Breaking News

ಇಸ್ರೇಲ್​ ಪ್ರತಿದಾಳಿ: 232 ಪ್ಯಾಲೆಸ್ಟೀನ್ ಜನ ಸಾವು, ಹಮಾಸ್‌ ನಾಯಕನ ಮನೆ ಹೊಕ್ಕ ಫೈಟರ್‌ಜೆಟ್‌

Spread the love

ರಮಾಲ್ಲಾಹ (ಪ್ಯಾಲೆಸ್ಟೀನ್​): ಪ್ಯಾಲೆಸ್ಟೀನ್​ ಉಗ್ರಗಾಮಿ ಪಡೆಯ ಹಮಾಸ್​ ದಾಳಿಗೆ ಇಸ್ರೇಲ್​ ಪ್ರತೀಕಾರ ತೀರಿಸಿಕೊಳ್ಳುತ್ತಿದೆ.

ಗಾಜಾ ಪಟ್ಟಿ ಮೇಲೆ ಇಸ್ರೇಲ್​ ನಡೆಸಿದ ಪ್ರತಿದಾಳಿಯಲ್ಲಿ ಸುಮಾರು 232 ಪ್ಯಾಲೆಸ್ಟೀನಿಯನ್​ಗಳು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಅಲ್ಲದೇ, ಹಮಾಸ್ ನಾಯಕರನ್ನೂ ಇಸ್ರೇಲ್​ ರಕ್ಷಣಾ ಪಡೆ ಗುರಿಯಾಗಿಸಿಕೊಂಡು ದಾಳಿ ಮಾಡುತ್ತಿದೆ.

ಶನಿವಾರ ಬೆಳಗ್ಗೆ 6:30ರ ಸುಮಾರಿಗೆ ಇಸ್ರೇಲ್​ ಮೇಲೆ ಹಮಾಸ್​ ಉಗ್ರಗಾಮಿಗಳು ಹಠಾತ್ ದಾಳಿ ಮಾಡಿದ್ದಾರೆ. ಇಸ್ರೇಲ್​ನತ್ತ ಸಾವಿರಾರು ರಾಕೆಟ್​ಗಳನ್ನು ಉಡಾಯಿಸಿದ್ದಾರೆ. ವಾಯು, ಭೂ, ಸಮುದ್ರ ಮೂಲಕ ಉಗ್ರರು ಒಳಸುಳಿಸಿದ್ದಾರೆ. ಇದರ ಪರಿಣಾಮ ಅಂದಾಜು 300 ಇಸ್ರೇಲಿಗಳು ಮೃತಪಟ್ಟಿದ್ದಾರೆ. ಇತ್ತೀಚಿನ ವರ್ಷಗಳ ನಡೆದ ರಕ್ತಪಾತದ ದಾಳಿ ಇದಾಗಿದೆ ಎಂದು ಇಸ್ರೇಲ್​ನ ರಾಷ್ಟ್ರೀಯ ರಕ್ಷಣಾ ಸೇವೆಗಳ ಇಲಾಖೆ ಹೇಳಿದೆ.

 

ಅಲ್ಲದೇ, ಅನೇಕ ಇಸ್ರೇಲ್​ ನಾಗರಿಕರು ಹಾಗೂ ಸೇನಾ ಸಿಬ್ಬಂದಿಯನ್ನು ಹಮಾಸ್​ ಭಯೋತ್ಪಾದಕರು ಗಾಜಾಕ್ಕೆ ಅಪಹರಿಸಿದ್ದಾರೆ ಎಂದು ವರದಿಯಾಗಿದೆ. ಇದರ ಬೆನ್ನಲ್ಲೆ ಇಸ್ರೇಲ್​ ಕೂಡ ಪ್ರತಿದಾಳಿಯನ್ನು ಮುಂದುವರೆಸಿದೆ. ತನ್ನ ಮೇಲಿನ ದಾಳಿಗೆ ಪ್ರತೀಕಾರವಾಗಿ ಹಲವು ಪ್ರದೇಶಗಳಲ್ಲಿ ಹಮಾಸ್​ ಉಗ್ರಗಾಮಿಗಳೊಂದಿಗೆ ಗುಂಡಿನ ಕಾಳಗದಲ್ಲಿ ಇಸ್ರೇಲ್​ ತೊಡಗಿದೆ. ಗಾಜಾ ಪಟ್ಟಿ ಮೇಲೂ ಇಸ್ರೇಲ್​ ರಕ್ಷಣಾ ಪಡೆ ದಾಳಿ ಮಾಡಿದೆ.

ಹಮಾಸ್‌ನ ನಾಯಕ ಮನೆ ಹೊಕ್ಕ ಫೈಟರ್ ಜೆಟ್‌ಗಳು: ಗಾಜಾದಲ್ಲಿರುವ ಹಮಾಸ್‌ ಉಗ್ರಗಾಮಿ ಸಂಘಟನೆಯ ನಾಯಕ ಮನೆಗೆ ಇಸ್ರೇಲ್​ ಫೈಟರ್ ಜೆಟ್‌ಗಳು ಹೊಕ್ಕಿವೆ. ಈ ಮನೆಯಲ್ಲಿದ್ದ ಸೇನೆ ವ್ಯವಸ್ಥೆಗಳನ್ನು ಹೊಡೆದುರುಳಿಸಲಾಗಿದೆ ಎಂದು ಇಸ್ರೇಲ್​ ರಕ್ಷಣಾ ಪಡೆ ತಿಳಿಸಿದೆ.

‘ಇತ್ತೀಚೆಗೆ ಫೈಟರ್ ಜೆಟ್‌ಗಳು ಭಯೋತ್ಪಾದಕ ಸಂಘಟನೆ ಹಮಾಸ್‌ನ ಗುಪ್ತಚರ ವಿಭಾಗದ ಮುಖ್ಯಸ್ಥರ ಮನೆಯಲ್ಲಿರುವ ಸೇನೆ ಮೂಲಸೌಕರ್ಯದ ಮೇಲೆ ದಾಳಿ ನಡೆಸಿವೆ. ಇದೇ ಸಮಯದಲ್ಲಿ ಗಾಜಾ ಪಟ್ಟಿಯಾದ್ಯಂತ ಇಸ್ರೇಲ್​ ರಕ್ಷಣಾ ಪಡೆಯು ತನ್ನ ದಾಳಿಯನ್ನು ಮುಂದುವರೆಸಿದೆ’ ಎಂದು ಸಾಮಾಜಿಕ ಜಾಲತಾಣ ‘ಎಕ್ಸ್​’ನಲ್ಲಿ ರಕ್ಷಣಾ ಪಡೆ ಪೋಸ್ಟ್​ ಮಾಡಿದೆ.


Spread the love

About Laxminews 24x7

Check Also

ಇನ್ಮುಂದೆ ಆನ್​ಲೈನ್ ಬೆಟ್ಟಿಂಗ್ ನಿಷೇಧ:

Spread the loveಬೆಂಗಳೂರು: ಆನ್​ಲೈನ್ ಬೆಟ್ಟಿಂಗ್ ಹಾಗೂ ಗ್ಯಾಂಬ್ಲಿಂಗ್​ಗೆ ಅಂಕುಶ ಹಾಕಲು ರಾಜ್ಯ ಸರ್ಕಾರ ಹೊಸ ಮಸೂದೆಯನ್ನು ರೂಪಿಸಿದೆ.‌ ಕರ್ನಾಟಕ ಪೊಲೀಸ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ