Breaking News

ಕಸಾಪ ತಾಲ್ಲೂಕಾಧ್ಯಕ್ಷ ಸುರೇಶ ಸಿದ್ದಪ್ಪಾ ಹಂಜಿ ಅವರಿಗೆ ಸತ್ಕಾರ

Spread the love

ಬೆಳಗಾವಿ : ಬೆಳಗಾವಿ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾದ ಸುರೇಶ ಸಿದ್ದಪ್ಪಾ ಹಂಜಿ ಅವರು ಸಾಮಾಜಿಕ ಶೈಕ್ಷಣಿಕ ಸಾಂಸ್ಕೃತಿಕ ರಂಗಗಳಲ್ಲಿ ಮಾಡಿರುವ ಅಮೋಘ ಸೇವೆಯನ್ನು ಗುರುತಿಸಿ É ಆತ್ಮಶ್ರೀ ಸಾಂಸ್ಕೃತಿಕ ಪ್ರತಿಷ್ಠಾನ ದ ವತಿಯಿಂದ ಕೊಡಮಾಡುವ ರಾಷ್ಟ್ರೀಯ ಸಮಾಜ ಸೇವಾ ರತ್ನ ಪ್ರಶಸ್ತಿ ಲಭಿಸಿರುವ ಕಾರಣ ಬೆಳಗಾವಿ ತಾಲೂಕಿನ ನಿಂಗೆನಟ್ಟಿ ಗ್ರಾಮದ ಮಾಜಿ ತಾಲೂಕು ಪಂಚಾಯತ್ ಸದಸ್ಯರಾದ ಭೀಮರಾವ್ ಧನಪ್ಪಾ ನಾಯ್ಕ ಹಾಗೂ ಬಂಬರಗೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರು ಹಾಗೂ ಹಾಲಿ ಸದಸ್ಯರಾದ ರಾಮಕ್ಕಾ ಭೀಮರಾವ್ ನಾಯ್ಕ ಇವರು ತಮ್ಮ ಗೆಳೆಯರ ಬಳಗದೊಂದಿಗೆ ಶಿವಾಪೂರ ಗ್ರಾಮಕ್ಕೆ ಆಗಮಿಸಿ ಸುರೇಶ ಸಿ ಹಂಜಿ ಹಾಗೂ ಶ್ರೀಮತಿ ಬಾಳಮ್ಮ ಸುರೇಶ ಹಂಜಿ ದಂಪತಿಗಳನ್ನು ಸನ್ಮಾನಿಸಿ ಗೌರವಿಸಿದರು.

 

ಈ ಕಾರ್ಯಕ್ರಮದಲ್ಲಿ ಮಾರುತಿ ಮಗದುಮ್ ಗುತ್ತಿಗೆದಾರರು, ಶ್ರೀಕಾಂತ್ ಸ ಕಲ್ಲೂರಿ ಅಧ್ಯಕ್ಷರು ಪಿಕೆಪಿಎಸ್ ಹೊಸ ಇದ್ದಲಹೊಂಡ, ಸಂಜು ಶಿ ಕಲ್ಲೂರಿ ಗ್ರಾಮ ಪಂಚಾಯತ್ ಸದಸ್ಯರು ಹೊಸ ಇದ್ದಲಹೊಂq, ಮಾರುತಿ ತಳವಾರ ಕಲ್ಲಯ್ಯಾ ಹಿರೇಮಠ, ದತ್ತು ನಿಂ ಕಾಂಬಳೆ, ಬರಮಾ ಬಾ ಜಂಜಿ, ಅಡಿವೆಪ್ಪ ಬಂ ರಾಮನಕಟ್ಟಿ, ಗಣಪತಿ ಬಾ ಹಂಜಿ, ಕೆಂಪಣ್ಣ ಬ ಕಮತಿ ಶ್ರೀಮತಿ ಜಯಶ್ರೀ ಮಾರುತಿ ಲಾಡಿ ಹಾಗೂ ಶ್ರೀಮತಿ ಪ್ರೇಮಾ ನಿಂಗಪ್ಪ ಬಂಗಾರಿ ಉಪಸ್ಥಿತರಿದ್ದರು.

 

 

 

ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ತಾಲೂಕು ಪಂಚಾಯತ್ ಸದಸ್ಯರಾದ ಭೀಮರಾವ್ ಧನಪ್ಪಾ ನಾಯ್ಕ ಅವರು ‘ಸುರೇಶ ಸಿದ್ದಪ್ಪಾ ಹಂಜಿ ಅವರು ಕನ್ನಡ ನಾಡು ನುಡಿ ನೆಲ ಜಲ ಭಾಷೆ ಸಾಹಿತ್ಯದ ಬಗ್ಗೆ ಹಗಲಿರುಳು ದುಡಿದು ಗಡಿ ಭಾಗದ ಎಲ್ಲಾ ಶಾಲೆಗಳಲ್ಲಿ ಮಕ್ಕಳಿಗೆ ಕನ್ನಡ ನಾಡು ನುಡಿ ನೆಲ ಜಲ ಭಾಷೆ ಯ ಬಗ್ಗೆ ಅರಿವು ಮೂಡಿಸುವ ಕೆಲಸ ನಿರಂತರವಾಗಿ ನಡೆಸುತ್ತಿದ್ದಾರೆ, ಕಸಾಪ ತಾಲ್ಲೂಕಾ ಅಧ್ಯಕ್ಷರಾಗಿ ಬೆಳಗಾವಿಯ ಎಲ್ಲಾ ಕಾಲೇಜುಗಳಲ್ಲಿ ಕನ್ನಡ ಸಾಹಿತ್ಯ ಸಂಸ್ಕೃತಿಯ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವ ಕೆಲಸ ನಿರಂತರವಾಗಿ ನಡೆಸುತ್ತಿದ್ದಾರೆ. ಆದ್ದರಿಂದ ಇವರಿಗೆ ರಾಷ್ಟ್ರೀಯ ಸಮಾಜ ಸೇವಾ ರತ್ನ ಪ್ರಶಸ್ತಿ ಸಿಕ್ಕಿರುವುದು ನಮ್ಮ ಬೆಳಗಾವಿ ಜಿಲ್ಲೆಗೆ ಹೆಮ್ಮೆಯ ವಿಷಯವಾಗಿದೆ. ಅವರಿಗೆ ಇನ್ನೂ ಹೆಚ್ಚಿನ ಯಶಸ್ಸು ಲಭಿಸಲಿ’ ಎಂದು ಹಾರೈಸಿದರು.


Spread the love

About Laxminews 24x7

Check Also

ಅಥಣಿ ನಗರದ ಪ್ರವಾಸಿ ಮಂದಿರದಲ್ಲಿ ಇಂದು ಸಾರ್ವಜನಿಕರ ಅಹವಾಲು ಆಲಿಸಿ, ಅವರ ಸಮಸ್ಯೆಗಳಿಗೆ ಸೂಕ್ತ ಪರಿಹಾರ

Spread the love ಅಥಣಿ ನಗರದ ಪ್ರವಾಸಿ ಮಂದಿರದಲ್ಲಿ ಇಂದು ಸಾರ್ವಜನಿಕರ ಅಹವಾಲು ಆಲಿಸಿ, ಅವರ ಸಮಸ್ಯೆಗಳಿಗೆ ಸೂಕ್ತ ಪರಿಹಾರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ