Breaking News

ರಾಂಚಿ (ಜಾರ್ಖಂಡ್​) : ಸಾಮಾನ್ಯವಾಗಿ ಮದುವೆ ಮನೆಗೆ ವಧುವರರನ್ನು ಕರೆತರುವಾಗ ಮೆರವಣಿಗೆಯಲ್ಲಿ ಆಗಮಿಸುವುದನ್ನು ನೋಡಿರುತ್ತೇವೆ. ಇತ್ತೀಚಿನ ದಿನಗಳಲ್ಲಿ ಮದುವೆ ಬಳಿಕ ವಧುವರರನ್ನು ಮೆರವಣಿಗೆ ಕರೆದುಕೊಂಡು ಹೋಗುವುದನ್ನು ನೋಡಿರುತ್ತೇವೆ. ಆದರೆ ಗಂಡನ ಮನೆ ತೊರೆದು ತವರಿಗೆ ಆಗಮಿಸಿದ ಮಗಳನ್ನು ಸಂಗೀತ ವಾದ್ಯ ಮೇಳಗಳೊಂದಿಗೆ ಮೆರವಣಿಗೆಯಲ್ಲಿ ಕರೆತಂದಿರುವ ಅಪರೂಪದ ಘಟನೆ ಜಾರ್ಖಂಡ್​ನಲ್ಲಿ ನಡೆದಿದೆ. ಕುಮ್ಹರ್ಟೋಲಿಯ ಕೈಲಾಸ್​​ನಗರ ನಿವಾಸಿ ಪ್ರೇಮ್​ ಗುಪ್ತಾ ಎಂಬವರು ತಮ್ಮ ಮಗಳು ಸಾಕ್ಷಿ ಗುಪ್ತಾಳನ್ನು ಮೆರವಣಿಗೆ ಮೂಲಕ ತವರು ಮನೆಗೆ ಸ್ವಾಗತಿಸಿದ್ದಾರೆ. ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಮಾಡಿರುವ ಪ್ರೇಮ್​ ಗುಪ್ತಾ, ಮಗಳ ಬಗ್ಗೆ ಭಾವನಾತ್ಮಕ ಬರಹ ಬರೆದಿದ್ದಾರೆ. ಇದರಲ್ಲಿ, ಪೋಷಕರು ತಮ್ಮ ಮಗಳನ್ನು ಬಹಳ ಆಡಂಬರದಿಂದ ಮದುವೆ ಮಾಡಿಕೊಡುತ್ತಾರೆ. ಒಂದು ವೇಳೆ ಮದುವೆ ಬಳಿಕ ಸಂಗಾತಿ ಮತ್ತು ಅವರ ಕುಟುಂಬದವರು ಆಕೆಗೆ ಕಷ್ಟ ನೀಡಲು ಪ್ರಾರಂಭಿಸಿದರೆ, ನಿಮ್ಮ ಮಗಳನ್ನು ಅತ್ಯಂತ ಗೌರವದಿಂದ ಮನೆಗೆ ಕರೆದುಕೊಂಡು ಬರಬೇಕು. ಏಕೆಂದರೆ ಎಲ್ಲಾ ಹೆಣ್ಣುಮಕ್ಕಳು ಅಮೂಲ್ಯ ಎಂದು ಬರೆದಿದ್ದಾರೆ. ಕಳೆದ 2022ರ ಏಪ್ರಿಲ್ 28ರಂದು ಸಾಕ್ಷಿ ಅವರನ್ನು ಸಚಿನ್​ ಕುಮಾರ್​ ಎಂಬವರಿಗೆ ಬಹಳ ಅದ್ಧೂರಿಯಾಗಿ ಮದುವೆ ಮಾಡಿಕೊಡಲಾಗಿತ್ತು. ಸಚಿನ್​ ರಾಂಚಿಯ ಸರ್ವೇಶ್ವರಿ ನಗರದ ನಿವಾಸಿಯಾಗಿದ್ದು, ಜಾರ್ಖಂಡ್​ ವಿದ್ಯುತ್​ ವಿತರಣಾ ನಿಗಮದಲ್ಲಿ ಸಹಾಯಕ ಇಂಜಿನಿಯರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾನೆ. ಮದುವೆ ಆದ ಕೆಲವು ದಿನಗಳ ಬಳಿಕ ಗಂಡ ಹಾಗೂ ಗಂಡನ ಮನೆಯವರು ಸಾಕ್ಷಿಗೆ ಕಿರುಕುಳ ನೀಡಲು ಪ್ರಾರಂಭಿಸಿದ್ದಾರೆ. ಅಷ್ಟೇ ಅಲ್ಲದೆ ಸಚಿನ್​ ಕೂಡ ಸಾಕ್ಷಿಯನ್ನು ಮನೆಯಿಂದ ಹೊರಗೆ ದಬ್ಬಿದ್ದಾನೆ. ಆದರೂ ಧೃತಿಗೆಡದೇ ಸಾಕ್ಷಿ ಗಂಡನ ಮನೆಯವರೊಂದಿಗೆ ವಾಸವಿದ್ದಳು. ಒಂದು ವರ್ಷ ಕಳೆದ ಬಳಿಕ ಸಚಿನ್​ ಈಗಾಗಲೇ 2 ಮದುವೆಯಾಗಿರುವುದು ಸಾಕ್ಷಿಗೆ ಗೊತ್ತಾಗಿದೆ. ಎಲ್ಲ ಗೊತ್ತಾದರೂ ಹೊಂದಾಣಿಕೆಯೇ ಜೀವನ ಎಂದು ಸಾಕ್ಷಿ ಸುಮ್ಮನಾಗಿದ್ದಳು.

Spread the love

ರಾಂಚಿ (ಜಾರ್ಖಂಡ್​) : ಸಾಮಾನ್ಯವಾಗಿ ಮದುವೆ ಮನೆಗೆ ವಧುವರರನ್ನು ಕರೆತರುವಾಗ ಮೆರವಣಿಗೆಯಲ್ಲಿ ಆಗಮಿಸುವುದನ್ನು ನೋಡಿರುತ್ತೇವೆ. ಇತ್ತೀಚಿನ ದಿನಗಳಲ್ಲಿ ಮದುವೆ ಬಳಿಕ ವಧುವರರನ್ನು ಮೆರವಣಿಗೆ ಕರೆದುಕೊಂಡು ಹೋಗುವುದನ್ನು ನೋಡಿರುತ್ತೇವೆ. ಆದರೆ ಗಂಡನ ಮನೆ ತೊರೆದು ತವರಿಗೆ ಆಗಮಿಸಿದ ಮಗಳನ್ನು ಸಂಗೀತ ವಾದ್ಯ ಮೇಳಗಳೊಂದಿಗೆ ಮೆರವಣಿಗೆಯಲ್ಲಿ ಕರೆತಂದಿರುವ ಅಪರೂಪದ ಘಟನೆ ಜಾರ್ಖಂಡ್​ನಲ್ಲಿ ನಡೆದಿದೆ.

ಕುಮ್ಹರ್ಟೋಲಿಯ ಕೈಲಾಸ್​​ನಗರ ನಿವಾಸಿ ಪ್ರೇಮ್​ ಗುಪ್ತಾ ಎಂಬವರು ತಮ್ಮ ಮಗಳು ಸಾಕ್ಷಿ ಗುಪ್ತಾಳನ್ನು ಮೆರವಣಿಗೆ ಮೂಲಕ ತವರು ಮನೆಗೆ ಸ್ವಾಗತಿಸಿದ್ದಾರೆ. ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಮಾಡಿರುವ ಪ್ರೇಮ್​ ಗುಪ್ತಾ, ಮಗಳ ಬಗ್ಗೆ ಭಾವನಾತ್ಮಕ ಬರಹ ಬರೆದಿದ್ದಾರೆ. ಇದರಲ್ಲಿ, ಪೋಷಕರು ತಮ್ಮ ಮಗಳನ್ನು ಬಹಳ ಆಡಂಬರದಿಂದ ಮದುವೆ ಮಾಡಿಕೊಡುತ್ತಾರೆ. ಒಂದು ವೇಳೆ ಮದುವೆ ಬಳಿಕ ಸಂಗಾತಿ ಮತ್ತು ಅವರ ಕುಟುಂಬದವರು ಆಕೆಗೆ ಕಷ್ಟ ನೀಡಲು ಪ್ರಾರಂಭಿಸಿದರೆ, ನಿಮ್ಮ ಮಗಳನ್ನು ಅತ್ಯಂತ ಗೌರವದಿಂದ ಮನೆಗೆ ಕರೆದುಕೊಂಡು ಬರಬೇಕು. ಏಕೆಂದರೆ ಎಲ್ಲಾ ಹೆಣ್ಣುಮಕ್ಕಳು ಅಮೂಲ್ಯ ಎಂದು ಬರೆದಿದ್ದಾರೆ.

ಕಳೆದ 2022ರ ಏಪ್ರಿಲ್ 28ರಂದು ಸಾಕ್ಷಿ ಅವರನ್ನು ಸಚಿನ್​ ಕುಮಾರ್​ ಎಂಬವರಿಗೆ ಬಹಳ ಅದ್ಧೂರಿಯಾಗಿ ಮದುವೆ ಮಾಡಿಕೊಡಲಾಗಿತ್ತು. ಸಚಿನ್​ ರಾಂಚಿಯ ಸರ್ವೇಶ್ವರಿ ನಗರದ ನಿವಾಸಿಯಾಗಿದ್ದು, ಜಾರ್ಖಂಡ್​ ವಿದ್ಯುತ್​ ವಿತರಣಾ ನಿಗಮದಲ್ಲಿ ಸಹಾಯಕ ಇಂಜಿನಿಯರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾನೆ.

ಮದುವೆ ಆದ ಕೆಲವು ದಿನಗಳ ಬಳಿಕ ಗಂಡ ಹಾಗೂ ಗಂಡನ ಮನೆಯವರು ಸಾಕ್ಷಿಗೆ ಕಿರುಕುಳ ನೀಡಲು ಪ್ರಾರಂಭಿಸಿದ್ದಾರೆ. ಅಷ್ಟೇ ಅಲ್ಲದೆ ಸಚಿನ್​ ಕೂಡ ಸಾಕ್ಷಿಯನ್ನು ಮನೆಯಿಂದ ಹೊರಗೆ ದಬ್ಬಿದ್ದಾನೆ. ಆದರೂ ಧೃತಿಗೆಡದೇ ಸಾಕ್ಷಿ ಗಂಡನ ಮನೆಯವರೊಂದಿಗೆ ವಾಸವಿದ್ದಳು. ಒಂದು ವರ್ಷ ಕಳೆದ ಬಳಿಕ ಸಚಿನ್​ ಈಗಾಗಲೇ 2 ಮದುವೆಯಾಗಿರುವುದು ಸಾಕ್ಷಿಗೆ ಗೊತ್ತಾಗಿದೆ. ಎಲ್ಲ ಗೊತ್ತಾದರೂ ಹೊಂದಾಣಿಕೆಯೇ ಜೀವನ ಎಂದು ಸಾಕ್ಷಿ ಸುಮ್ಮನಾಗಿದ್ದಳು.


Spread the love

About Laxminews 24x7

Check Also

ಜನರಲ್ಲಿ ವೈಚಾರಿಕತೆ, ವೈಜ್ಞಾನಿಕತೆ ಬೆಳೆಯದಿದ್ದರೆ, ಕೇವಲ ಮೌಢ್ಯ ನಿಷೇಧ ಕಾನೂನಿನ ಮೂಲಕ ನಿರೀಕ್ಷಿತ ಬದಲಾವಣೆ ಸಾಧ್ಯವಿಲ್ಲ ಎಂದ ಸಿಎಂ

Spread the loveಬೆಂಗಳೂರು: ”ದ್ವಿಭಾಷಾ ಸೂತ್ರ ನನ್ನ ಅಭಿಪ್ರಾಯವಾಗಿದೆ. ಅದನ್ನು ಸರ್ಕಾರದ ಅಭಿಪ್ರಾಯ ಮಾಡುವ ದಿಕ್ಕಿನಲ್ಲಿ ಪ್ರಯತ್ನಿಸುತ್ತೇನೆ” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ