Breaking News

4ನೇ ಬಾರಿಗೆ ಚಿನ್ನದ ಅಂಬಾರಿ ಹೊರಲು ರೆಡಿಯಾಗುತ್ತಿರುವ ಕ್ಯಾಪ್ಟನ್​ ಅಭಿಮನ್ಯು: ವಿಡಿಯೋ

Spread the love

ಮೈಸೂರು : ವಿಶ್ವವಿಖ್ಯಾತ ನಾಡಹಬ್ಬ ದಸರಾ ಮಹೋತ್ಸವ ಸಮೀಪಿಸುತ್ತಿದೆ.

ನಾಲ್ಕನೇ ಬಾರಿಗೆ ಜಂಬೂಸವಾರಿಯಲ್ಲಿ ಚಿನ್ನದ ಅಂಬಾರಿ ಹೊರಲು ಸಿದ್ದವಾಗುತ್ತಿರುವ ಕ್ಯಾಪ್ಟನ್​ ಅಭಿಮನ್ಯು ಆನೆಯನ್ನು ವಿಶೇಷ ಆತಿಥ್ಯದೊಂದಿಗೆ ತಯಾರು ಮಾಡಲಾಗುತ್ತಿದೆ.

ಈಗಾಗಲೇ 3 ಬಾರಿ ಅಂಬಾರಿ ಹೊತ್ತಿರುವ ‘ಆಪರೇಷನ್ ಕಿಂಗ್’ ಅಭಿಮನ್ಯು ಸೈ ಎನ್ನಿಸಿಕೊಂಡಿದ್ದಾನೆ. ಈ ಬಾರಿಯೂ ಗಣಪಡೆಯನ್ನು ಮುನ್ನಡೆಸುತ್ತಿದ್ದು, ಪ್ರತಿನಿತ್ಯ ವಿಶೇಷ ಕಾಳಜಿ ವಹಿಸಲಾಗುತ್ತಿದೆ. ಸೆಪ್ಟೆಂಬರ್ 5ರಂದು ಮೊದಲ ಹಂತದ ಗಜಪಡೆಯ ನೇತೃತ್ವ ವಹಿಸಿದ್ದ ಅಭಿಮನ್ಯು ಅರಮನೆ ಆವರಣ ಪ್ರವೇಶ ಮಾಡಿತ್ತು. ಬಳಿಕ ಮುಂಭಾಗದ ಕೋಡಿ ಸೋಮೇಶ್ವರ ದೇವಾಲಯದೆದುರು ಪ್ರತ್ಯೇಕವಾಗಿ ನಿರ್ಮಾಣ ಮಾಡಿರುವ ಆನೆ ಶಿಬಿರದಲ್ಲಿ ಸಿಸಿಟಿವಿ ಭದ್ರತೆಯಲ್ಲಿರುವ ಅಭಿಮನ್ಯು ಜೊತೆಗೆ ಉಳಿದ ಆನೆಗಳಿಗೂ ವಿಶೇಷ ಆರೈಕೆ ನಡೆಯುತ್ತಿದೆ.

ಪ್ರತಿನಿತ್ಯ ಬೆಳಿಗ್ಗೆ ಅರಮನೆಯಿಂದ ಬನ್ನಿ ಮಂಟಪದವರೆಗೆ ಜಂಬೂಸವಾರಿ ತಾಲೀಮು ನಡೆಸಿ ವಾಪಸ್ ಶಿಬಿರಕ್ಕೆ ಬಂದಾಗ ಕಾಳುಗಳಿಂದ ತಯಾರಿಸಿದ ವಿಶೇಷ ಆಹಾರ, ಮುದ್ದೆ ಹಾಗೂ ಶಿಬಿರದಲ್ಲಿ ಭತ್ತದ ಹುಲ್ಲಿನಿಂದ ಬೆಲ್ಲ, ಹಸಿರು ಸೊಪ್ಪುಗಳನ್ನು ಅಭಿಮನ್ಯುವಿಗೆ ನೀಡಲಾಗುತ್ತಿದೆ. ಇದಾದ ನಂತರ ಅಲ್ಲೇ ಇರುವ ನೀರಿನ ಕೊಳದಲ್ಲಿ ಬೆನ್ನು, ತಲೆ, ಕಾಲುಗಳಿಗೆ ಎಣ್ಣೆ ಹಚ್ಚಿ ಮಸಾಜ್ ಮಾಡುವ ಮಾವುತರು ಹಾಗೂ ಕವಾಡಿಗರು ಸ್ನಾನ ಮಾಡಿಸುತ್ತಾರೆ. ಸಂಜೆ ಪುನಃ ಜಂಬೂಸವಾರಿ ತಾಲೀಮು ನಡೆಯುತ್ತಿದ್ದು, ಬಳಿಕ ಶಿಬಿರಕ್ಕೆ ಆಗಮಿಸುವ ವೇಳೆ ವಿಶೇಷ ಆಹಾರ ನೀಡಲಾಗುತ್ತಿದೆ.

 


Spread the love

About Laxminews 24x7

Check Also

ಡಿಸಿ ಮುಂದೆ ಅಳಲು ತೋಡಿಕೊಂಡ ನಿರಾಶ್ರಿತರು

Spread the loveಬೆಳಗಾವಿ: ಮಹಾರಾಷ್ಟ್ರದ ಘಟ್ಟ ಪ್ರದೇಶದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಘಟಪ್ರಭಾ ನದಿ ಉಕ್ಕಿ ಹರಿಯುತ್ತಿದೆ. ಇದರ ಪರಿಣಾಮ ಗೋಕಾಕ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ