ಪುಣೆ(ಮಹಾರಾಷ್ಟ್ರ): ಮೊದಲ ಪಂದ್ಯದಲ್ಲಿ ಸ್ವಲ್ಪ ಕಷ್ಟವೆನಿಸಿದ್ರೂ ಆಸ್ಟ್ರೇಲಿಯಾ ತಂಡವನ್ನು ಭಾರತ ಸೋಲಿಸಿತು. ಎರಡನೇ ಪಂದ್ಯದಲ್ಲಿ ಅಫ್ಘಾನಿಸ್ತಾನ ವಿರುದ್ಧ ಸುಲಭ ಜಯ ಸಾಧಿಸಿತ್ತು.
ಆದ್ರೆ ಹೈವೋಲ್ಟೇಜ್ ಪಂದ್ಯವಾಗಿದ್ದ ಪಾಕಿಸ್ತಾನ ವಿರುದ್ಧ ನಿಜವಾದ ಸ್ಪರ್ಧೆ ಇರಲಿಲ್ಲ. ವಿಶ್ವಕಪ್ನಲ್ಲಿ ಹ್ಯಾಟ್ರಿಕ್ ಗೆಲುವಿನೊಂದಿಗೆ ಟೀಂ ಇಂಡಿಯಾ ಸೆಮಿಸ್ಗೆ ಫೇವರಿಟ್ ಎನಿಸಿಕೊಂಡಿದೆ. ಇಂದು ಬಾಂಗ್ಲಾದೇಶದೊಂದಿಗೆ ಹಣಾಹಣಿ ನಡೆಯಲಿದೆ.
ಸಾಮರ್ಥ್ಯ ಮತ್ತು ಫಾರ್ಮ್‌ನಲ್ಲಿ ರೋಹಿತ್ ತಂಡಕ್ಕೆ ಬಾಂಗ್ಲಾದೇಶ ಯಾವುದೇ ಸಾಟಿಯಲ್ಲ. ಹಾಗಂತ ಕಡೆಗಣನೆ ಸಲ್ಲದು. ಯಾಕೆಂದರೆ ಇಂಗ್ಲೆಂಡ್‌ಗೆ ಅಫ್ಘಾನಿಸ್ತಾನ ಮತ್ತು ನೆದರ್ಲ್ಯಾಂಡ್ಸ್ ದಕ್ಷಿಣ ಆಫ್ರಿಕಾಕ್ಕೆ ನೀಡಿದ ಆಘಾತಗಳನ್ನು ನೋಡಿದ ನಂತರ.. ಪ್ರತಿಭೆಗಳಿಂದ ತುಂಬಿರುವ ಬಾಂಗ್ಲಾದೇಶವನ್ನು ಕಡಿಮೆ ಅಂದಾಜು ಮಾಡುವಂತಿಲ್ಲ. ಹೀಗಾಗಿ ಪುಣೆಯಲ್ಲಿ ಬಾಂಗ್ಲಾದಿಂದ ಬಿರುಸಿನ ಪೈಪೋಟಿ ಎದುರಾಗಬಹುದು.