ಧಾರವಾಡ : ಅಯೋಧ್ಯೆಯ ಶ್ರೀರಾಮ ಮಂದಿರದ ಗರ್ಭಗುಡಿ ಹಾಗೂ ಮಂದಿರದ ಮೂರ್ತಿ ಪ್ರತಿಷ್ಠಾಪನೆ ಸಮಿತಿ ಸದಸ್ಯರಿಗೆ ಧಾರವಾಡದಲ್ಲಿ ಮಾಜಿ ಮೇಯರ್ ಹಾಗೂ ಪಾಲಿಕೆ ಸದಸ್ಯ ಈರೇಶ ಅಂಚಟಗೇರಿ ಸನ್ಮಾನಿಸಿ ಗೌರವಿಸಿದರು.
ಕರ್ನಾಟಕದ ಕಲಬುರ್ಗಿ ಜಿಲ್ಲೆಯ ಮಾನಯ್ಯ ಬಡಿಗೇರ ಅವರು ಇಂದು ಧಾರವಾಡಕ್ಕೆ ಆಗಮಿಸಿದ ಸಂದರ್ಭದಲ್ಲಿ ಅವರನ್ನ ಮಾಜಿ ಮಹಾಪೌರರಾದ ಈರೇಶ ಅಂಚಟಗೇರಿ ರವರು ಭೇಟಿ ನೀಡಿ ಧಾರವಾಡ ಪೇಢಾ ನೀಡಿ ಆತ್ಮೀವಾಗಿ ಸನ್ಮಾನಿಸಿ, ಅಭಿನಂದಿಸಿ ಶುಭ ಕೋರಿದರು
ಕೋಟ್ಯಾಂತರ ಹಿಂದುಗಳ ಆರಾಧ್ಯ ದೈವ ಪ್ರಭು ಶ್ರೀ ರಾಮನ ಮಂದಿರ ನಿರ್ಮಾಣ ಕಾರ್ಯ ಸುಗಮವಾಗಿ ಸಾಗಲಿ ಹಾಗೂ ಈ ಮಹತ್ವಾಕಾಂಕ್ಷೆಯ ಯೋಜನೆಗೆ ಕರ್ನಾಟಕದಿಂದ ತಮ್ಮ ಕಾರ್ಯವು ಯಾವತ್ತೂ ಅಜರಾಮರವಾಗಿರಲಿ.
ಭಗವಂತ ತಮಗೆ ಇನ್ನು ಹೆಚ್ಚಿನ ಆಯುರಾರೋಗ್ಯ ನೀಡಿ ಶೀಘ್ರವಾಗಿ ಪ್ರಭು ಶ್ರೀ ರಾಮಮಂದಿರ ನಿರ್ಮಾಣವಾಗಿ ಶ್ರೀ ರಾಮನ ದರ್ಶನವಾಗಲೆಂದು ಹಾರೈಸಿದ್ರು.