Breaking News

ಲೈಸನ್ಸ್ ಇಲ್ಲದೆ ನಾಡ ಪಿಸ್ತೂಲ್ ಇಟ್ಟುಕೊಂಡು ಬೈಕ್ ಮೇಲೆ ತೆರಳುತ್ತಿದ್ದ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.

Spread the love

ವಿಜಯಪುರ:  ಲೈಸನ್ಸ್ ಇಲ್ಲದೆ ನಾಡ ಪಿಸ್ತೂಲ್ ಇಟ್ಟುಕೊಂಡು ಬೈಕ್ ಮೇಲೆ ತೆರಳುತ್ತಿದ್ದ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.

ಯಾದಗಿರಿ ಜಿಲ್ಲೆಯ ಯಾಳಗಿ ಗ್ರಾಮದ ರಾಮರೆಡ್ಡಿ ಮಾಲಿಪಾಟೀಲ್, ಬೆಂಗಳೂರಿನ ಶ್ರೀರಾಮಪುರಂದ ಸುರೇಶ್ ತುಂಗರಾಜ, ವಿನೋದ ರಾಜಾ ಬಂಧಿತ ಆರೋಪಿಗಳು.

ಇಲ್ಲಿನ ರಿಂಗ್ ರಸ್ತೆಯಲ್ಲಿನ ಜಮಖಂಡಿ ನಾಕಾ ಬಳಿ  ಬೈಕ್ ಮೇಲೆ ತೆರಳುತ್ತಿದ್ದ ಮೂವರು  ವಾಹನ ತಪಾಸಣೆ  ವೇಳೆ ಸಿಕ್ಕಿ ಬಿದ್ದಿದ್ದು,  ಎರಡು ಮಚ್ಚು,  ಒಂದು ನಾಡ ಪಿಸ್ತೂಲ್, ಜೀವಂತ ಗುಂಡು ಪತ್ತೆಯಾಗಿವೆ.  ಮೂವರನ್ನು ವಶಕ್ಕೆ ಪಡೆದ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ವೈಯಕ್ತಿಕ ರಕ್ಷಣೆಗಾಗಿ ಪಿಸ್ತೂಲ್ ಇಟ್ಟುಕೊಂಡಿರುವುದಾಗಿ ಆರೋಪಿಗಳು  ಹೇಳಿಕೆ ನೀಡಿದ್ದಾರೆ.

ಇನ್ನು ಇತ್ತೀಚಿಗಷ್ಟೇ ಚಡಚಣ ತಾಲೂಕಿನ ಅರಕೇರಿ ತಾಂಡಾ ಬಳಿ ಮಹಾದೇವ ಸಾಹುಕಾರ್ ಮೇಲೆ ಫೈರಿಂಗ್ ಘಟನೆ ನಡೆದಿದ್ದು, ಪ್ರಕರಣ ಗಂಭೀರವಾಗಿ  ಪರಿಗಣಿಸಿರುವ  ಜಿಲ್ಲಾ ಪೊಲೀಸರು ಫುಲ್ ಅಲರ್ಟ್ ಆಗಿದ್ದಾರೆ. ಪ್ರತಿಯೊಂದು ವಾಹನಗಳ ತಪಾಸಣೆ ನಡೆಸುತ್ತಿದ್ದಾರೆ.  ಇದೇ ವೇಳೆ ಆರೋಪಿಗಳು  ಪೊಲೀಸ್ ಬಲೆಗೆ ಬಿದ್ದಿದ್ದಾರೆ.


Spread the love

About Laxminews 24x7

Check Also

ಕಬ್ಬು ಬೆಳೆಗಾರರಿಗೆ 300 ಕೋಟಿ ರೂ. ಬಿಡುಗಡೆ: ಸಚಿವ ಶಿವಾನಂದ ಪಾಟೀಲ

Spread the loveವಿಜಯಪುರ : ರಾಜ್ಯ ಸರ್ಕಾರ ಘೋಷಣೆ ಮಾಡಿದಂತೆ 2025-26ನೇ ಸಾಲಿನಲ್ಲಿ ರಾಜ್ಯದ ಸಕ್ಕರೆ ಕಾರ್ಖಾನೆಗಳಿಗೆ ಕಬ್ಬು ಪೂರೈಕೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ