.ಎ.ಪಾಟೀಲ, ದತ್ತಾ ಎನ್.ಕಾಂಬಳೆ, ಎ.ಸಿ.ಮುಲ್ಲಾ, ಎಸ್.ಎ.ಖಡ್ಡ, ಜಿ.ಎಂ.ಕಾಂಬಳೆ,ಮಂಜುನಾಥ ಜನಮಟ್ಟಿ, ಎಂ.ಎ.ಬಿರಾದಾರ, ಪ್ರಮೋದ ಮಾನೆ, ಅರುಣ ಸಂಗ್ರೋಳಿ, ಎ.ಬಿ.ಸೊಲ್ಲಾಪೂರೆ, ಶಿವಾನಂದ ಶಿರಗಾಂವೆ, ಬಿ.ಎ.ಕುಂಬಾರ, ಬಿ.ಎಸ್.ಹಂಜಿ, ಪ್ರದೀಪ ಬೋವಿ, ಸಿ.ಎ.ವಂಟಗೂಡೆ, ಎ.ಪಿ.ಗೋಟೂರೆ, ಸಂಜು ಕುಂದರಗಿ, ಎಫ್.ಕೆ.ಸುಂದರವಾಲೆ, ಸಂಜು ಅರಕೇರಿ, ಜಿ.ಜಿ.ಹವಾಲ್ದಾರ, ಕೆ.ಕೆ.ವಾಡಪ್ಪಗೋಳ, ಸ್ವಾಮಿ ಮುಂತಾದವರು ಉಪಸ್ಥಿತರಿದ್ದರು.