Breaking News

ಏನೇನೊ ‌ಭಾಗ್ಯ ಕೊಟ್ಟಿರಿ, ನೀರಿನ ಭಾಗ್ಯ ಬೇಡವೇ? ಹಾಸನ ಉಸ್ತುವಾರಿ ಸಚಿವ ರಾಜಣ್ಣ ವಿರುದ್ಧ ಮಾಜಿ ಶಾಸಕ ಲಿಂಗೇಶ್ ವಾಗ್ದಾಳಿ

Spread the love

ಹಾಸನ‌ ಜಿಲ್ಲೆಯ ಜನರಿಗೆ ಅನ್ಯಾಯ ಮಾಡಿ ನೀರು ಹರಿಸಲಾಗಿದೆ. ಏನೇನೊ ‌ಭಾಗ್ಯ ಕೊಟ್ಟಿರಿ, ನೀರಿನ ಭಾಗ್ಯ ಬೇಡವೇ? ಎಂದು ಸರ್ಕಾರದ ವಿರುದ್ಧ ಮತ್ತು ಹಾಸನ ಉಸ್ತುವಾರಿ ಸಚಿವ ರಾಜಣ್ಣ ವಿರುದ್ಧ ಮಾಜಿ ಶಾಸಕ ಮಾಜಿ ಶಾಸಕ ಕೆ.ಎಸ್.ಲಿಂಗೇಶ್ ವಾಗ್ದಾಳಿ ನಡೆಸಿದ್ದಾರೆ.

 

ಹಾಸನ ತಾಲ್ಲೂಕಿನ ಹೇಮಾವತಿ ಜಲಾಶಯದ ಎದುರು ನಡೆಯುತ್ತಿರೊ ಪ್ರತಿಭಟನೆಯಲ್ಲಿ ಹಾಸನ ಉಸ್ತುವಾರಿ ಸಚಿವ ಎಲ್ಲಿದಿಯಪ್ಪಾ? ನೀರಾವರಿ ಸಲಹಾ ಸಮಿತಿ ಸಭೆ ಕರೆಯದೆ ಹೇಗಪ್ಪಾ ನೀರು ಬಿಟ್ರಿ? ನಿಮ್ಮ ಜಿಲ್ಲೆಗೆ ಹನ್ನೊಂದು ಟಿಎಂಸಿ ನೀರು ಬಿಟ್ಕೊಂಡ್ರಿ. ಹಾಸನ‌ ಜಿಲ್ಲೆಯ ಜನರಿಗೆ ಅನ್ಯಾಯ ಮಾಡಿ ನೀರು ಹರಿಸಲಾಗಿದೆ. ಏನೇನೊ ‌ಭಾಗ್ಯ ಕೊಟ್ಟಿರಿ, ನೀರಿನ ಭಾಗ್ಯ ಬೇಡವೇ? ಎಂದು ಸರ್ಕಾರದ ವಿರುದ್ಧ ಮತ್ತು ಹಾಸನ ಉಸ್ತುವಾರಿ ಸಚಿವ ರಾಜಣ್ಣ (Minister in charge of Hassan KN Rajanna)ವಿರುದ್ಧ ಮಾಜಿ ಶಾಸಕ ಮಾಜಿ ಶಾಸಕ ಕೆ.ಎಸ್.ಲಿಂಗೇಶ್ ( Former MLA KS Lingesh) ವಾಗ್ದಾಳಿ ನಡೆಸಿದ್ದಾರೆ. ಜಿಲ್ಲೆಯಲ್ಲಿ ವರ್ಗಾವಣೆಯಲ್ಲಿ ಗೆಬರಿಕೊಂಡು ಆಯ್ತಲ್ಲ ಎಂದು ಕಾವೇರಿ ನೀರು ತಮಿಳುನಾಡಿಗೆ ಬಿಡದಂತೆ ಆಗ್ರಹಿಸಿ ಹೋರಾಟದಲ್ಲಿ ಮಾಜಿ ಶಾಸಕ ಲಿಂಗೇಶ್ ಹೇಳಿದ್ದಾರೆ.


Spread the love

About Laxminews 24x7

Check Also

ವರದಕ್ಷಿಣೆ ಕಿರುಕುಳ ಆರೋಪ, ಐಎಸ್‌ಡಿ ಡಿವೈಎಸ್‌ಪಿ ವಿರುದ್ಧ ಎಫ್ಐಆರ್

Spread the love ಬೆಂಗಳೂರು : ಡಿವೈಎಸ್‌ಪಿಯೊಬ್ಬರ ವಿರುದ್ಧ ಪತ್ನಿಗೆ ವರದಕ್ಷಿಣೆ ಕಿರುಕುಳ ನೀಡಿದ ಆರೋಪ ಕೇಳಿ ಬಂದಿದೆ. 41 ವರ್ಷದ ಮಹಿಳೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ