Breaking News

ದೇಶದಲ್ಲಿ ಈರುಳ್ಳಿ ದರ ಹೇಗಿದೆ?: ಬೆಲೆ ಏರಿಕೆ ವದಂತಿಗೆ ಕೇಂದ್ರ ಸರ್ಕಾರದಿಂದ ಅಂಕಿಅಂಶ ಬಿಡುಗಡೆ

Spread the love

ನವದೆಹಲಿ: ದೇಶದಲ್ಲಿ ಈರುಳ್ಳಿ ಬೆಲೆ ಏರಿಕೆಯಾಗಿದೆ ಎಂಬ ವದಂತಿಯ ಮಧ್ಯೆ ಸಗಟು ಮತ್ತು ಚಿಲ್ಲರೆ ಮಾರುಕಟ್ಟೆಯಲ್ಲಿನ ದರಗಳ ಅಂಕಿಅಂಶವನ್ನು ಕೇಂದ್ರ ಸರ್ಕಾರ ಸೋಮವಾರ ನೀಡಿದೆ.

ದೆಹಲಿಯಲ್ಲಿ ಈರುಳ್ಳಿ ಬೆಲೆ ಕೆಜಿಗೆ 78 ರೂಪಾಯಿ ಇದ್ದು, ಅತ್ಯಧಿಕವಾಗಿದ್ದರೆ, ದೇಶದ ವಿವಿಧೆಡೆ 50.35 ಪೈಸೆಯಷ್ಟು ಬಿಕರಿಯಾಗುತ್ತಿದೆ ಎಂದು ತಿಳಿಸಿದೆ.

ದೆಹಲಿಯಲ್ಲಿ ಸೋಮವಾರ ಈರುಳ್ಳಿ ಬೆಲೆ ಗರಿಷ್ಠ ಮಟ್ಟದಲ್ಲಿಯೇ ಇತ್ತು. ಇಲ್ಲಿನ ಚಿಲ್ಲರೆ ಮಾರುಕಟ್ಟೆಯಲ್ಲಿ ಪ್ರತಿ ಕೆಜಿಗೆ ಸರಾಸರಿ 78 ರೂ. ಮಾರಾಟವಾಗಿದೆ. ದೇಶದಲ್ಲಿ ಸರಾಸರಿ ಬೆಲೆ ಕೆಜಿಗೆ 50.35 ರೂ.ಗಳಷ್ಟಿದ್ದರೆ, ಗರಿಷ್ಠ ದರ ಕೆಜಿಗೆ 83 ರೂ. ಇದೆ. ಅಂದಾಜು ಬೆಲೆ ಕೆಜಿಗೆ 60 ರೂ. ಇದೆ ಎಂದು ಗ್ರಾಹಕ ವ್ಯವಹಾರಗಳ ಇಲಾಖೆ ಮಾಹಿತಿ ನೀಡಿದೆ.

ದೇಶದ ಹಲವೆಡೆ ಈರುಳ್ಳಿಗೆ ಕನಿಷ್ಠ ದರ ಕೆಜಿಗೆ 17 ರೂ. ಇದೆ. ಇ-ಕಾಮರ್ಸ್ ಪೋರ್ಟಲ್‌ಗಳಾದ ಬಿಗ್‌ಬಾಸ್ಕೆಟ್ ಮತ್ತು ಒಟಿಪಿಯಲ್ಲಿ ಕೆಜಿಗೆ 75 ರೂಪಾಯಿ ಮಾರಾಟಕ್ಕಿದೆ. ಸ್ಥಳೀಯ ಮಾರಾಟಗಾರರು ಈರುಳ್ಳಿಯನ್ನು ಕೆಜಿಗೆ 80 ರೂ.ಗೆ ಮಾರಾಟ ಮಾಡುತ್ತಿದ್ದಾರೆ ಎನ್ನುತ್ತಿದೆ ಅಂಕಿಅಂಶ.

ಈರುಳ್ಳಿ ರಫ್ತು ದರ ಹೆಚ್ಚಳ: ದೇಶೀಯ ಮಾರುಕಟ್ಟೆಯಲ್ಲಿ ತರಕಾರಿ ಲಭ್ಯತೆಯನ್ನು ಹೆಚ್ಚಿಸಲು ಮತ್ತು ಬೆಲೆ ಏರಿಕೆಯನ್ನು ತಡೆಯಲು ಕೇಂದ್ರ ಸರ್ಕಾರ ಶನಿವಾರದಿಂದ ಅನ್ವಯವಾಗುವಂತೆ ವಿದೇಶಗಳಿಗೆ ರಫ್ತಾಗುವ ಪ್ರತಿ ಟನ್​ ಈರುಳ್ಳಿಯ ಮೇಲೆ 800 ಅಮೆರಿಕನ್​ ಡಾಲರ್​ (66 ಸಾವಿರ ರೂಪಾಯಿ) ಕನಿಷ್ಠ ರಫ್ತು ಬೆಲೆಯನ್ನು (ಎಂಇಪಿ) ವಿಧಿಸಿದೆ. ಇದು ಈ ವರ್ಷದ ಡಿಸೆಂಬರ್​ 31 ರವರೆಗೆ ಜಾರಿ ಇರಲಿದೆ.

ಅಂದರೆ, ಎಂಇಪಿ ಹೆಚ್ಚಳದಿಂದಾಗಿ ಪ್ರತಿ ಕೆಜಿ ಈರುಳ್ಳಿಗೆ 67 ರೂಪಾಯಿ ಬೀಳಲಿದೆ. ಬೆಂಗಳೂರಿನ ರೋಸ್ ಮತ್ತು ಕೃಷ್ಣಾಪುರದ ಈರುಳ್ಳಿ ಹೊರತುಪಡಿಸಿ ಎಲ್ಲಾ ಬಗೆಯ ಈರುಳ್ಳಿಗಳಿಗೆ ಈ ಎಂಇಪಿ ಅನ್ವಯವಾಗಲಿದೆ. ಅದು ಕತ್ತರಿಸಿದ, ಹೋಳುಗಳು ಅಥವಾ ಪುಡಿ ಮಾಡಿದ ಈರುಳ್ಳಿಯೂ MEP ಅಡಿಯಲ್ಲಿ ಬರುತ್ತದೆ. ದೇಶದಲ್ಲಿ ಈರುಳ್ಳಿ ಕೊರತೆ ಕಾಣಿಸದಿರಲು ಕೇಂದ್ರ ಸರ್ಕಾರ ಈಗಾಗಲೇ 5 ಲಕ್ಷ ಟನ್​ ಸಂಗ್ರಹಿಸಿದೆ. ಹೆಚ್ಚುವರಿಯಾಗಿ 2 ಲಕ್ಷ ಟನ್​ ಆನಿಯನ್​ ಅನ್ನು ಈ ವರ್ಷ ಸಂಗ್ರಹಿಸುವುದಾಗಿ ಘೋಷಿಸಿದೆ.


Spread the love

About Laxminews 24x7

Check Also

ವರದಕ್ಷಿಣೆ ಕಿರುಕುಳ ಆರೋಪ, ಐಎಸ್‌ಡಿ ಡಿವೈಎಸ್‌ಪಿ ವಿರುದ್ಧ ಎಫ್ಐಆರ್

Spread the love ಬೆಂಗಳೂರು : ಡಿವೈಎಸ್‌ಪಿಯೊಬ್ಬರ ವಿರುದ್ಧ ಪತ್ನಿಗೆ ವರದಕ್ಷಿಣೆ ಕಿರುಕುಳ ನೀಡಿದ ಆರೋಪ ಕೇಳಿ ಬಂದಿದೆ. 41 ವರ್ಷದ ಮಹಿಳೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ