ಬೆಳಗಾವಿ: ಕನ್ನಡ ರಾಜ್ಯೋತ್ಸವ ಕಳೆಗಟ್ಟಿದೆ. ಕುಂದಾನಗರಿ ಬೆಳಗಾವಿಯಲ್ಲಿ ಸಂಭ್ರಮ ಜೋರಾಗಿದೆ.
ರಾಜ್ಯೋತ್ಸವಕ್ಕೆ ಟೀಶರ್ಟ್ಗಳ ಖರೀದಿ ಭರಾಟೆ ಹೆಚ್ಚಾಗಿದ್ದು, ಕನ್ನಡ ನಾಡು, ನುಡಿ ಕುರಿತು ಜಾಗೃತಿ ಜೊತೆ ಕನ್ನಡಾಭಿಮಾನ ಮೂಡಿಸುವ ಟೀಶರ್ಟ್ಗಳ ಖರೀದಿಗೆ ಕನ್ನಡಮ್ಮನ ಕಂದಮ್ಮಗಳು ಮುಗಿ ಬಿದ್ದಿದ್ದಾರೆ. ಬೆಳಗಾವಿಯಿಂದ ಲಂಡನ್ಗೂ ಟೀಶರ್ಟ್ ಕಳಿಸಿದ್ದು ವಿಶೇಷವಾಗಿದೆ.
ಇಡೀ ರಾಜ್ಯದಲ್ಲಿ ರಾಜ್ಯೋತ್ಸವ ಆಚರಣೆ ಒಂದೆಡೆಯಾದರೆ, ಗಡಿ ಜಿಲ್ಲೆ ಬೆಳಗಾವಿಯಲ್ಲಿ ಆಚರಿಸುವ ರಾಜ್ಯೋತ್ಸವ ತುಂಬಾ ವಿಶೇಷವಾಗಿಯೇ ಇರುತ್ತದೆ. ಅಷ್ಟೊಂದು ಸಂಭ್ರಮ, ಸಡಗರದಿಂದ ಇಲ್ಲಿ ರಾಜ್ಯೋತ್ಸವ ಆಚರಿಸಲಾಗುತ್ತದೆ. ಅಲ್ಲದೇ ರಾಜ್ಯೋತ್ಸವಕ್ಕೆ ಮೆರಗು ತರುವ ಕನ್ನಡ ಬರಹಗಳ ಟೀಶರ್ಟ್ಗಳು ಇಲ್ಲಿನ ರಾಣಿ ಚೆನ್ನಮ್ಮ ವೃತ್ತದ ಬಳಿಯ ಕನ್ನಡ ಸಾಹಿತ್ಯ ಭವನದಲ್ಲಿ ಗಮನ ಸೆಳೆಯುತ್ತಿವೆ.
ರಾಜ್ಯೋತ್ಸವ ಹಿನ್ನೆಲೆ ಟೀಶರ್ಟ್ ಧರಿಸಿದ ಯುವತಿಬೆಳಗಾವಿಯಿಂದ ಲಂಡನ್ಗೆ ಹೋದ ಟೀಶರ್ಟ್: “ಬೆಳಗಾವಿ ಪುಟ” ಫೇಸ್ಬುಕ್ ಪೇಜ್ ವತಿಯಿಂದ ಪ್ರತಿವರ್ಷವೂ ಆಕರ್ಷಕ ಬರಹಗಳ ಟೀಶರ್ಟ್ ಮಾರಾಟ ಮಾಡಲಾಗುತ್ತಿದೆ. ಈ ಬಾರಿ “ಲೇ ಬರಬ್ಯಾಡ್ರಿ ಬೆಳಗಾವಿ ಕೇಳಾಕ, ಇಲ್ಲಿ ಕನ್ನಡಿಗರು ಬಾಳ ಖಡಕ್” ಬರಹದ ಜೊತೆಗೆ ಕನ್ನಡ ಕುಲ ತಿಲಕ, ಚಾಲುಕ್ಯ ಚಕ್ರವರ್ತಿ ಇಮ್ಮಡಿ ಪುಲಿಕೇಶಿ ಅವರ ಭಾವಚಿತ್ರ ಇರುವ ಬಿಳಿ ಟೀಶರ್ಟ್ ಗಮನ ಸೆಳೆಯುತ್ತಿದೆ. ಈ ಟೀಶರ್ಟ್ಗಳ ಖರೀದಿಗೆ ಯುವಕರು ನಾ ಮುಂದು, ತಾ ಮುಂದು ಎನ್ನುತ್ತಿದ್ದಾರೆ. ಈ ಹಿಂದೆ “ಯಾರಪ್ಪಂದ ಏನೈತಿ, ಬೆಳಗಾವಿ ನಮ್ಮದೈತಿ”, “ಅಪ್ಪು ಗತ್ತು ದೇಶಕ್ಕೆ ಗೊತ್ತು” ಎಂಬ ಬರಹದ ಟೀಶರ್ಟ್ಗಳು ರಾಜ್ಯೋತ್ಸವಕ್ಕೆ ಸದ್ದು ಮಾಡಿದ್ದವು. ಬೆಳಗಾವಿ ಪುಟದಿಂದ ಈ ಸಲ ಎರಡು ಟೀಶರ್ಟ್ ಸಪ್ತಸಾಗರದಾಚೆ ದಾಟಿ ಲಂಡನ್ಗೂ ಕಳಿಸಲಾಗಿದೆ. ವಿಮಾನದ ಮೂಲಕ ಬೆಂಗಳೂರಿನಿಂದ ನೇರವಾಗಿ ಲಂಡನ್ಗೆ ಈ ಟೀಶರ್ಟ್ ಕಳಿಸಲಾಗಿದೆ.
Laxmi News 24×7