ಬೆಂಗಳೂರು: ಹಿರಿಯ ನಟಿ ಲೀಲಾವತಿ ಆಸ್ಪತ್ರೆ ಉದ್ಘಾಟನೆಗೆ ಬನ್ನಿ ಎಂದು ಕರೆದಿದ್ದಾರೆ, ಡೇಟ್ ಕೇಳಿದ್ದಾರೆ, ನಾನೇ ಡೇಟ್ ಕೊಡ್ತೇನೆ ಆಸ್ಪತ್ರೆಗೆ ಸಹಾಯ ಕೂಡ ಮಾಡ್ತೇನೆ ಎಂದು ಡಿಸಿಎಂ ಡಿಕೆಶಿವಕುಮಾರ್ ಹೇಳಿದ್ದಾರೆ.
ಹಿರಿಯ ನಟಿ ಲೀಲಾವತಿ ಭೇಟಿ ನಂತರ ಮಾಧ್ಯಮದವರಿಗೆ ಪ್ರತಿಕ್ರಿಯಿಸಿದ ಅವರು, ಹಿರಿಯ ನಟಿ ಅವರಿಗೆ ಸೈಟ್ ಕೊಡ್ತೇವೆ, ಆಸ್ಪತ್ರೆ ಸಿಬ್ಬಂದಿ ಸರ್ಕಾರದಿಂದ ಕೇಳಿದ್ದಾರೆ.
ಸೈಟ್ಕೂಡ ಹೋಲ್ಡ್ ಆಗಿದೆ, ಏನು ಅಂತ ನೋಡ್ತೇನೆ. ಸರ್ಕಾರದಿಂದ ಅವರಿಗೆ ಸಲ್ಲಬೇಕಾದ ಸೂಕ್ತ ನೆರವನ್ನು ಕೊಡಿಸುತ್ತೇವೆ ಎಂದರು.
ಐಟಿ ದಾಳಿ ವಿಚಾರವಾಗಿ ಕುಮಾರಸ್ವಾಮಿ ಆರೋಪ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಯಾರ್ಯಾರು ಏನೇನು ಆರೋಪ ಮಾಡ್ತಿದ್ದಾರೆ ಮಾಡಲಿ. ಐಟಿ ಅಧಿಕಾರಿಗಳು ದಾಖಲೆ ಎಲ್ಲ ಕೊಡ್ತಾರೆ. ಇವರು ಹೇಳಿದ ತಕ್ಷಣ ಆರೋಪ ಸಾಬೀತಾಗಲ್ಲ. ಕುಮಾರಸ್ವಾಮಿತಿಹಾರಜೈಲ್ ಬಗ್ಗೆ ಮಾತನಾಡಿದ್ದಾರೆ. ಅವರು ಏನೇನು ಮಾತನಾಡಿಕೊಂಡು ಬಂದಿದ್ದಾರೆ ಗೊತ್ತಿದೆ. ಯಡಿಯೂರಪ್ಪ ಕಾಲದಲ್ಲಿರೈಡ್ಏನಾಗಿತ್ತು ಅಂತ ಗೊತ್ತಿದೆ ಎಂದು ಹೇಳಿದ್ದಾರೆ.