Breaking News

ಲಕ್ಷ್ಮೀ ಹೆಬ್ಬಾಳ್ಕರ್ ಪತ್ರದ ಮೂಲಕ ಡಿಡಿಪಿಐ ಹುದ್ದೆ ಪಡೆದಿದ್ದ ಅಧಿಕಾರಿ ಲೋಕಾಯುಕ್ತ ಬಲೆಗೆ

Spread the love

ಲಕ್ಷ್ಮೀ ಹೆಬ್ಬಾಳ್ಕರ್ ಪತ್ರದ ಮೂಲಕ ಡಿಡಿಪಿಐ ಹುದ್ದೆ ಪಡೆದಿದ್ದ ಅಧಿಕಾರಿ ಲೋಕಾಯುಕ್ತ ಬಲೆಗೆ

 

 

ಬೆಳಗಾವಿ, ಅ.20: ಭ್ರಷ್ಟ ಅಧಿಕಾರಿಗಳಿಗೆ ಬಿಸಿ ಮುಟ್ಟಿಸುವ ಕೆಲಸವನ್ನುಲೋಕಾಯುಕ್ತ (Lokayukta)ಅಧಿಕಾರಿಗಳು ಮುಂದುವರಿಸಿದ್ದಾರೆ. ಪರವಾನಗಿ ನವೀಕರಣ ಮಾಡಿಕೊಡಲು 40 ಸಾವಿರ ರೂಪಾಯಿ ಲಂಚ ಸ್ವೀಕರಿಸುತ್ತಿದ್ದಾಗ ಬೆಳಗಾವಿ ಡಿಡಿಪಿಐ ಬಸವರಾಜ್​ ನಾಲತವಾಡ ಅವರು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.

ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ ತುರುಮುರಿ ಗ್ರಾಮದಲ್ಲಿರುವ ಬಸವೇಶ್ವರ ಶಿಕ್ಷಣ ಸಂಸ್ಥೆಯ ಪರವಾನಿಗೆ ನವೀಕರಣ ಮಾಡಿಕೊಡಲು ಡಿಡಿಪಿಐ ಬಸವರಾಜ್​ ನಾಲತವಾಡ ಅವರು 40 ಸಾವಿರ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ.

 

ಈ ಬಗ್ಗೆ ಡಿಡಿಪಿಐ ವಿರುದ್ಧ ಶಾಲೆ ಮುಖ್ಯಸ್ಥ ಅರ್ಜುನ ಕುರಿ ಅವರು ಲೋಕಾಯುಕ್ತಕ್ಕೆ ದೂರು ನೀಡಿದ್ದರು. ಅದರಂತೆ ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಪೊಲೀಸರು ಟ್ರ್ಯಾಪ್ ನಡೆಸಿ ಬಸವರಾಜ್​ ನಾಲತವಾಡ ಅವರನ್ನು ಲಂಚದ ಹಣದ ಸಹಿತ ವಶಕ್ಕೆ ಪಡೆದಿದ್ದಾರೆ.

ಸತೀಶ್ ಜಾರಕಿಹೊಳಿ ವಿರೋಧದ ನಡುವೆ ಪೋಸ್ಟಿಂಗ್

ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ (Satish Jarkiholi) ವಿರೋಧದ ನಡುವೆ ಬಸವರಾಜ್​ ನಾಲತವಾಡ ಅವರು ಪೋಸ್ಟಿಂಗ್ ಪಡೆದುಕೊಂಡು ಬಂದಿದ್ದರು. ನೇಮಕವಾಗಿದ್ದ ಬಸವರಾಜ. ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ (Lakshmi Hebbalkar) ಪತ್ರ ಪಡೆದು ಡಿಡಿಪಿಐ ಹುದ್ದೆಗೆ ಆದೇಶ ಮಾಡಿಕೊಂಡಿದ್ದರು.

ಇದಾದ ಬಳಿಕ ಬಸವರಾಜ ನಾಲತವಾಡ ಮತ್ತೊಮ್ಮೆ ವರ್ಗಾವಣೆ ಆಗಿದ್ದರು. ಸತೀಶ್ ಜಾರಕಿಹೊಳಿ ಪತ್ರದ ಮೇಲೆ ಡಿಡಿಪಿಐ ಆಗಿ ಪುಂಡಲೀಕ ನೇಮಕ ಆಗಿದ್ದರು. ಇದನ್ನು ಪ್ರಶ್ನಿಸಿ ಕೆಎಟಿಗೆ ಹೋಗಿದ್ದರು. ನ್ಯಾಯಾಲಯದ ಆದೇಶದಂತೆ ಪುನಃ ಡಿಡಿಪಿಐ ಆಗಿ ಬಸವರಾಜ ಅವರು ಅಧಿಕಾರ ವಹಿಸಿಕೊಂಡಿದ್ದರು. ಹೀಗೆ ಎರಡ್ಮೂರು ಬಾರಿ ವರ್ಗಾವಣೆ ಆಗಿ ಬಂದ ಮೇಲೆ ಇಂದು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.


Spread the love

About Laxminews 24x7

Check Also

ಮೃತ ಸರ್ಕಾರಿ ವೈದ್ಯಾಧಿಕಾರಿ ಕೊಠಡಿಯಲ್ಲಿ ಮಾಟಮಂತ್ರ: ಸಾವಿನ ಸುತ್ತ ಅನುಮಾನದ ಹುತ್ತ

Spread the loveಕೋಲಾರ, ಜುಲೈ 07: ಜಿಲ್ಲೆ ಮಾಲೂರು ತಾಲ್ಲೂಕಿನ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ವಸಂತ್ ಕುಮಾರ್ ಅವರು ತಮ್ಮ ಉತ್ತಮ ಸೇವೆಯಿಂದಲೇ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ