Breaking News

ಖರ್ಚಿಗೆ ಹಣವಿಲ್ಲವೆಂದು ಮೊಬೈಲ್ ಶಾಪ್​ ದೋಚಿದ್ದ ಯುವಕ

Spread the love

ಬೆಂಗಳೂರು : ಖರ್ಚಿಗೆ ಕಾಸಿಲ್ಲವೆಂದು ಮೊಬೈಲ್ ಶಾಪ್​ ದೋಚಿದ್ದ ಯುವಕರನ್ನು ಸಂಜಯನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ. ಪ್ರಭು (21), ಮೌಲೇಶ್ (19) ಹಾಗೂ ಅಜಯ್ (21) ಬಂಧಿತ ಆರೋಪಿಗಳು. ಬಂಧಿತರಿಂದ ಬರೋಬ್ಬರಿ 50 ಲಕ್ಷ ಮೌಲ್ಯದ ವಿವಿಧ ಎಲೆಕ್ಟ್ರಾನಿಕ್ ಗ್ಯಾಜೆಟ್ಸ್ ವಶಕ್ಕೆ ಪಡೆದುಕೊಳ್ಳಲಾಗಿದೆ.

ಎಚ್‌ಎಸ್‌ಆರ್ ಲೇಔಟ್​ನ ನಿವಾಸಿಗಳಾಗಿರುವ ಆರೋಪಿಗಳು ಖಾಸಗಿ ಕಾಲೇಜಿನಲ್ಲಿ ಬಿಸಿಎ ವ್ಯಾಸಂಗ ಮಾಡುತ್ತಿದ್ದರು. ಆರೋಪಿಗಳ ಪೈಕಿ ಪ್ರಭು, ಇತ್ತೀಚಿಗೆ ನ್ಯೂ ಬಿಇಎಲ್ ರಸ್ತೆಯಲ್ಲಿರುವ ಗ್ಯಾಜೆಟ್ಸ್ ಕ್ಲಬ್ ಮೊಬೈಲ್ ಅಂಗಡಿಯಲ್ಲಿ ಮೊಬೈಲ್ ಖರೀದಿಸಿದ್ದ. ಅದೇ ಸಂದರ್ಭದಲ್ಲಿ ಅಂಗಡಿಯಲ್ಲಿರುವ ವಸ್ತುಗಳನ್ನು ಗಮನಿಸಿದ್ದ. ಇತ್ತ ಮನೆಯಲ್ಲಿ ಖರ್ಚಿಗೆ ಹಣ ಕೊಡುವುದಿಲ್ಲವೆಂದು ಬೇಸತ್ತಿದ್ದ ಮೂರೂ ಜನ ಕಳ್ಳತನಕ್ಕೆಂದು ಸಂಚು ರೂಪಿಸಿದ್ದರು. ಅದಕ್ಕೆಂದೇ ಬೇಕಾದ ಸಲಕರಣೆಗಳನ್ನು ಆರೋಪಿ ಪ್ರಭು ಆನ್‌ಲೈನ್‌ನಲ್ಲಿ ಬುಕ್ ಮಾಡಿ ತರಿಸಿಕೊಂಡಿದ್ದ. ಸೆಪ್ಟೆಂಬರ್ 28ರಂದು ರಾತ್ರಿ ಅಂಗಡಿಯ ಬೀಗ ಮುರಿದು ಅದರಲ್ಲಿದ್ದ ಮೊಬೈಲ್ ಫೋನ್ಸ್, ಸ್ಮಾರ್ಟ್ ವಾಚ್, ಕ್ಯಾಮರಾಗಳನ್ನು ಕದ್ದು ಪರಾರಿಯಾಗಿದ್ದರು.

ಅಂಗಡಿ ಮಾಲೀಕನ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡ ಸಂಜಯನಗರ ಠಾಣಾ ಪೊಲೀಸರ ವಿಶೇಷ ತಂಡ ಕೃತ್ಯ ನಡೆದ 36 ಗಂಟೆಗಳೊಳಗೆ ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರಿಂದ 29 ಐಫೋನ್, 3 ಒನ್ ಪ್ಲಸ್, 11 ಸ್ಯಾಮ್‌ಸಂಗ್‌, 3 ಗೂಗಲ್‌ ಫೋನ್, 4 ಒಪ್ಪೋ, 2 ಐಕ್ಯೂ ಫೋನ್‌ಗಳು, ವಿವಿಧ ಕಂಪನಿಯ ಲ್ಯಾಪ್‌ಟಾಪ್‌ಗಳು, ಕ್ಯಾಮರಾಗಳು, ಸ್ಮಾರ್ಟ್ ವಾಚ್ ಮತ್ತಿತರ 50 ಲಕ್ಷ ಮೌಲ್ಯದ ಗ್ಯಾಜೆಟ್ಸ್ ವಶಕ್ಕೆ ಪಡೆದುಕೊಂಡಿದ್ದಾರೆ.


Spread the love

About Laxminews 24x7

Check Also

ಕೇರಳ ಸಿಎಂ ಪುತ್ರಿಯ ಕಂಪನಿ ವಿರುದ್ಧ ತನಿಖೆಗೆ ಆದೇಶ ಪ್ರಶ್ನಿಸಿ ಮೇಲ್ಮನವಿ: ಕೇಂದ್ರಕ್ಕೆ ಹೈಕೋರ್ಟ್ ನೋಟಿಸ್‌

Spread the love ಬೆಂಗಳೂರು: ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರ ಪುತ್ರಿ ಟಿ.ವೀಣಾ ಅವರು ನಿರ್ದೇಶಕಿಯಾಗಿರುವ ಎಕ್ಸಲಾಜಿಕ್‌ ಸಲ್ಯೂಷನ್‌ ಪ್ರೈವೇಟ್‌ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ