ರಾಯಚೂರು, ಅಕ್ಟೋಬರ್ 3: ರಾಯಚೂರು ನಗರದ ರೈಲ್ವೆ ನಿಲ್ದಾಣದ ಬಳಿ ಬಿಎಡ್ ವಿದ್ಯಾರ್ಥಿಯೊಬ್ಬ ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದಾನೆ. ಹನುಮಂತ (23) ಎಂಬ ವಿದ್ಯಾರ್ಥಿ ರೈಲ್ವೆ ಟ್ರಾಕ್ ಮಧ್ಯೆ ಹೆಣವಾಗಿ ಪತ್ತೆಯಾಗಿದ್ದಾನೆ. ಮೃತ ಹನುಮಂತ, ಮಾನ್ವಿ ತಾಲೂಕಿನ ಬೈಲ್ ಮರ್ಚಡ್ ಗ್ರಾಮದ ನಿವಾಸಿ. ಈತ ನಗರದ ಖಾಸಗಿ ಕಾಲೇಜಿನಲ್ಲಿ ಬಿಎಡ್ ಓದುತ್ತಿದ್ದ ಯುವಕ. ಹಾಸ್ಟೆಲ್ ನಲ್ಲಿ ಉಳಿದುಕೊಂಡು ಬಿಎಡ್ ಎರಡನೇ ಸೆಮಿಸ್ಟರ್ ನಲ್ಲಿ ವ್ಯಾಸಂಗ ಮಾಡ್ತಿದ್ದ. ಹನುಮಂತ, ನಿನ್ನೆ ಸೋಮವಾರ ತಡ ರಾತ್ರಿ ಹಾಸ್ಟೆಲ್ ನಿಂದ ಬ್ಯಾಗ್ ಸಮೇತ ಹೊರನಡೆದಿದ್ದ. ಬಳಿಕ ಅನುಮಾನಸ್ಪದವಾಗಿ ರೈಲ್ವೆ ಟ್ರಾಕ್ ನಲ್ಲಿ ಈತನ ಮೃತದೇಹ ಪತ್ತೆಯಾಗಿದೆ.
ಹನುಮಂತ, ಇತ್ತಿಚೆಗೆ ಪೊಲೀಸ್ ಕಾನ್ಸ್ ಟೇಬಲ್ ಪರೀಕ್ಷೆ ಕೂಡ ಬರೆದಿದ್ದ. ಹನುಮಂತನನ್ನ ಕೊಂದು ಬಳಿಕ ರೈಲ್ವೆ ಟ್ರಾಕ್ ಬಳಿ ಹಾಕಿರುವ ಆರೋಪವೂ ಕೇಳಿಬಂದಿದೆ. ಪ್ರೀತಿಯ ವಿಚಾರವಾಗಿ ಘಟನೆ ನಡೆದಿದೆ ಅನ್ನೋ ಬಗ್ಗೆ ಪೊಲೀಸರಿಗೆ ಮಾಹಿತಿ ದೊರೆತಿದೆ. ಸದ್ಯ ರಾಯಚೂರು ರೈಲ್ವೆ ಪೊಲೀಸ್ ಠಾಣೆಯಲ್ಲಿ ಅನುಮಾನಾಸ್ಪದ ಸಾವು ಆರೋಪದಡಿ ಪ್ರಕರಣ ದಾಖಲಾಗಿದೆ.
ಹಾವೇರಿ ವರದಿ: ಆಕಳು ಮೈ ತೊಳೆಯಲು ಹೋಗಿ ಕಾಲು ಜಾರಿ ಕೆರೆಗೆ ಬಿದ್ದು ಯುವಕ ಸಾವಿಗೀಡಾಗಿದ್ದಾನೆ. ಬಸವರಾಜ್ ಭರ್ಮಪ್ಪ ಮೂಲಿ ಎಂಬಾತ ಮೃತ ದುರ್ದೈವಿ. ಬಾಳಂಬಿಡ ಗ್ರಾಮದ ಮನೋಹರ ನಗರ ಕಲಕಟ್ಟಿ ಕೆರೆಯಲ್ಲಿ ಘಟನೆ ನಡೆದಿದೆ. 25 ವರ್ಷದ ಬಸವರಾಜ್ ಭರ್ಮಪ್ಪ ಮೂಲಿ ಕೆಲ ದಿನಗಳ ಹಿಂದಷ್ಟೇ PSI ಪರೀಕ್ಷೆ ಬರೆದು ಬಂದಿದ್ದ. ಕುಟುಂಬದ ಹಿರಿಯ ಮಗನಾಗಿದ್ದ ಬಸವರಾಜ್ ಕೃಷಿ ಮತ್ತು ಹೈನುಗಾರಿಕೆ ಮಾಡಿಕೊಂಡಿದ್ದ. ಆಡೂರು ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
Laxmi News 24×7