Breaking News

ಕೆಂಪು ಬಣ್ಣದ ಲ್ಯಾಂಬೋರ್ಗಿನಿ ಕಾರು ಖರೀದಿಸಿದ ನಟಿ ಶ್ರದ್ಧಾ ಕಪೂರ್​.. ಬೆಲೆ ಎಷ್ಟು ಗೊತ್ತಾ ?

Spread the love

ಮುಂಬೈ : ನಟಿ ಶ್ರದ್ಧಾ ಕಪೂರ್​ ಬಾಲಿವುಡ್​ನ ಬಹುಬೇಡಿಕೆಯ ನಟಿ. ತನ್ನ ಅಮೋಘ ನಟನೆ ಮೂಲಕ ಅಪಾರ ಅಭಿಮಾನಿಗಳನ್ನು ಗಳಿಸಿದ್ದಾರೆ. ಈ ನವರಾತ್ರಿ ಶುಭ ಸಂದರ್ಭದಲ್ಲಿ ಶ್ರದ್ಧಾ ಕಪೂರ್​ ತಮ್ಮ ಸಂತಸ ಇಮ್ಮಡಿಗೊಳಿಸಿದ್ದಾರೆ.

ಬಾಲಿವುಡ್​ ನಟರಲ್ಲಿ ಹಲವರು ದುಬಾರಿ ಬೆಲೆಯ ಐಷಾರಾಮಿ ಕಾರುಗಳನ್ನು ಹೊಂದಿದ್ದಾರೆ. ಬಾಲಿವುಡ್​ ಬಾದ್​ ಶಾ ಶಾರುಖ್​ ಖಾನ್, ಸಲ್ಮಾನ್​ ಖಾನ್​, ಅಕ್ಷಯ ಕುಮಾರ್​ ಸೇರಿದಂತೆ ಹಲವು ನಟರಲ್ಲಿ ಐಷಾರಾಮಿ ಕಾರುಗಳಿವೆ. ಜೊತೆಗೆ ಕೆಲವೇ ಕೆಲವು ಬಾಲಿವುಡ್​ ನಟಿಯರು ಕೋಟಿ ಬೆಲೆ ಬಾಳುವ ಐಷಾರಾಮಿ ಕಾರು ಹೊಂದಿದ್ದಾರೆ. ಇವರ ಸಾಲಿಗೆ ಇದೀಗ ಶ್ರದ್ಧಾ ಕಪೂರ್​ ಸೇರ್ಪಡೆ ಆಗಿದ್ದಾರೆ.

 

 

4 ಕೋಟಿ ಮೌಲ್ಯದ ಲ್ಯಾಂಬೋರ್ಗಿನಿ ಖರೀದಿಸಿದ ಶ್ರದ್ಧಾ: ಶ್ರದ್ಧಾ ಕಪೂರ್​ಗೆ ಕಾರುಗಳೆಂದರೆ ಅಚ್ಚುಮೆಚ್ಚು. ಈಗಾಗಲೇ ಅವರು ಕೆಲವು ಐಷಾರಾಮಿ ಕಾರುಗಳನ್ನು ಹೊಂದಿದ್ದಾರೆ. ಈ ಕಾರುಗಳ ಪಟ್ಟಿಗೆ ಲ್ಯಾಂಬೋರ್ಗಿನಿ ಹುರಾಕನ್​ ಟೆಕ್ನಿಕಾ ಕಾರು ಸೇರ್ಪಡೆಯಾಗಿದೆ. ಇದರ ಬೆಲೆ 4.04 ಕೋಟಿ ರೂ ಎಂದು ಹೇಳಲಾಗಿದೆ. ನವರಾತ್ರಿಯಂದೇ ಕೆಂಪು ಬಣ್ಣದಲ್ಲಿ ಕಂಗೊಳಿಸುವ ಕಾರನ್ನು ಖರೀದಿಸುವ ಮೂಲಕ ಶ್ರದ್ಧಾ ತಮ್ಮ ಹಬ್ಬದ ಸಂಭ್ರಮವನ್ನು ಹೆಚ್ಚಿಸಿಕೊಂಡಿದ್ದಾರೆ. ಲ್ಯಾಂಬೋರ್ಗಿನಿ ಕಾರಿನೊಂದಿಗಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ.

 

ಶ್ರದ್ಧಾ ಅವರ ಗೆಳತಿ ಕಾರಿನೊಂದಿಗೆ ಇರುವ ಚಿತ್ರವನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇದರಲ್ಲಿ ಶ್ರದ್ಧಾ ಅವರು ಬಿಳಿ ಮತ್ತು ತಿಳಿ ಪಿಂಕ್​ ಬಣ್ಣದ ಉಡುಪು ಧರಿಸಿದ್ದಾರೆ. ಶ್ರದ್ಧಾ ಕಪೂರ್​ ಸ್ನೇಹಿತೆ ಹಂಚಿಕೊಂಡಿರುವ ಇನ್​ಸ್ಟಾಗ್ರಾಮ್​ ಪೋಸ್ಟ್​ನಲ್ಲಿ, ಇಂದು ನನಗೆ ನಿಜವಾಗಿಯೂ ವಿಶೇಷ ಕ್ಷಣವಾಗಿದೆ. ಪ್ರತಿಭಾವಂತ ನಟಿ ಶ್ರದ್ಧಾ ಕಪೂರ್‌ಗೆ ನಾವು ಹುರಾಕನ್ ಟೆಕ್ನಿಕಾವನ್ನು ನೀಡುತ್ತಿದ್ದೇವೆ. ಈ ವೇಳೆ. ನಾನು ನನ್ನ ಕಂಪನಿಯೊಂದಿಗೆ ಪ್ರಯಾಣವನ್ನು ನೆನಪಿಸಿಕೊಳ್ಳುತ್ತಿದ್ದೇನೆ. ಈ ದಿನ ನನಗೆ ವಿಶೇಷ ಏಕೆಂದರೆ ನಾವು ಶ್ರದ್ಧಾ ಕಪೂರ್ ಅವರಿಗೆ ಲ್ಯಾಂಬೋರ್ಗಿನಿ ಮಾರಾಟ ಮಾಡಿದ್ದೇವೆ. ಸೂಪರ್‌ಕಾರ್ ಎಂದಿಗೂ ಕೇವಲ ಕಾರಲ್ಲ – ಇದು ಅಡೆತಡೆಗಳನ್ನು ಮುರಿಯುವ ಮತ್ತು ನಿಮ್ಮ ಕನಸುಗಳನ್ನು ನಿರ್ಭಯವಾಗಿ ಬದುಕುವ ಸಂಕೇತವಾಗಿದೆ ಎಂದು ಬರೆದಿದ್ದಾರೆ. ಇದಕ್ಕೆ ”ನಿಮ್ಮ ಮಾತುಗಳಿಗೆ ಧನ್ಯವಾದಗಳು” ಎಂದು ಶ್ರದ್ಧಾ ಕಪೂರ್ ​ಪ್ರತಿಕ್ರಿಯಿಸಿದ್ದಾರೆ.

 

ಸಿನೆಮಾ ವಿಚಾರವಾಗಿ, ಶ್ರದ್ಧಾ ಅವರು ‘ತೂ ಜೂಥಿ ಮೈನ್ ಮಕ್ಕರ್’ ಸಿನೆಮಾದಲ್ಲಿ ನಟಿಸಿದ್ದಾರೆ. ಲವ್ ರಂಜನ್ ಅವರ ಈ ಸಿನೆಮಾದಲ್ಲಿ ಶ್ರದ್ಧಾ ಮತ್ತು ರಣಬೀರ್ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ಜೊತೆಗೆ ಅನುಭವ್ ಸಿಂಗ್ ಬಸ್ಸಿ, ಡಿಂಪಲ್ ಕಪಾಡಿಯಾ ಮತ್ತು ಬೋನಿ ಕಪೂರ್ ಕೂಡ ನಟಿಸಿದ್ದಾರೆ. ಸದ್ಯ ಅಮರ್ ಕೌಶಿಕ್ ಅವರ ‘ಸ್ತ್ರೀ 2’ ಚಿತ್ರೀಕರಣದಲ್ಲಿ ಶ್ರದ್ಧಾ ತೊಡಗಿದ್ದು, ಇದರಲ್ಲಿ ರಾಜ್‌ಕುಮಾರ್ ರಾವ್ ಮತ್ತು ಪಂಕಜ್ ತ್ರಿಪಾಠಿ ಕೂಡ ನಟಿಸಲಿದ್ದಾರೆ.


Spread the love

About Laxminews 24x7

Check Also

ಜನರಲ್ಲಿ ವೈಚಾರಿಕತೆ, ವೈಜ್ಞಾನಿಕತೆ ಬೆಳೆಯದಿದ್ದರೆ, ಕೇವಲ ಮೌಢ್ಯ ನಿಷೇಧ ಕಾನೂನಿನ ಮೂಲಕ ನಿರೀಕ್ಷಿತ ಬದಲಾವಣೆ ಸಾಧ್ಯವಿಲ್ಲ ಎಂದ ಸಿಎಂ

Spread the loveಬೆಂಗಳೂರು: ”ದ್ವಿಭಾಷಾ ಸೂತ್ರ ನನ್ನ ಅಭಿಪ್ರಾಯವಾಗಿದೆ. ಅದನ್ನು ಸರ್ಕಾರದ ಅಭಿಪ್ರಾಯ ಮಾಡುವ ದಿಕ್ಕಿನಲ್ಲಿ ಪ್ರಯತ್ನಿಸುತ್ತೇನೆ” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ