ಚಿಕ್ಕೋಡಿ (ಬೆಳಗಾವಿ) : ನನ್ನನ್ನು ಅಜ್ಜ ಎಂದು ಕರೆಯುದಕ್ಕೆ ಬೇಸರ ಇದೆ. ನನ್ನ ತಲೆ ಕೂದಲು ಮಾತ್ರ ಬೆಳ್ಳಗಾಗಿವೆ. ಆದರೆ ನಾನು ಇನ್ನೂ ಯುವಕರಂತೆ ಹುಮ್ಮಸ್ಸಿನಿಂದ ಇದ್ದೇನೆ. ಈ ವಯಸ್ಸಿನಲ್ಲಿ ನಾನು ಇಷ್ಟು ಹುಮ್ಮಸ್ಸಿನಿಂದಿರುವುದನ್ನು ಈಗಿನ ಯುವಕರು ನನ್ನನ್ನು ನೋಡಿ ಕಲಿಯಬೇಕು ಎಂದು ಶಾಸಕ ರಾಜು ಕಾಗೆ ಹೇಳಿದರು.
ಶನಿವಾರ ದಸರಾ ಹಬ್ಬದ ಪ್ರಯುಕ್ತ ಅಥಣಿ ತಾಲೂಕಿನ ಪಿಕೆ ನಾಗನೂರು ಗ್ರಾಮದಲ್ಲಿ ರಸಮಂಜರಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಸಭೆಯಲ್ಲಿ ಶಾಸಕ ರಾಜೇಶ್ ಕಾಗೆ ಅವರು ಭಾಗವಹಿಸಿದ್ದರು. ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಈ ಹಿಂದೆ ನನಗೆ ಅಪೆಂಡಿಕ್ಸ್ ಆಪರೇಷನ್ ಆಗಿತ್ತು. ವೈದ್ಯರು ಆಗಾಗ ಬಂದು ನನ್ನ ಆರೋಗ್ಯವನ್ನು ವಿಚಾರಿಸುತ್ತಿದ್ದರು. ಅದೇ ಆಸ್ಪತ್ರೆಯಲ್ಲಿ ಚೆಂದ ಚೆಂದದ ನರ್ಸ್ಗಳು ಅಜ್ಜ ನಿಮ್ಮ ಆರೋಗ್ಯ ಹೇಗಿದೆ ಎಂದು ಆರೋಗ್ಯ ವಿಚಾರಿಸುತ್ತಿದ್ದರು. ಚೆಂದದ ಹುಡುಗಿಯರು ನನ್ನನ್ನು ಅಜ್ಜ ಅನ್ನುತ್ತಿದ್ದರು. ನಾನು ಆರಾಮಾಗಿದ್ದರೂ ನರ್ಸ್ಗಳು ನನ್ನನ್ನು ಅಜ್ಜ ಅನ್ನುವುದಕ್ಕೆ ಮಾನಸಿಕವಾಗಿದ್ದೆ ಎಂದು ಹೇಳಿದರು.
ವಿಧಾನಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಶಾಸಕ ರಾಜು ಕಾಗೆ ಹಿರಿಯರು ಎಂದು ಭಾಷಣದಲ್ಲಿ ಉಲ್ಲೇಖಿಸಿದ್ದಕ್ಕೆ ಕಾಗವಾಡ ಶಾಸಕ ರಾಜು ಕಾಗೆ ಈ ಆಸ್ಪತ್ರೆಯ ಉದಾಹರಣೆ ನೀಡಿ ನೆರೆದವರನ್ನು ನಗೆಗಡಲಲ್ಲಿ ತೇಲಿಸಿದರು.
Laxmi News 24×7