Breaking News

ರಿಲಯನ್ಸ್​ ಜಿಯೋ ತನ್ನ ಹೊಸ ಜಿಯೋ ಭಾರತ್ ಸರಣಿಯ 4ಜಿ ಫೋನ್​ ಬಿಡುಗಡೆ ಮಾಡಿದೆ.

Spread the love

ಮುಂಬೈ: ರಿಲಯನ್ಸ್ ಜಿಯೋ ಜಿಯೋಭಾರತ್ ಬಿ 1 ಎಂಬ ಹೊಸ 4 ಜಿ ಫೋನ್ ಅನ್ನು ದೇಶದಲ್ಲಿ ಬಿಡುಗಡೆ ಮಾಡಿದೆ. ಕೈಗೆಟುಕುವ ಬೆಲೆಯ ಜಿಯೋಭಾರತ್ ಸರಣಿಯ ಮುಂದಿನ ಫೋನ್ ಇದು. ಈ ಫೋನ್ 2.4 ಇಂಚಿನ ಡಿಸ್​ಪ್ಲೇ, ಅಲ್ಫಾ ನ್ಯೂಮೆರಿಕ್ ಕೀ ಪ್ಯಾಡ್, ಬಹುಭಾಷಾ ಬೆಂಬಲ ಮತ್ತು 2000 ಎಂಎಎಚ್ ಬ್ಯಾಟರಿಯನ್ನು ಹೊಂದಿದೆ.

ಬೆಲೆ 1,299 ರೂ. ಆಗಿದ್ದು, ಕಪ್ಪು ಬಣ್ಣದಲ್ಲಿ ಲಭ್ಯವಿದೆ. ಯುಪಿಐ ಪಾವತಿಗಳಿಗಾಗಿ ಜಿಯೋಪೇ ಬೆಂಬಲ, ಎಫ್‌ಎಂ ರೇಡಿಯೋ, ಜಿಯೋ ಸಿನೆಮಾ ಮತ್ತು ಜಿಯೋ ಸಾವನ್ ಅಪ್ಲಿಕೇಶನ್​ಗಳು ಇದರಲ್ಲಿವೆ.

ಮುಖೇಶ್ ಅಂಬಾನಿ ಒಡೆತನದ ರಿಲಯನ್ಸ್ ಜಿಯೋ ಈ ವರ್ಷದ ಜುಲೈನಲ್ಲಿ ಕೈಗೆಟುಕುವ ಇಂಟರ್ನೆಟ್- ಸಕ್ರಿಯ 4 ಜಿ ಫೋನ್ ಸರಣಿ ಜಿಯೋಭಾರತ್ ಅನ್ನು ಪ್ರಾರಂಭಿಸಿತ್ತು. ಕಂಪನಿಯು ಈಗ ಹೊಸ 4 ಜಿ ಫೋನ್ ಬಿಡುಗಡೆಯೊಂದಿಗೆ ಆ ಸರಣಿಯನ್ನು ವಿಸ್ತರಿಸಿದೆ. ಈಗ ಲಾಂಚ್ ಆಗಿರುವ ಜಿಯೋಭಾರತ್ ಬಿ1 4ಜಿ ಫೀಚರ್ ಫೋನ್ ಸರಣಿಯ ಮೂರನೇ ಫೋನ್ ಆಗಿದೆ. ಇದಕ್ಕೂ ಮುನ್ನ ಈ ಸರಣಿಯಲ್ಲಿ ಜಿಯೋ ಭಾರತ್ ವಿ 2 ಮತ್ತು ಕಾರ್ಬನ್ ಕೆ1 ಫೋನ್​ಗಳನ್ನು ಬಿಡುಗಡೆ ಮಾಡಲಾಗಿತ್ತು. ಇವೂ ಸಹ ಕೈಗೆಟುಕುವ ಬೆಲೆಯ ಫೋನ್​ಗಳಾಗಿವೆ.

ಜಿಯೋಭಾರತ್ ಬಿ1 ಗ್ಲಾಸಿ ಮತ್ತು ಮ್ಯಾಟ್ ಫಿನಿಶ್ ವಿನ್ಯಾಸ ಹೊಂದಿದ್ದು, ಹಿಂಭಾಗದ ಪ್ಯಾನೆಲ್ ಜಿಯೋ ಲೋಗೋ ಮತ್ತು ಆಯತಾಕಾರದ ಕ್ಯಾಮೆರಾ ಮಾಡ್ಯೂಲ್ ಅನ್ನು ಹೊಂದಿದೆ. ಮುಂಭಾಗದಲ್ಲಿ 2.4 ಇಂಚಿನ ಡಿಸ್​ಪ್ಲೇ ಮತ್ತು ಆಲ್ಫಾನ್ಯೂಮೆರಿಕ್ ಕೀಪ್ಯಾಡ್ ಇದೆ. 4 ಜಿ ಫೋನ್ 23 ಭಾಷೆಗಳ ಸಫೊಋಟ್ ಹೊಂದಿದೆ ಎಂದು ಕಂಪನಿ ಬಹಿರಂಗಪಡಿಸಿದೆ.

ಈ ಫೋನ್​ಗಳಿಗಾಗಿ ಜಿಯೋ ಭಾರತ್ ಹೆಸರಿನ ವಿಶೇಷ ಡೇಟಾ ಪ್ಲಾನ್​ಗಳನ್ನು ಸಹ ನೀಡಲಾಗಿದೆ. ಜಿಯೋ ಭಾರತ್ ಫೋನ್ ಗಳಿಗೆ ಕ್ರಮವಾಗಿ 123 ಮತ್ತು 1234 ರೂ.ಗಳ ಎರಡು ಯೋಜನೆಗಳು ಲಭ್ಯವಿದೆ. 123 ರೂ. ಗಳ ಯೋಜನೆಯು ಬಳಕೆದಾರರಿಗೆ ಅನಿಯಮಿತ ಕರೆ ಮತ್ತು 14 ಜಿಬಿ ಡೇಟಾವನ್ನು ನೀಡುತ್ತದೆ, ಇದು 28 ದಿನಗಳವರೆಗೆ ಮಾನ್ಯವಾಗಿರುತ್ತದೆ. ಹಾಗೆಯೇ 1234 ರೂ. ಗಳ ಯೋಜನೆಯು ವಾರ್ಷಿಕ ಚಂದಾದಾರಿಕೆಯಾಗಿದ್ದು, ಅನಿಯಮಿತ ಕರೆ ಮತ್ತು ಒಟ್ಟು 168 ಜಿಬಿ ಡೇಟಾ ನೀಡುತ್ತದೆ.


Spread the love

About Laxminews 24x7

Check Also

5 ತಾಲೂಕುಗಳ ಶಾಲೆಗೆ ಇಂದು ರಜೆ ಘೋಷಣೆ

Spread the loveಮಂಗಳೂರು/ಶಿವಮೊಗ್ಗ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುರಿಯುತ್ತಿರುವ ಭಾರಿ ಮಳೆಯ ಹಿನ್ನೆಲೆಯಲ್ಲಿ ಆಗಸ್ಟ್​ 29(ಶುಕ್ರವಾರ) ರಂದು ಜಿಲ್ಲೆಯ ಶಾಲೆ, ಪ್ರೌಢಶಾಲೆ, …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ