Breaking News

ಮಹಾರಾಷ್ಟ್ರದಲ್ಲಿ ಜೋರಾದ ಮರಾಠಾ ಮೀಸಲಾತಿ ಹೋರಾಟ

Spread the love

ಮುಂಬೈ (ಮಹಾರಾಷ್ಟ್ರ): ಮಹಾರಾಷ್ಟ್ರದಲ್ಲಿ ಮರಾಠಾ ಮೀಸಲಾತಿ ಬೇಡಿಕೆ ಜೋರಾಗಿದೆ. ಇದರ ನಡುವೆ ಮುಂಬೈನಲ್ಲಿ ಮೀಸಲಾತಿಗೆ ಒತ್ತಾಯಿಸಿ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣ ಬೆಳಕಿಗೆ.

ಜಲ್ನಾ ಜಿಲ್ಲೆಯ ಚಿಕಂಗಾವ್ ಮೂಲದ ಸುನೀಲ್​ ಬಾಬುರಾವ್ ಕಾವ್ಲೆ ಮೃತ ಎಂದು ಗುರುತಿಸಲಾಗಿದೆ.

ಮರಾಠಾ ಮೀಸಲಾತಿಗಾಗಿ ಕೆಲ ದಿನಗಳ ಹಿಂದೆ 150 ಎಕರೆ ಜಾಗದಲ್ಲಿ ಲಕ್ಷಾಂತರ ಜನರನ್ನು ಸೇರಿಸಿ ಸಮಾವೇಶಗೊಂಡಿದ್ದ ಹೋರಾಟಗಾರ ಮನೋಜ್ ಜಾರಂಗೆ ಪಾಟೀಲ್ ಬುಧವಾರದಿಂದ ಮುಂಬೈ ಪ್ರವಾಸದಲ್ಲಿದ್ದಾರೆ. ಇಂದು ನವಿ ಮುಂಬೈ ಸೇರಿದಂತೆ ಹಲವು ನಗರಗಳಿಗೆ ಭೇಟಿ ನೀಡಿದ್ದಾರೆ. ಜೊತೆಗೆ ಅನೇಕ ಜನರು ಶಾಂತಿಯುತ ಮೆರವಣಿಗೆಯಲ್ಲಿ ತೊಡಗಿದ್ದಾರೆ.

ಮತ್ತೊಂದೆಡೆ, ಮೀಸಲಾತಿಗಾಗಿ ಯುವಕ ಆತ್ಮಹತ್ಯೆ ಮಾಡಿಕೊಂಡಿರುವ ಅಹಿತರ ಘಟನೆ ವರದಿಯಾಗಿದೆ. ಇಂದು ಬೆಳಗ್ಗೆ ಸುನಿಲ್ ಕಾವ್ಲೆ ಮೃತದೇಹವನ್ನು ಸಯಾನ್ ಆಸ್ಪತ್ರೆಗೆ ರವಾನಿಸಲಾಗಿದೆ. ಎಲ್ಲ ಪ್ರಕ್ರಿಯೆ ಮುಗಿದ ನಂತರ ಮೃತದೇಹವನ್ನು ಸಂಬಂಧಿಕರಿಗೆ ಹಸ್ತಾಂತರಿಸಲಾಗುವುದು ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.

ಆತ್ಮಹತ್ಯೆ ಪತ್ರ ಪತ್ತೆ: ಸುನೀಲ್​ ಕಾವ್ಲೆ ಆತ್ಮಹತ್ಯೆಗೂ ಮುನ್ನ ನಾಲ್ಕು ಪುಟಗಳ ಪತ್ರ ಬರೆದಿರುವುದು ಪತ್ತೆಯಾಗಿದೆ. ”ಮಹಾರಾಷ್ಟ್ರದ ಕುಲದೇವತೆ ತುಳಜಾ ಭವಾನಿ ಮಾತೆ, ಹಿಂದೂ ಧರ್ಮದ ರಕ್ಷಕ ಛತ್ರಪತಿ ಶಿವಾಜಿ ಮಹಾರಾಜರಿಗೆ ಸಾಷ್ಟಾಂಗ ನಮನಗಳು… ಮೀಸಲಾತಿ ರೈತರ ಪುತ್ರ – ಪುತ್ರಿಯರ ಭವಿಷ್ಯ ಪ್ರಶ್ನೆಯಾಗಿದೆ. ಮರಾಠಿ ರೈತರು, ಯುವಕ-ಯುವತಿಯರ ಶಿಕ್ಷಣಕ್ಕೆ ಮೀಸಲಾತಿ ಅಗತ್ಯವಿದೆ. ಈ ಯುದ್ಧವನ್ನು ಗೆಲ್ಲಬೇಕಿದೆ. ಅಕ್ಟೋಬರ್​ 24ರಂದು ಮಹಾರಾಷ್ಟ್ರದ ಎಲ್ಲ ಮಠಾರರು ಮುಂಬೈಗೆ ಬಂದು ಸೇರಬೇಕು. ಎಲ್ಲರೂ ಕ್ಷಮಿಸಿ” ಎಂದು ಆತ್ಮಹತ್ಯೆ ಪತ್ರದಲ್ಲಿ ಉಲ್ಲೇಖಿಸಲಾಗಿದೆ ಎಂದು ತಿಳಿದು ಬಂದಿದೆ.


Spread the love

About Laxminews 24x7

Check Also

ಇನ್ಮುಂದೆ ಆನ್​ಲೈನ್ ಬೆಟ್ಟಿಂಗ್ ನಿಷೇಧ:

Spread the loveಬೆಂಗಳೂರು: ಆನ್​ಲೈನ್ ಬೆಟ್ಟಿಂಗ್ ಹಾಗೂ ಗ್ಯಾಂಬ್ಲಿಂಗ್​ಗೆ ಅಂಕುಶ ಹಾಕಲು ರಾಜ್ಯ ಸರ್ಕಾರ ಹೊಸ ಮಸೂದೆಯನ್ನು ರೂಪಿಸಿದೆ.‌ ಕರ್ನಾಟಕ ಪೊಲೀಸ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ