Breaking News

ಬರಿಗಾಲಲ್ಲಿ ಬಂದು ಮುಂಬೈ ಸಿದ್ಧಿ ನಿನಾಯಕನ ದರ್ಶನ ಪಡೆದ ರಾಮ್ ಚರಣ್

Spread the love

ನಟ ರಾಮ್ ಚರಣ್ ತೇಜ (Ram Charan Teja) ದೊಡ್ಡ ಸೂಪರ್ ಸ್ಟಾರ್ ಆಗಿರುವ ಜೊತೆಗೆ ಮಹಾನ್ ದೈವ ಭಕ್ತ. ದೇವರ ಪ್ರತಿಯಾಗಿ ಅಪಾರ ಭಕ್ತಿ, ನಂಬಿಕೆ ಮತ್ತು ಶ್ರದ್ಧೆ ಹೊಂದಿದ್ದಾರೆ. ವ್ರತ ಆಚರಣೆ ಇತ್ಯಾದಿಗಳಲ್ಲಿ ಅಪಾರವಾದ ನಂಬಿಕೆ ಹೊಂದಿದ್ದಾರೆ. ಅದರಲ್ಲಿಯೂ ಶಬರಿಮಲೆ ಅಯ್ಯಪ್ಪನ ಕಟ್ಟಾ ಭಕ್ತರಾಗಿರುವ ರಾಮ್ ಚರಣ್ ತೇಜ ಹಲವು ದಿನಗಳ ಕಾಲ ಮಾಲಧಾರಿಯಾಗಿದ್ದ ವ್ರತ ಆಚರಿಸಿ ಮಲೆ ಏರಿಹಯೋಗಿ ಅಯ್ಯಪ್ಪನ ದರ್ಶನ ಪಡೆಯುತ್ತಾರೆ. ಕಳೆದ ವರ್ಷ ಮಾಲಧಾರಣೆ ಮಾಡಿದ್ದ ನಟ ರಾಮ್ ಚರಣ್ ಈಗಲೂ ಮಾಲ ಧಾರಣೆ ಮಾಡಿದ್ದಾರೆ.

ಸಾಮಾನ್ಯವಾಗಿ ದುಬಾರಿ ಸೂಟು ಅಥವಾ ದುಬಾರಿ ಕಾಸ್ಟೂಮ್, ಕಪ್ಪು ಕನ್ನಡಕ, ವಿದೇಶಿ ಬ್ರ್ಯಾಂಡ್​ನ ವಾಚು, ವಿದೇಶಿ ಬ್ರ್ಯಾಂಡ್​ನ ಮಿರಿ ಮಿರಿ ಮಿಂಚುವ ಶೂ ಧರಿಸಿ ಕಾಣಿಸಿಕೊಳ್ಳುತ್ತಿದ್ದ ರಾಮ್ ಚರಣ್, ಇದೀಗ ಮಾಲಧಾರಿಯಾಗಿರುವ ಕಾರಣ ಕಪ್ಪು ಬಣ್ಣದ ಸಾಧಾರಣ ಕುರ್ತಾ ಶರ್ಟ್ ಧರಿಸಿ, ಬರಿಗಾಲಲ್ಲಿ ಓಡಾಡುತ್ತಿದ್ದಾರೆ. ಇದೀಗ ಮುಂಬೈಗೆ ಬಂದಿರುವ ರಾಮ್ ಚರಣ್ ತೇಜ ಕೆಲವು ಪ್ರಮುಖ ಸ್ಥಳಗಳಿಗೆ ಭೇಟಿ ನೀಡಿದ್ದಾರೆ. ಮಾಲಧಾರಿಯಾಗಿರುವ ಕಾರಣ ಕಪ್ಪು ಬಣ್ಣದ ಸರಳ ಉಡುಗೆ ಧರಿಸಿ, ನಿಯಮದಂತೆ ಚಪ್ಪಲಿ ತ್ಯಜಿಸಿ ಬರಿಗಾಲಲ್ಲಿ ಓಡುತ್ತಿದ್ದಾರೆ. ನಿನ್ನೆ (ಅಕ್ಟೋಬರ್ 03) ಮುಂಬೈನ ಶ್ರೀ ಸಿದ್ಧಿ ವಿನಾಯಕ ದೇವಸ್ಥಾನದಲ್ಲಿ ಅಯ್ಯಪ್ಪ ದೀಕ್ಷೆಯನ್ನು ಮುಗಿಸಿದ್ದಾರೆ. ಮಗಳು ಕ್ಲಿನ್ ಕ್ಲಾರ್ ಜನಿಸಿದ ಬಳಿಕ ಅಯ್ಯಪ್ಪ ಮಾಲೆ ಧರಿಸಿದ್ದ ರಾಮ್ ನಿನ್ನ ದೀಕ್ಷೆಯನ್ನು ಮುಕ್ತಾಯಗೊಳಿಸಿದ್ದಾರೆ.


Spread the love

About Laxminews 24x7

Check Also

ಧರ್ಮಸ್ಥಳ ಪ್ರಕರಣಕ್ಕೆ ಬಿಗ್ ಟ್ವಿಸ್ಟ್​​: ಅನಾಮಿಕನ ಮುಖವಾಡ ಕಳಚಿದ ಮಾಜಿ ಪತ್ನಿ

Spread the loveಮಂಡ್ಯ, (ಆಗಸ್ಟ್ 21): ನೂರಾರು ಶವ ಹೂತಿರುವುದಾಗಿ ಆರೋಪಿಸಿ ಧರ್ಮಸ್ಥಳ ಪ್ರಕರಣವನ್ನು (Dharmasthala Case) ರಾಷ್ಟ್ರಮಟ್ಟದಲ್ಲಿ ಸದ್ದು ಮಾಡಲು ಕಾರಣವಾದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ