Breaking News

ನಾಡಿನ ಶಕ್ತಿ ದೇವತೆಯಲ್ಲಿ ಒಬ್ಬಳಾದ ಸವದತ್ತಿ ಎಲ್ಲಮ್ಮಾ ದೇವಿಗೆ ಇಂದು ವಿಷೇಶ ಪೂಜಾ ಅಲಂಕಾರ

Spread the love

ಬೆಳಗಾವಿ ಜಿಲ್ಲೆಯ ಸವದತ್ತಿ ಎಲ್ಲಮ್ಮ ದೇವಸ್ಥಾನದಲ್ಲಿ ಶರ ನವರಾತ್ರಿ ಹಬ್ಬದ ಅಂಗವಾಗಿ ಘಟಸ್ಥಾಪನೆ ಮಾಡಲಾಯಿತು.

ನಾಡಿನ ಶಕ್ತಿ ದೇವತೆಯಲ್ಲಿ ಒಬ್ಬಳಾದ ಸವದತ್ತಿ ಎಲ್ಲಮ್ಮಾ ದೇವಿಗೆ ಇಂದು ವಿಷೇಶ ಪೂಜಾ ಅಲಂಕಾರ ,ಅಭಿಷೇಕ ನೆರವೆರಿಸುವ ಮೂಲಕ ಘಟಸ್ಥಾಪನೆ ಮಾಡಲಾಯಿತು.

ಸವದತ್ತಿ ಎಲ್ಲಮ್ಮಾ ದೇವಸ್ಥಾನಕ್ಕೆ ಆಗಮಿಸಿ ದೀಪಕ್ಕೆ ಎಣ್ಣೆ ಹಾಕಿದ ನಂತರ ಭಕ್ತರು ತಮ್ಮ ಮನೆಗಳಲ್ಲಿ ಘಟಸ್ಥಾಪನೆ ಮಾಡುವ ಪ್ರತೀತಿ ಇರುವದರಿಂದ ಇಂದು ಬೆಳಗಿನ ಜಾವ ಸಾವಿರಾರು ಜನ ದೇವಿ ದರ್ಶನ ಮಾಡಿ ದೀಪಕ್ಕೆ ಎಣ್ಣಿ ಅರ್ಪಿಸಿದರು.

ಜೋತೆ ಮಾತನಾಡಿದ ದೇವಸ್ಥಾನದ ಮುಖ್ಯ ಅರ್ಚಕರು ಶರನವರಾತ್ರಿ ನಿಮಿತ್ಯ ಒಂಬತ್ತು ದಿನಗಳ ಕಾಲ ದೇವಿಗೆ ವಿವಿಧ ಬಗೆಯ ಅಲಂಕಾರ ಮತ್ತು ದೀಪಾರಾಧನೆ ಮಾಡಲಾಗುತ್ತದೆ, ದರ್ಶನಕ್ಕೆ ಬರುವ ಭಕ್ತರಿಗೆ ಆಡಳಿತಾಧಿಕಾರಿ ಗಳು ಸಕಲ ವ್ಯವಸ್ಥೆ ಮಾಡಿದ್ದಾರೆ, ಕೊನೆಯ ದಿನ ಬನ್ನಿ ಮಂಟಪಕ್ಕೆ ತೆರಳಿ ಸಿಮೊಂಗಲ್ಲನೆ ಯೊಂದಿಗೆ ಹಬ್ಬಕ್ಕೆ ತೇರೆ ಎಳೆಯಲಾಗುವದು , ಒಟ್ಟಾರೆ ಈ ಭಾರಿ ನವರಾತ್ರಿ ಹಬ್ಬ ಸಕಲರಿಗೂ ಒಳ್ಳೆಯದಾಗಲಿ ಎಂದರು

ಇಂದಿನಿಂದ ಒಂಬತ್ತು ದಿನಗಳ ಕಾಲ ಜರಗುವ ದಸರಾ ಹಬ್ಬದ ಮೋದಲನೆ ದಿನ ದೇವಿಯ ದರ್ಶನಕ್ಕೆ ಮುಂಜಾನೆಯಿಂದ ಸಾವಿರಾರು ಜನ ಭಕ್ತರು ಆಗಮಿಸಿ ಸರತಿ ಸಾಲಿನಲ್ಲಿ ನಿಂತು ದೇವಿಯ ದರ್ಶನ ಪಡೆದರು.


Spread the love

About Laxminews 24x7

Check Also

ಮಣ್ಣಿನ ಆರೋಗ್ಯ ಮತ್ತುನೀರಿನ ಸಮಗ್ರ ನಿರ್ವಹಣೆ ಯೋಜನೆಗೆ ಸಿಎಂಸಿದ್ದರಾಮಯ್ಯ ಚಾಲನೆ

Spread the loveಬೆಳಗಾವಿ: ನಮ್ಮದು ರೈತ ಪರ ಸರ್ಕಾರ. ಕಬ್ಬು ಬೆಳೆಯುವ ಪ್ರದೇಶದಲ್ಲಿ ಮಣ್ಣಿನ ಆರೋಗ್ಯ ಮತ್ತು ನೀರಿನ ಸಮಗ್ರ ನಿರ್ವಹಣೆಗೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ