Breaking News

ದಳಪತಿ ವಿಜಯ್​ ನಟನೆಯ ‘ಲಿಯೋ’ ಚಿತ್ರದ ಕನ್ನಡ ಪೋಸ್ಟರ್​ ಔಟ್​

Spread the love

ಚಿತ್ರತಂಡ ‘ಲಿಯೋ’ ಸಿನಿಮಾದ ಕನ್ನಡ ಪೋಸ್ಟರ್​ ಅನ್ನು ಅನಾವರಣಗೊಳಿಸಿದೆ.

ಕಾಲಿವುಡ್​ ಸೂಪರ್​ಸ್ಟಾರ್​ ನಟ ದಳಪತಿ ವಿಜಯ್​ ಅವರ ‘ಲಿಯೋ’ 2023ರ ಬಹುನಿರೀಕ್ಷಿತ ಚಿತ್ರಗಳಲ್ಲಿ ಒಂದಾಗಿದೆ. ಲೋಕೇಶ್​ ಕನಕರಾಜ್​ ನಿರ್ದೇಶನದ ಈ ಸಿನಿಮಾವು ಅಕ್ಟೋಬರ್​ನಲ್ಲಿ ಬಿಡುಗಡೆಯಾಗಲಿದೆ.

ಈಗಾಗಲೇ ಚಿತ್ರದ ಶೂಟಿಂಗ್​ ಅಂತಿಮ ಹಂತಕ್ಕೆ ತಲುಪಿದೆ. ಇದೀಗ ಚಿತ್ರತಂಡ ‘ಲಿಯೋ’ದ ಕನ್ನಡ ಪೋಸ್ಟರ್​ ಅನ್ನು ಅನಾವರಣಗೊಳಿಸಿದೆ. ಸೋಷಿಯಲ್​ ಮೀಡಿಯಾದಲ್ಲಿ ‘ಲಿಯೋ’ ಸಿನಿಮಾದ ಕನ್ನಡ ಪೋಸ್ಟರ್​ ಸಖತ್​ ವೈರಲ್​ ಆಗುತ್ತಿದೆ.

‘ಲಿಯೋ’ ಸಿನಿಮಾದ ನಿರ್ಮಾಣ ಸಂಸ್ಥೆ ಸೆವೆನ್​ ಸ್ಕ್ರೀನ್​ ಸ್ಟುಡಿಯೋ ಪೋಸ್ಟರ್ ​ಅನ್ನು ಬಿಡುಗಡೆ ಮಾಡಿದೆ. “ಶಾಂತವಾಗಿರಿ ಮತ್ತು ನಿಮ್ಮನ್ನು ನೀವು ಪಾರು ಮಾಡಿಕೊಳ್ಳಲು ಸಂಚು ರೂಪಿಸಿ. #LeoPosterFeast ಕಥೆಗಳನ್ನು ಅನಾವರಣಗೊಳಿಸುತ್ತದೆ. ಒಂದು ಸಮಯದಲ್ಲಿ ಒಂದು ಪೋಸ್ಟರ್​. ಕನ್ನಡದಲ್ಲಿ ಲಿಯೋ ಭರ್ಜರಿ ರಿಲೀಸ್​” ಎಂಬ ಶೀರ್ಷಿಕೆಯೊಂದಿಗೆ ಲಿಯೋ ಕನ್ನಡ ಪೋಸ್ಟರ್​ ಅನಾವರಣಗೊಂಡಿದೆ. ಕ್ರೈಂ ಸೀನ್​ನಂತೆ ಕಾಣುವ ಹಿನ್ನೆಲೆಯಲ್ಲಿ ವಿಜಯ್​ ಕುಳಿತಿದ್ದಾರೆ. ಗನ್​ವೊಂದರ ಒಳಗೆ ಈ ಚಿತ್ರ ಕಾಣುತ್ತದೆ.

 

 

ಸಂಜಯ್​ ದತ್​ ಫಸ್ಟ್​ ಲುಕ್​ ಔಟ್: ಇದಕ್ಕೂ ಮುನ್ನ ‘ಲಿಯೋ’ ಚಿತ್ರದಿಂದ ಸಂಜಯ್​ ದತ್​ ಅವರ ಫಸ್ಟ್​ ಲುಕ್​ ಅನ್ನು ಹಂಚಿಕೊಳ್ಳಲಾಗಿತ್ತು. ಅವರ ಜನ್ಮದಿನದಂದೇ ಪೋಸ್ಟರ್​ ಅನಾವರಣಗೊಂಡಿತ್ತು. ಚಿತ್ರದಲ್ಲಿ ಅವರ ಪಾತ್ರದ ಹೆಸರು ಆಂಟೋನಿ ದಾಸ್​. ಸೌತ್​ ಸಿನಿಮಾದಲ್ಲಿ ಸಂಜಯ್​ ದತ್​ ಮತ್ತೊಮ್ಮೆ ವಿಲನ್​ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಆಂಟೋನಿ ದಾಸ್​ ಲುಕ್​ ಅದ್ಭುತವಾಗಿದೆ.


Spread the love

About Laxminews 24x7

Check Also

ನೂರಾರು ನವಜಾತ ಶಿಶುಗಳ ಜೀವ ಉಳಿಸಿದ ಲೇಡಿಗೋಷನ್ ಆಸ್ಪತ್ರೆ

Spread the loveಮಂಗಳೂರು: ಮಂಗಳೂರಿನ ಲೇಡಿಗೋಷನ್ ಸರ್ಕಾರಿ ಆಸ್ಪತ್ರೆಯಲ್ಲಿ, ತಾಯಿಯ ಮಮತೆಯಷ್ಟೇ ಪವಿತ್ರವಾದೊಂದು ಕ್ರಾಂತಿಕಾರಿ ಯೋಜನೆ ನಿಶ್ಯಬ್ದವಾಗಿ ನಡೆಯುತ್ತಿದೆ. ‘ಅಮೃತ ಘಟಕ’ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ