ಬೆಂಗಳೂರು : ಕೇಂದ್ರ ಸರ್ಕಾರದ ಮಟ್ಟದಲ್ಲಿ ಕರ್ನಾಟಕದ ವಿಚಾರ ಬಂದಾಗ ಅನಂತಕುಮಾರ್ ಅವರು ಆಪದ್ಬಾಂಧವರಾಗಿದ್ದರು. ಈಗ ರಾಜ್ಯಕ್ಕೆ ಮತ್ತು ಬಿಜೆಪಿಗೆ ಅವರ ಅಗತ್ಯವಿತ್ತು ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಭಿಪ್ರಾಯಪಟ್ಟಿದ್ದಾರೆ.
ಕೇಂದ್ರದ ಮಾಜಿ ಸಚಿವ ದಿ ಅನಂತಕುಮಾರ್ ಜನ್ಮದಿನದ ಅಂಗವಾಗಿ ಏರ್ಪಡಿಸಿದ್ದ ಅನಂತಕುಮಾರ್ 64 ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಅನಂತಕುಮಾರ್ ಅವರು ಅನಂತವಾದ ಬದುಕನ್ನು ಅಲ್ಪ ಸಮಯದಲ್ಲಿ ಇದ್ದು, ಯಶಸ್ಸು ಸಾಧನೆಗಳನ್ನು ಮಾಡಿ ಅತಿ ಚಿಕ್ಕ ವಯಸ್ಸಿನಲ್ಲಿ ಬಿಟ್ಟು ಹೋಗಿದ್ದಾರೆ. ಅನಂತಕುಮಾರ್ ನಾನು ಕ್ಲಾಸ್ ಮೇಟ್. ನಾನು ಏನಾದರು ತಪ್ಪು ಮಾಡಿದ್ದರೆ, ಅವರು ಕರೆಕ್ಷನ್ ಮಾಡುತ್ತಿದ್ದರು ಎಂದರು.
ಅನಂತನಮನ 64 ಕಾರ್ಯಕ್ರಮಅವರಿಗೆ ಬಹಳ ಉತ್ಸಾಹಿ ಹಾಗೂ ದೂರದೃಷ್ಟಿಯುಳ್ಳ ನಾಯಕತ್ವದ ಗುಣ ಇತ್ತು. ನಾವು ಕಾಲೇಜಿನಲ್ಲಿ ಕ್ಯಾಂಟೀನ್ನಲ್ಲಿ ಟಿ ಕುಡಿಯುವಾಗ ಎಮರ್ಜೆನ್ಸಿ ವಿರುದ್ದ ಪ್ರತಿಭಟನೆ ಮಾಡೋಣ ಅಂತ ಹೇಳಿದರು. ಅವರನ್ನು ವಿದ್ಯಾರ್ಥಿ ಸಂಘಟನೆಯ ಜನರಲ್ ಸೆಕ್ರೆಟರಿ ಮಾಡಿದ್ದೆವು. ಅವರು ಪ್ರತಿಭಟನೆಯಲ್ಲಿ ಅರೆಸ್ಟ್ ಆಗಿ ನಾಲ್ಕು ತಿಂಗಳು ಜೈಲಿಗೆ ಹೋಗಿದ್ದರು. ಆದರೆ, ಸದಾ ಕಾಲ ಉತ್ಸಾಹ ಕಡಿಮೆಯಾಗಲಿಲ್ಲ. ಹುಬ್ಬಳ್ಳಿಯಲ್ಲಿ ಎಂಟಿಎಸ್ ಕಾಲೋನಿ ಅವರ ತಾಯಿ ಗಿರಿಜಾ ಶಾಸ್ತ್ರಿ ಅವರಲ್ಲಿ ದೇಶ ಭಕ್ತಿ ಮತ್ತು ಹೋರಾಟದ ಛಲ ಇತ್ತು. ಅವರ ತಂದೆ ಶಿಸ್ತಿನ ವ್ಯಕ್ತಿ, ಅವರಿಬ್ಬರ ಗುಣಗಳು ಅನಂತಕುಮಾರ್ ಅವರಿಗೆ ಬಂದಿತ್ತು ಎಂದು ಸ್ಮರಿಸಿದರು.