ಮೇಷ: ಈ ವಾರವು ನಿಧಾನ ಗತಿಯಲ್ಲಿ ಪ್ರಾರಂಭಗೊಳ್ಳಲಿದ್ದು, ನಿಮ್ಮ ಆರೋಗ್ಯ ಸಮಸ್ಯೆಗಳಿಗೆ ಗಮನ ನೀಡಬೇಕು. ಇಲ್ಲದಿದ್ದರೆ ನೀವು ಸಮಸ್ಯೆಗೆ ಈಡಾಗಬಹುದು. ನಿಮ್ಮ ವಿರುದ್ಧ ಯಾವುದೇ ಪ್ರಕರಣವು ಬಾಕಿ ಇದ್ದಲ್ಲಿ, ಈ ವಾರದಲ್ಲಿ ನಿರ್ಣಯವು ನಿಮ್ಮ ಪರವಾಗಿ ಬರಲಿದೆ.
ಇದರಿಂದ ನಿಮಗೆ ಲಾಭವಾಗಲಿದೆ. ಆರ್ಥಿಕವಾಗಿ ಸಮಯವು ಅನುಕೂಲಕರವೆನಿಸಲಿದೆ. ಸರ್ಕಾರ ಮತ್ತು ಆಡಳಿತಕ್ಕೆ ಸಂಬಂಧಿಸ ಜನರೊಂದಿಗೆ ನೀವು ಪಾಲ್ಗೊಳ್ಳಲಿದ್ದೀರಿ. ಉದ್ಯೋಗದಲ್ಲಿರುವವರಿಗೆ ಇದು ಉತ್ತಮ ಕಾಲ. ನೀವು ಉತ್ತಮ ಸ್ಥಾನದಲ್ಲಿರಲಿದ್ದು ನಿಮ್ಮ ಕೆಲಸಕ್ಕೆ ಪ್ರಶಂಸೆ ವ್ಯಕ್ತವಾಗಲಿದೆ. ವ್ಯವಹಾರದಲ್ಲಿ ತೊಡಗಿಸಿಕೊಂಡಿರುವ ಜನರು ಸಣ್ಣಪುಟ್ಟ ಏರುಪೇರಿನ ನಡುವೆಯೂ ಉತ್ತಮ ಕೆಲಸವನ್ನು ಪಡೆಯಲಿದ್ದಾರೆ. ವೈವಾಹಿಕ ಬದುಕಿನಲ್ಲಿ ಒತ್ತಡದಿಂದ ಮುಕ್ತಿ ದೊರೆಯಲಿದೆ. ನಿಮ್ಮ ಸಂಬಂಧದಲ್ಲಿ ಸುಧಾರಣೆ ಉಂಟಾಗಲಿದೆ. ಪ್ರೇಮ ಸಂಬಂಧದಲ್ಲಿರುವ ಜನರು ತಮ್ಮ ಪ್ರೇಮ ಸಂಬಂಧಕ್ಕೆ ಮೆರುಗು ನೀಡಲಿದ್ದಾರೆ. ಅಲ್ಲದೆ ನಿಮ್ಮ ಸಂಬಂಧಿಯೊಂದಿಗೆ ಆಪ್ತತೆಯನ್ನು ಸಾಧಿಸುವಲ್ಲಿ ಯಶಸ್ಸನ್ನು ಸಾಧಿಸಲಿದ್ದೀರಿ. ವಿದ್ಯಾರ್ಥಿಗಳು ತಮ್ಮ ಅಧ್ಯಯನಕ್ಕೆ ಗಮನ ನೀಡಲಿದ್ದಾರೆ.
ವೃಷಭ: ನಿಮಗೆ ಅನಗತ್ಯ ವೆಚ್ಚಗಳು ಉಂಟಾಗಲಿದ್ದು ಸಮಸ್ಯೆ ಎದುರಿಸಲಿದ್ದೀರಿ. ನಿಮ್ಮ ಆರೋಗ್ಯದ ಕುರಿತು ಕಾಳಜಿ ವಹಿಸಿ. ಏಕೆಂದರೆ ನಿಮ್ಮ ಆರೋಗ್ಯದಲ್ಲಿ ಕುಸಿತ ಉಂಟಾಗಿ ಕಾಯಿಲೆಗೆ ತುತ್ತಾಗುವ ಸಾಧ್ಯತೆ ಇದೆ. ನಿಮ್ಮ ಕೆಲಸದಲ್ಲಿ ಅಡಚಣೆ ಉಂಟಾಗಬಹುದು. ಇದಕ್ಕಾಗಿ ನೀವು ನಿಮ್ಮ ಕುಟುಂಬದ ಹಿರಿಯರ ಆಶೀರ್ವಾದ ಪಡೆಯಲಿದ್ದೀರಿ. ಉದ್ಯೋಗದಲ್ಲಿ ಕೆಲಸದ ಒತ್ತಡ ಕಾಣಿಸಿಕೊಳ್ಳಬಹುದು. ನಿಮ್ಮ ಕೆಲಸವನ್ನು ಪೂರ್ಣಗೊಳಿಸಲು ನೀವು ಸಮಯ ತೆಗೆದುಕೊಳ್ಳಬಹುದು. ವಿವಾಹಿತ ಜನರು ತಮ್ಮ ವೈವಾಹಿಕ ಜೀವನದಲ್ಲಿ ಸಂತಸ ಅನುಭವಿಸಲಿದ್ದಾರೆ. ನಿಮ್ಮ ಜೀವನ ಸಂಗಾತಿಯು ಏನಾದರೂ ದೊಡ್ಡ ಸಾಧನೆ ಮಾಡಬಹುದು. ಇದರಿಂದ ನಿಮಗೆ ಸಂತಸ ಲಭಿಸಲಿದೆ. ಮನೆಯಲ್ಲಿಯೂ ಸಂತಸ ನೆಲೆಸಲಿದೆ. ಪ್ರೇಮ ಸಂಬಂಧದ ವಿಚಾರದಲ್ಲಿ ಸಮಯವು ದುರ್ಬಲವಾಗಿದೆ. ನೀವು ಸಾಕಷ್ಟು ಎಚ್ಚರಿಕೆಯಿಂದ ಹೆಜ್ಜೆ ಇಡಬೇಕು. ಏಕೆಂದರೆ ತಪ್ಪು ಹೆಜ್ಜೆಯಿಂದಾಗಿ ನಿಮ್ಮ ಪ್ರೇಮಿಯನ್ನು ನೀವು ಕಳೆದುಕೊಳ್ಳಬೇಕಾದೀತು. ವಿದ್ಯಾರ್ಥಿಗಳ ಪಾಲಿಗೆ ಇದು ಸವಾಲಿನ ಸಮಯವಾಗಿದೆ. ಏಕಾಗ್ರತೆ ಸಾಧಿಸಲು ನಿಮಗೆ ಸಮಸ್ಯೆಯುಂಟಾಗಬಹುದು. ಇದರಿಂದಾಗಿ ನಿಮ್ಮ ಅಧ್ಯಯನದ ಮೇಲೆ ಪರಿಣಾಮ ಉಂಟಾಗಬಹುದು. ವಾರದ ನಡುವಿನ ಮತ್ತು ಕೊನೆಯ ಕೆಲವು ದಿನಗಳು ಪ್ರಯಾಣಿಸಲು ಉತ್ತಮ.
ಮಿಥುನ: ಈ ವಾರ ನಿಮಗೆ ಮಿಶ್ರ ಫಲಿತಾಂಶ ದೊರೆಯಲಿದೆ. ವಾರದ ಆರಂಭಿಕ ದಿನಗಳಲ್ಲಿ ನಿಮ್ಮ ಆದಾಯದ ಕುರಿತು ನಿಮಗೆ ಚಿಂತೆ ಕಾಡಬಹುದು. ಒಳಬರುವ ಆದಾಯವು ನಿಂತು ಹೋಗಬಹುದು. ಹೀಗಾಗಿ ತಾಳ್ಮೆಯಿಂದ ಇರಿ. ಆರೋಗ್ಯದಲ್ಲಿ ಏರುಪೇರು ಉಂಟಾಗಬಹುದು. ನಿಮಗೆ ಹೊಟ್ಟೆನೋವು ಕಾಣಿಸಿಕೊಳ್ಳಬಹುದು. ಜ್ವರ ಅಥವಾ ಹೊಟ್ಟೆಯಲ್ಲಿ ಅಜೀರ್ಣತೆ ಕಾಣಿಸಿಕೊಳ್ಳಲಿದ್ದು ಇದು ನಿಮ್ಮ ಚಿಂತೆಗೆ ಕಾರಣವೆನಿಸಬಹುದು. ನಿಮ್ಮ ಆಹಾರಕ್ರಮಕ್ಕೆ ಸಂಪೂರ್ಣ ಗಮನ ನೀಡಿರಿ. ಕೌಟುಂಬಿಕ ಬದುಕಿನಲ್ಲಿ ಒತ್ತಡ ಹೆಚ್ಚಲಿದೆ. ವಾಗ್ವಾದ ಉಂಟಾಗುವ ಸಾಧ್ಯತೆ ಇದೆ. ಜೀವನ ಸಂಗಾತಿಯ ಜೊತೆಗಿನ ಸಂಬಂಧ ಚೆನ್ನಾಗಿರಲಿದೆ. ಈ ವಾರದಲ್ಲಿ ಪ್ರೇಮ ಜೀವನವು ಚೆನ್ನಾಗಿರಲಿದೆ. ಕೆಲಸದಲ್ಲಿ ಕೆಲವೊಂದು ಸಮಸ್ಯೆಗಳು ಹೆಚ್ಚಲಿವೆ. ಕೆಲವೊಂದು ಎದುರಾಳಿಗಳು ತಲೆ ಎತ್ತಲಿದ್ದಾರೆ. ವ್ಯವಹಾರದ ಮಟ್ಟಿಗೆ ಸಮಯವು ಚೆನ್ನಾಗಿದೆ. ಸರ್ಕಾರಿ ವಲಯದಿಂದ ಏನಾದರೂ ಪ್ರಯೋಜನ ದೊರೆಯುವ ಸಾಧ್ಯತೆ ಇದೆ. ಶಿಕ್ಷಣದ ವಿಚಾರದಲ್ಲಿ ಸಮಯವು ಚೆನ್ನಾಗಿದೆ. ಆದರೆ ನಿಮ್ಮ ಏಕಾಗ್ರತೆಯನ್ನು ಹೆಚ್ಚಿಸಲು ಗಮನ ನೀಡಬೇಕು. ವಾರದ ಆರಂಭಿಕ ದಿನಗಳು ಪ್ರವಾಸಕ್ಕೆ ಹೋಗಲು ಅತ್ಯುತ್ತಮ.
ಕರ್ಕಾಟಕ: ನಿಮ್ಮ ಕೆಲಸದ ಸ್ಥಳದಲ್ಲಿ ಏನಾದರೂ ಹೊಸ ಕೆಲಸವನ್ನು ನೀವು ಮಾಡಲಿದ್ದೀರಿ. ಇದರಿಂದಾಗಿ ನಿಮಗೆ ಪ್ರಶಂಸೆ ದೊರೆಯಲಿದ್ದು ಭಡ್ತಿ ದೊರೆಯುವ ಎಲ್ಲಾ ಸಾಧ್ಯತೆಗಳಿವೆ. ನಿಮ್ಮ ಸಂಬಳದಲ್ಲಿ ಹೆಚ್ಚಳ ಉಂಟಾಗಲಿದ್ದು ನಿಮ್ಮ ಆರ್ಥಿಕ ಸ್ಥಿತಿಯನ್ನು ಇದು ಭದ್ರಪಡಿಸಲಿದೆ. ನೀವು ವ್ಯವಹಾರದಲ್ಲಿ ತೊಡಗಿಸಿಕೊಂಡಿದ್ದರೆ ನಿಮ್ಮ ಹಳೆಯ ಸಂಪರ್ಕಗಳನ್ನು ಸಂಪರ್ಕಿಸಿ ಅವರ ನೆರವನ್ನು ಪಡೆಯಲು ಇದು ಸಕಾಲ. ವ್ಯವಹಾರದಲ್ಲಿ ನಿಮ್ಮ ಗೆಳೆಯರ ಬೆಂಬಲವನ್ನು ಪಡೆಯಲಿದ್ದೀರಿ. ಈ ಕಾಲವು ವೈವಾಹಿಕ ಬದುಕಿಗೆ ಅನುಕೂಲಕರ. ನಿಮ್ಮ ಕಠಿಣ ಶ್ರಮಕ್ಕೆ ತಕ್ಕ ಫಲ ದೊರೆಯಲಿದೆ. ನಿಮ್ಮ ಅತ್ತೆ ಮಾವಂದಿರು ಸಂಪೂರ್ಣ ಸಹಕಾರ ನೀಡುವುದರಿಂದ ನಿಮ್ಮ ವೈವಾಹಿಕ ಬದುಕಿನಲ್ಲಿ ಸಾಮರಸ್ಯ ನೆಲೆಸಲಿದೆ. ಇದರೊಂದಿಗೆ ನಿಮ್ಮ ಕುಟುಂಬದ ಸದಸ್ಯರು ಸಹ ನಿಮ್ಮನ್ನು ಬೆಂಬಲಿಸಲಿದ್ದಾರೆ. ಈ ವಾರದಲ್ಲಿ ಪ್ರೇಮ ಜೀವನವು ಚೆನ್ನಾಗಿರಲಿದೆ. ಅಧ್ಯಯನದಲ್ಲಿ ಒಂದಷ್ಟು ಹಿನ್ನಡೆ ಕಾಣಿಸಿಕೊಳ್ಳಬಹುದು. ವಾರದ ಆರಂಭಿಕ ದಿನಗಳು ಪ್ರಯಾಣಿಸಲು ಅತ್ಯುತ್ತಮ.
ಸಿಂಹ: ನೀವು ದೀರ್ಘ ಪ್ರಯಾಣ ಮಾಡಬಹುದು. ಅಲ್ಲದೆ ನಿಮ್ಮ ತಂದೆಯ ಆರೋಗ್ಯಕ್ಕೆ ಗಮನ ನೀಡಿ. ಏಕೆಂದರೆ ಅವರು ಅನಾರೋಗ್ಯಕ್ಕೆ ತುತ್ತಾಗುವ ಸಾಧ್ಯತೆ ಇದೆ. ನಿಮ್ಮ ವರ್ಚಸ್ಸಿನಲ್ಲಿ ವೃದ್ಧಿ ಉಂಟಾಗುವ ಕಾರಣ ನಿಮ್ಮಲ್ಲಿ ಆತ್ಮವಿಶ್ವಾಸವು ಕಾಣಿಸಿಕೊಳ್ಳಲಿದೆ. ನಿಮ್ಮ ಆರೋಗ್ಯವು ಸಹ ಚೆನ್ನಾಗಿರಲಿದೆ. ಕೆಲಸದ ಸ್ಥಳದಲ್ಲಿ ಯಾರಾದರೂ ವ್ಯಕ್ತಿಯ ಜೊತೆಗೆ ವಾಗ್ವಾದ ಉಂಟಾಗಬಹುದು. ಅವರು ಆಡಳಿತ ಮಂಡಳಿಯ ಆಪ್ತರಾಗಿರಬಹುದು. ಹೀಗಾಗಿ ಎಚ್ಚರಿಕೆಯಿಂದ ಇರಿ. ನಿಮ್ಮ ವೈವಾಹಿಕ ಬದುಕಿನಲ್ಲಿ ಎದುರಾಗುವ ಸಮಸ್ಯೆಗಳು ಬಗೆಹರಿಯುವ ಕಾರಣ ನೀವು ಸಂತಸ ಅನುಭವಿಸಲಿದ್ದೀರಿ. ಆದಾಯದಲ್ಲಿ ವೃದ್ಧಿ ಉಂಟಾಗಲಿದೆ. ನಿಮ್ಮ ಮನಸ್ಸಿನ ಭಾವನೆಗಳನ್ನು ಹಂಚಿಕೊಳ್ಲಲಿದ್ದು ಇದು ನಿಮ್ಮ ಪಾಲಿಗೆ ಅನುಕೂಲಕರ ಎನಿಸಲಿದೆ. ಆದಾಯದ ದೃಷ್ಟಿಯಿಂದ ಇದು ಸಕಾಲ. ಇದರ ಸಂಪೂರ್ಣ ಲಾಭ ಗಳಿಸಲು ಯತ್ನಿಸಿ. ನೀವು ವಿದ್ಯಾರ್ಥಿಯಾಗಿದ್ದರೆ, ಮಾಹಿತಿ ತಂತ್ರಜ್ಞಾನ ವಿಷಯವನ್ನು ಕಲಿಯುತ್ತಿರುವವರು ಉತ್ತಮ ಸಾಧನೆ ಮಾಡಲಿದ್ದಾರೆ. ವಾರದ ಆರಂಭಿಕ ದಿನಗಳು ಪ್ರಯಾಣಿಸಲು ಅನುಕೂಲಕರ.
ಕನ್ಯಾ: ಆರೋಗ್ಯ ಸಮಸ್ಯೆಗಳು ಮತ್ತು ಆರ್ಥಿಕ ಸಮಸ್ಯೆಗಳು ನಿಮಗೆ ಎದುರಾಗಬಹುದು. ಹೀಗಾಗಿ ನಿಮ್ಮ ಮೇಲೆ ನೀವು ನಂಬಿಕೆ ಇರಿಸಬೇಕು. ಅಗತ್ಯ ಬಿದ್ದಲ್ಲಿ ನಿಮ್ಮ ಮನಸ್ಸಿನ ಭಾವನೆಗಳನ್ನು ನಿಮ್ಮ ಆಪ್ತರೊಂದಿಗೆ ಹಂಚಿಕೊಳ್ಳಿ. ಈ ಮೂಲಕ ನೀವು ಅದರಿಂದ ಹೊರಬರಬಹುದು. ಧ್ಯಾನದಲ್ಲಿ ಪಾಲ್ಗೊಳ್ಳಿ. ಇದರಿಂದ ಮಾನಸಿಕ ಒತ್ತಡವು ಕಡಿಮೆಯಾಗುತ್ತದೆ. ನೀವು ಪಡುವ ಶ್ರಮವು ನಿಮ್ಮ ಪಾಲಿಗೆ ಶಕ್ತಿಯುತ ಅಸ್ತ್ರವೆನಿಸಲಿದೆ. ಕೆಲಸದ ಸ್ಥಿತಿಯು ನಿಮ್ಮ ಪಾಲಿಗೆ ಅನುಕೂಲಕರವಾಗಿದೆ. ವಿವಾಹಿತ ವ್ಯಕ್ತಿಗಳು ತಮ್ಮ ಕೌಟುಂಬಿಕ ಬದುಕಿನಲ್ಲಿ ಒತ್ತಡ ಉಂಟಾಗದಂತೆ ನೋಡಿಕೊಳ್ಳಬೇಕು. ನಿಮ್ಮ ಕೋಪದ ಕಾರಣ ನಿಮ್ಮ ಜೀವನ ಸಂಗಾತಿಗೆ ನೀವು ಕೆಟ್ಟ ಮಾತುಗಳನ್ನು ಆಡಬಹುದು. ಹೀಗಾಗಿ ನಿಮ್ಮ ಸಂಬಂಧದಲ್ಲಿ ಸಮಸ್ಯೆಗಳು ಉಂಟಾಗಬಹುದು. ಪ್ರೇಮದ ಸಂಬಂಧದಲ್ಲಿ ಸಾಕಷ್ಟು ಧನಾತ್ಮಕತೆ ನೆಲೆಸಲಿದೆ. ವಾರದ ಆರಂಭದಲ್ಲಿ ಪ್ರಯಾಣಿಸುವುದರಿಂದ ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳು ಉಂಟಾಗಬಹುದು. ಈ ಸಮಯವು ವಿದ್ಯಾರ್ಥಿಗಳಿಗೆ ಕ್ರಿಯಾತ್ಮಕ ಅವಕಾಶಗಳನ್ನು ಒದಗಿಸಲಿದೆ. ತುಲಾ: ಈ ಸಮಯದಲ್ಲಿ ನಿಮ್ಮ ವ್ಯವಹಾರದಲ್ಲಿ ಕ್ಷಿಪ್ರ ಪ್ರಗತಿ ಉಂಟಾಗಲಿದೆ. ಆದರೆ ಯಾವುದೇ ತಪ್ಪನ್ನು ಮಾಡಬೇಡಿ. ಯಾವುದೇ ಕಾನೂನುಬಾಹಿರ ಕೆಲಸದಲ್ಲಿ ತೊಡಗಿಕೊಳ್ಳಬೇಡಿ. ಇಲ್ಲದಿದ್ದರೆ ನಿಮಗೆ ಸಮಸ್ಯೆ ಎದುರಾಗಬಹುದು. ಖರ್ಚುವೆಚ್ಚಗಳಲ್ಲಿ ಹೆಚ್ಚಳ ಉಂಟಾಗಬಹುದು. ಅಲ್ಲದೆ ಆರೋಗ್ಯದಲ್ಲಿ ಕುಸಿತ ಉಂಟಾಗಬಹುದು. ಜ್ವರ ಅಥವಾ ಪಿತ್ತರಸಕ್ಕೆ ಸಂಬಂಧಿಸಿದ ಸಮಸ್ಯೆಗಳು ಉಂಟಾಗಬಹುದು. ಆದಾಯದಲ್ಲಿ ಹೆಚ್ಚಳ ಉಂಟಾಗಲಿದೆ. ಕೆಲಸದ ಸ್ಥಳದಲ್ಲಿ ಭಡ್ತಿ ದೊರೆಯುವ ಸಾಧ್ಯತೆ ಇದೆ. ನಿಮ್ಮ ಸಂಬಳದಲ್ಲಿ ಹೆಚ್ಚಳ ಉಂಟಾಗುವ ಸಾಧ್ಯತೆ ಇದೆ. ವಿವಾಹಿತ ಜನರು ತಮ್ಮ ವೈವಾಹಿಕ ಜೀವನದಲ್ಲಿ ಏರುಪೇರು ಎದುರಿಸಲಿದ್ದಾರೆ. ನಿಮ್ಮ ಕೌಟುಂಬಿಕ ಬದುಕು ಚೆನ್ನಾಗಿದ್ದರೂ ಜೀವನ ಸಂಗಾತಿಯ ಆರೋಗ್ಯದಲ್ಲಿ ಏರುಪೇರು ಉಂಟಾಗಬಹುದು. ನೀವು ನಿಮ್ಮ ಪ್ರಣಯ ಸಂಗಾತಿಗೆ ಮದುವೆಯ ಪ್ರಸ್ತಾವನೆಯನ್ನು ಮುಂದಿಡಬಹುದು. ರಿಯಲ್ ಎಸ್ಟೇಟ್ ಗೆ ಸಂಬಂಧಿಸಿದ ವಿಚಾರಗಳು ನಿಮ್ಮ ಗಮನವನ್ನು ಸೆಳೆಯಲಿವೆ. ವಾರದ ಆರಂಭಿಕ ದಿನವು ಪ್ರಯಾಣಕ್ಕೆ ಅತ್ಯುತ್ತಮ. ಅಡಚಣೆಗಳ ನಡುವೆಯೂ ವಿದ್ಯಾರ್ಥಿಗಳು ಏನಾದರೂ ಹೊಸತನ್ನು ಕಲಿಯಲಿದ್ದಾರೆ.
ವೃಶ್ಚಿಕ: ವಾರದ ಆರಂಭದಲ್ಲಿ ಮಾನಸಿಕ ಒತ್ತಡವು ನಿಮ್ಮನ್ನು ಕಾಡಬಹುದು. ಇದರಿಂದಾಗಿ ನಿಮ್ಮ ಆರೋಗ್ಯದಲ್ಲಿ ಕುಸಿತ ಉಂಟಾಗಲಿದೆ. ರಿಯಲ್ ಎಸ್ಟೇಟ್ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಯಶಸ್ಸು ದೊರೆಯಲಿದ್ದು ನೀವು ಒಂದಷ್ಟು ಆಸ್ತಿಯನ್ನು ಗಳಿಸಲಿದ್ದೀರಿ. ಉದ್ಯೋಗ ವಲಯದ ಸನ್ನಿವೇಶವು ಅನುಕೂಲಕರವಾಗಿದೆ. ಅಲ್ಲದೆ ನಿಮ್ಮ ಬಾಸ್ ನ ಬೆಂಬಲ ನಿಮಗೆ ದೊರೆಯಲಿದೆ. ಈ ವಾರ ವ್ಯಾಪಾರೋದ್ಯಮಿಗಳಿಗೆ ಅನುಕೂಲಕರ. ನಿಮ್ಮ ಅನೇಕ ಯೋಜನೆಗಳು ಫಲಪ್ರದವೆನಿಸಲಿವೆ ಹಾಗೂ ಇದರಿಂದ ನೀವು ಸಾಕಷ್ಟು ಹಣ ಗಳಿಸಲಿದ್ದೀರಿ. ಈ ವಾರದಲ್ಲಿ ವಿವಾಹಿತ ವ್ಯಕ್ತಿಗಳ ಕೌಟುಂಬಿಕ ಬದುಕು ಚೆನ್ನಾಗಿರಲಿದೆ. ಹೀಗಾಗಿ ನೀವು ಶಾಂತಿಯುತವಾಗಿ ಬದುಕಲಿದ್ದೀರಿ. ಮನೆಯ ವಾತಾವರಣವು ಸಂತಸದಿಂದ ಕೂಡಿರಲಿದೆ. ಪ್ರೇಮದ ಸಂಬಂಧದಲ್ಲಿರುವವರ ಬದುಕಿನಲ್ಲಿ ಈ ವಾರದಲ್ಲಿ ಸಾಕಷ್ಟು ಏರುಪೇರು ಉಂಟಾಗಬಹುದು. ಕೌಟುಂಬಿಕ ಒತ್ತಡದ ಕಾರಣ ನಿಮ್ಮ ಪ್ರೇಮಿಯು ಮನಸ್ತಾಪವನ್ನು ಹೊಂದಿರಬಹುದು. ಆದರೆ ಸಂಬಂಧವು ಚೆನ್ನಾಗಿರಲಿದೆ. ವಾರದ ಕೊನೆಯ ದಿನವು ಪ್ರಯಾಣಿಸಲು ಅನುಕೂಲಕರ. ವಿದ್ಯಾರ್ಥಿಗಳು ಕಠಿಣವಾಗಿ ದುಡಿಯಬೇಕಿದೆ.
ಧನು: ನೀವು ಮಕ್ಕಳಿಗೆ ಸಾಕಷ್ಟು ಪ್ರೀತಿ ತೋರಿಸಲಿದ್ದೀರಿ. ಅಗತ್ಯವಿಲ್ಲದಿದ್ದರೂ ಅವರ ಕುರಿತು ಸಾಕಷ್ಟು ಚಿಂತಿಸಲಿದ್ದೀರಿ. ಅವರ ಕ್ಷೇತ್ರದಲ್ಲಿ ಅವರು ಉತ್ತಮ ಸಾಧನೆ ಮಾಡಲಿದ್ದಾರೆ. ನಿಮ್ಮ ವೈವಾಹಿಕ ಬದುಕು ಚೆನ್ನಾಗಿರಲಿದೆ. ಜೀವನ ಸಂಗಾತಿಯ ಜೊತೆಗಿನ ಆಪ್ತತೆಯಲ್ಲಿ ಸುಧಾರಣೆ ಉಂಟಾಗಲಿದೆ. ಪ್ರೇಮ ಜೀವನಕ್ಕೆ ಸಮಯವು ಚೆನ್ನಾಗಿದೆ. ಆದರೆ ಮದುವೆಯ ಕುರಿತು ನಿಮ್ಮ ಪ್ರೇಮಿಯೊಂದಿಗೆ ನೀವು ಮಾತನಾಡಲು ಇದು ಸಕಾಲ. ನೀವು ಧನಾತ್ಮಕ ಫಲಿತಾಂಶ ಪಡೆಯುವ ಎಲ್ಲಾ ಸಾಧ್ಯತೆ ಇದೆ. ನಿಮ್ಮ ಗೆಳೆಯರ ಜೊತೆ ಮೋಜು ಅನುಭವಿಸಲು ನಿಮಗೆ ಅವಕಾಶ ಸಿಗಬಹುದು. ನೀವು ಯಾವುದಾದರೂ ಧಾರ್ಮಿಕ ಪುಸ್ತಕವನ್ನು ಖರೀದಿಸಬಹುದು ಅಥವಾ ಮೂರ್ತಿಯನ್ನು ಮನೆಗೆ ತಂದು ಆರಾಧಿಸಬಹುದು. ಆರೋಗ್ಯವು ಚೆನ್ನಾಗಿರಲಿದೆ. ಉದ್ಯೋಗದಲ್ಲಿರುವ ಜನರ ಸ್ಥಿತಿಗತಿ ಚೆನ್ನಾಗಿರಲಿದೆ. ಉದ್ಯೋಗದ ಸ್ಥಳದಲ್ಲಿ ಅವರ ವರ್ಚಸ್ಸು ವೃದ್ಧಿಸಲಿದೆ. ವ್ಯಾಪಾರೋದ್ಯಮಿಗಳಿಗೆ ಇದು ಸಕಾಲ. ವಿದ್ಯಾರ್ಥಿಗಳು ಇಚ್ಛಿಸಿದಲ್ಲಿ ಅವರು ಸಮಯವನ್ನು ಚೆನ್ನಾಗಿ ಬಳಸಿಕೊಂಡು ಅಧ್ಯಯನದಲ್ಲಿ ಉತ್ತಮ ಸಾಧನೆ ಮಾಡಬಹುದು. ವಾರದ ಆರಂಭಿಕ ದಿನವು ಪ್ರಯಾಣಕ್ಕೆ ಅತ್ಯುತ್ತಮ.
ಮಕರ: ಕುಟುಂಬದ ಸದಸ್ಯರಿಂದ ನೀವು ಸಹಕಾರ ಮತ್ತು ನೆರವನ್ನು ಪಡೆಯಬಹುದು. ಹೀಗಾಗಿ ನಿಮ್ಮ ಕೆಲಸವು ಯಶಸ್ಸಿನ ದಾರಿಯಲ್ಲಿ ಮುಂದುವರಿಯಲಿದೆ. ನೀವು ಉದ್ಯೋಗದಲ್ಲಿದ್ದರೆ, ಸಾಕಷ್ಟು ಎಚ್ಚರಿಕೆಯಿಂದ ಕೆಲಸ ಮಾಡಬೇಕು. ಇಲ್ಲದಿದ್ದರೆ ಕೆಲಸದಲ್ಲಿ ನೀವು ಆಸಕ್ತಿ ಕಳೆದುಕೊಳ್ಳಬಹುದು. ಹೀಗಾಗಿ ತಪ್ಪು ಮಾಡುವ ಸಾಧ್ಯತೆ ಹೆಚ್ಚಬಹುದು. ಹೀಗೆ ಉಂಟಾದಲ್ಲಿ ಪರಿಸ್ಥಿತಿ ನಿಮ್ಮ ವಿರುದ್ಧವಾಗಿ ತಿರುಗಬಹುದು. ವ್ಯವಹಾರದಲ್ಲಿ ನಿಮ್ಮ ಮನಸ್ಸು ಚುರುಕಿನಿಂದ ಕೆಲಸ ನಿರ್ವಹಿಸಲಿದ್ದು ಇದರಿಂದ ಲಾಭ ದೊರೆಯಲಿದೆ. ನಿಮ್ಮ ಬುದ್ಧಿಮತ್ತೆಯ ಮೂಲಕ ಉತ್ತಮ ಲಾಭ ಗಳಿಸಲಿದ್ದೀರಿ. ವೈವಾಹಿಕ ಜೀವನದಲ್ಲಿನ ಮೆಲು ಮಾತು, ಪ್ರೇಮ ಮತ್ತು ಪ್ರಣಯವು ನಿಮ್ಮ ಜೀವನ ಸಂಗಾತಿಯ ಮನಸ್ಸನ್ನು ಗೆಲ್ಲುತ್ತದೆ ಮಾತ್ರವಲ್ಲದೆ ನಿಮ್ಮ ವೈವಾಹಿಕ ಜೀವನದಲ್ಲಿ ಸಂತಸ ಮೂಡಿಸಲಿದೆ. ನೀವು ಪ್ರಯಾಣಿಸಲು ಇಚ್ಛಿಸುವುದಾದರೆ, ವಾರದ ಆರಂಭಿಕ ದಿನಗಳು ಉತ್ತಮ. ವಿದ್ಯಾರ್ಥಿಗಳು ಅಧ್ಯಯನದಲ್ಲಿ ಉತ್ತಮ ಫಲಿತಾಂಶ ಪಡೆಯಲಿದ್ದಾರೆ.
ಕುಂಭ: ನೀವು ಗೆಳೆಯರೊಂದಿಗೆ ಸಮಯ ಕಳೆಯಲಿದ್ದು, ಎಲ್ಲಾದರೂ ವಾಕ್ ಗೆ ಹೋಗಬಹುದು. ಆರೋಗ್ಯದ ಕುರಿತು ಕಾಳಜಿ ವಹಿಸುವುದು ಅಗತ್ಯ. ಉದ್ಯೋಗಿಗಳು ತಮ್ಮ ಕೆಲಸದಲ್ಲಿ ಉತ್ತಮ ಫಲಿತಾಂಶ ಪಡೆಯಲಿದ್ದಾರೆ. ಆದರೆ ನಿಮ್ಮ ಸಹೋದ್ಯೋಗಿಯ ಜೊತೆಗಿನ ಸಂಬಂಧವು ಹದಗೆಡಬಹುದು. ಈ ಬಾರಿ ವ್ಯವಹಾರವು ಚೆನ್ನಾಗಿರಲಿದೆ. ಅಲ್ಲದೆ ಸರ್ಕಾರಿ ವಲಯದ ಒತ್ತಡವು ಕಡಿಮೆಯಾಗಲಿದೆ. ವಿವಾಹಿತ ಜನರು ತಮ್ಮ ವೈವಾಹಿಕ ಜೀವನವನ್ನು ಆನಂದಿಸಲಿದ್ದಾರೆ. ಅಲ್ಲದೆ ನಿಮ್ಮ ಜೀವನ ಸಂಗಾತಿಯ ಜೊತೆಗೆ ನೀವು ಉತ್ತಮ ಸಂಬಂಧವನ್ನು ಹೊಂದಿರಲಿದ್ದೀರಿ. ಈ ವಾರವು ಪ್ರೇಮ ಸಂಬಂಧದಲ್ಲಿ ಉತ್ತಮ ಫಲ ನೀಡಲಿದೆ. ನೀವು ಮತ್ತು ನಿಮ್ಮ ಸಂಗಾತಿಯ ನಡುವಿನ ಸಾಮಿಪ್ಯವು ವೃದ್ಧಿಸಲಿದೆ. ವಿದ್ಯಾರ್ಥಿಗಳ ಕುರಿತು ಮಾತನಾಡುವುದಾದರೆ, ಈ ವಾರದಲ್ಲಿ ನೀವು ಇಲ್ಲಿಯ ತನಕ ನಿರ್ಲಕ್ಷಿಸಿದ ವಿಷಯದ ಕುರಿತು ಹೆಚ್ಚು ಗಮನ ನೀಡಬೇಕು.
ಮೀನ: ವಾರದ ಆರಂಭದಿಂದ ಯಾವುದಾದರೂ ವಿಷಯದ ಕುರಿತ ಚಿಂತೆಯು ನಿಮ್ಮನ್ನು ಕಾಡಬಹುದು. ಆದರೆ ಚಿಂತಿಸಿ ಫಲವಿಲ್ಲ. ಅದೃಷ್ಟವು ನಿಮ್ಮ ಪರವಾಗಿದೆ. ಹೀಗಾಗಿ ವ್ಯವಹಾರವಾಗಿರಲಿ ಅತವಾ ಉದ್ಯೋಗವಾಗಿರಲಿ, ನೀವು ಉತ್ತಮ ಸಾಧನೆ ಮಾಡಲಿದ್ದೀರಿ. ಈ ಬಾರಿ ವ್ಯವಹಾರದಲ್ಲಿ ಅನಿರೀಕ್ಷಿತ ಯಶಸ್ಸು ದೊರೆಯಲಿದೆ. ನೀವು ಸರ್ಕಾರದಿಂದ ಲಾಭವನ್ನು ಪಡೆಯಲಿದ್ದೀರಿ. ವಿವಾಹಿತ ವ್ಯಕ್ತಿಗಳ ಕೌಟುಂಬಿಕ ಬದುಕು ಒತ್ತಡದಿಂದ ಕೂಡಿರಲಿದೆ. ಹೀಗಾಗಿ ಜೀವನ ಸಂಗಾತಿಯ ಮೂಡ್ ನೋಡಿಕೊಂಡು ಮಾತನಾಡುವುದು ಒಳ್ಳೆಯದು. ಪ್ರೇಮ ಸಂಬಂಧದಲ್ಲಿರುವ ಜನರು ತಮ್ಮ ಸಂಬಂಧದಲ್ಲಿ ಸಂತಸ ಕಂಡು ಕೊಳ್ಳಲಿದ್ದಾರೆ. ನಿಮ್ಮ ಪ್ರೇಮ ಸಂಗಾತಿಯು ನಿಮ್ಮ ಹೃದಯವನ್ನು ಗೆಲ್ಲಲು ಎಲ್ಲಾ ಪ್ರಯತ್ನ ಮಾಡಲಿದ್ದಾರೆ. ನಿಮ್ಮ ಅಧ್ಯಯನಕ್ಕೆ ಇದು ಸಕಾಲ. ವಿದ್ಯಾರ್ಥಿಗಳು ಉತ್ತಮ ಫಲಿತಾಂಶ ಪಡೆಯಲಿದ್ದಾರೆ. ವಾರದ ಕೊನೆಯ ದಿನಗಳು ಪ್ರಯಾಣಕ್ಕೆ ಅತ್ಯುತ್ತಮ.