Breaking News

ಜಗತ್ತಿನ ಯಾವುದೇ ಮೂಲೆಗೆ ಹೋದರೂ ಸಿವಿಲ್​ ಇಂಜಿನಿಯರಿಂಗ್​ಗೆ ಮಹತ್ವದ ಸ್ಥಾನವಿದೆ.: ಸುಧಾಮೂರ್ತಿ

Spread the love

ಬೆಳಗಾವಿ: ಜಗತ್ತಿನ ಯಾವುದೇ ಮೂಲೆಗೆ ಹೋದರೂ ಸಿವಿಲ್​ ಇಂಜಿನಿಯರಿಂಗ್​ಗೆ ಮಹತ್ವದ ಸ್ಥಾನವಿದೆ.

ಹಾಗಾಗಿ, ಸಿವಿಲ್​ ಇಂಜಿನಿಯರಿಂಗ್​ ಎಂಬುದು ಮದರ್​ ಆಫ್​ ಇಂಜಿನಿಯರ್ಸ್​ ಎಂದು ಇನ್ಫೋಸಿಸ್‌ ಫೌಂಡೇಷನ್​ ಮುಖ್ಯಸ್ಥೆ, ಪದ್ಮಭೂಷಣ ಪುರಸ್ಕೃತೆ ಡಾ.ಸುಧಾಮೂರ್ತಿ ಹೇಳಿದರು.

ಬೆಳಗಾವಿಯ ಕೆಎಲ್​ಇ ಸಂಸ್ಥೆಯ ಜೀರಗೆ ಸಭಾಭವನದಲ್ಲಿ ನಡೆದ ‘ದಿ ಇನಸ್ಟಿಟ್ಯೂಷನ್ ಆಫ್ ಎಂಜಿನಿಯರ್ಸ್’ ವತಿಯಿಂದ ಹಮ್ಮಿಕೊಂಡಿದ್ದ ಸಿವಿಲ್​ ಇಂಜಿನಿಯರ್ಸ್​ 38ನೇ ರಾಷ್ಟ್ರೀಯ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಸಿವಿಲ್​ ಇಂಜಿನಿಯರಿಂಗ್​ ಕುರಿತು ಬಣ್ಣಿಸಿದರು.

“ಹಣವೇ ಎಲ್ಲ ಖುಷಿ ಕೊಡುತ್ತದೆ ಎಂಬುದು ಸರಿಯಲ್ಲ. ಹಾಗಂತ ಹಣದಿಂದ ಖುಷಿ ಸಿಗಲ್ಲ ಎಂದೇನಿಲ್ಲ. ಆದರೆ, ಹಣಕ್ಕಿಂತ ಹೆಚ್ಚಾಗಿ ಕಾಂಬಿನೇಷನ್​ ಬೇಕು. ವೃತ್ತಿ ನೈತಿಕತೆ ಜೊತೆಗೆ ಪರಿಶ್ರಮ ಬೇಕು. ಹೀಗಿದ್ದಾಗ ಮಾತ್ರ ಜೀವನದಲ್ಲಿ ಏನು ಬೇಕಾದರೂ ಸಾಧನೆ ಮಾಡಬಹುದು. ಅದರಿಂದ ಯಶಸ್ಸು ಲಭಿಸುವುದು ಖಂಡಿತ” ಎಂದು ನುಡಿದರು.

“ಎಲ್ಲದರಲ್ಲೂ ಪರಿಶ್ರಮ, ನೈತಿಕತೆ ಜೊತೆಗೆ ಟೀಮ್​ ವರ್ಕ್​ ಕೂಡ ಮುಖ್ಯ. ತಂಡದಲ್ಲಿ ಒಬ್ಬರು ಮುಂದಿರಬಹುದು, ಮತ್ತೊಬ್ಬರು ಹಿಂದಿರಬಹುದು. ಹೀಗಿರುವಾಗ ವೃತ್ತಿ ನೈತಿಕತೆ ಬೇಕು, ಹಣ ಇಲ್ಲದಿದ್ದರೆ ನಮ್ಮ ವೇಗ ಕಡಿಮೆ ಆಗಬಹುದು. ಆದರೆ ಗುಣಮಟ್ಟ ಮತ್ತು ನೈತಿಕವಾಗಿ ಶ್ರಮಿಸಿದರೆ ಹಣ ಎಂಬುದು ನಮ್ಮ ಬಳಿಗೆ ಓಡಿ ಬರುತ್ತದೆ. ಹೀಗಾಗಿ ಹಾರ್ಡ್​ವರ್ಕ್​ ಜೊತೆಗೆ ನೈತಿಕತೆ ಬೆಳೆಸಿಕೊಂಡು ಕೆಲಸ ಮಾಡಿ, ಸಾಧನೆ ಮಾಡಿ. ನಿಮ್ಮ ಪರಿಶ್ರಮಕ್ಕೆ ಯಶಸ್ಸು ಖಂಡಿತ” ಎಂದು ಯುವ ಇಂಜಿನಿಯರಿಂಗ್​ ವಿದ್ಯಾರ್ಥಿಗಳಿಗೆ ಸುಧಾಮೂರ್ತಿ ಕಿವಿ ಮಾತು ಹೇಳಿದರು.


Spread the love

About Laxminews 24x7

Check Also

ಗ್ರಾಮ ಪಂಚಾಯಿತಿಗಳಿಗೆ ‘ಮಹಾತ್ಮಾ ಗಾಂಧಿ ಗ್ರಾಮ ಪಂಚಾಯಿತಿ’ ಎಂದು ಮರುನಾಮಕರಣ

Spread the loveಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಮಂಡಿಸಿದ ದಾಖಲೆಯ 17ನೇ ರಾಜ್ಯ ಬಜೆಟ್‌ನಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ