ಬೆಂಗಳೂರು: ಭಾನುವಾರ( ಸೆ.17) ಪ್ರಧಾನಿ ನರೇಂದ್ರ ಮೋದಿ ಅವರ 73ನೇ ವರ್ಷದ ಜನ್ಮದಿನ ಆಚರಿಸಲಾಯಿತು.
ಈ ಪ್ರಯುಕ್ತ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಅವರ ನೇತೃತ್ವದಲ್ಲಿ ರಕ್ತದಾನ ಶಿಬಿರ, ಆಯುಷ್ಮಾನ್ ಭಾರತ್ ಕಾರ್ಡ್ಗಳ ನೋಂದಣಿ ಹಾಗೂ ಮೋದಿ ಕ್ರಿಕೆಟ್ ಕಪ್ ಆಯೋಜನೆ ಮಾಡಲಾಗಿತ್ತು.
ಮೋದಿ ಕ್ರಿಕೆಟ್ ಕಪ್ ಆಯೋಜನೆಬಿಜೆಪಿ ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷರೂ ಆಗಿರುವ ತೇಜಸ್ವಿ ಸೂರ್ಯ ಅವರು, ಪ್ರಧಾನಿ ಮೋದಿಯವರ ಜನ್ಮದಿನದ ಪ್ರಯುಕ್ತ ಇಡೀ ದೇಶಾದ್ಯಂತ ಒಂದು ವಾರ ರಕ್ತದಾನ ಶಿಬಿರಗಳನ್ನು ಆಯೋಜಿಸಿದ್ದು, ಇದೇ ಕಾರಣಕ್ಕಾಗಿ ಬೆಂಗಳೂರು ದಕ್ಷಿಣದಲ್ಲಿ 2 ದಿನಗಳ ಟೆನ್ನಿಸ್ ಬಾಲ್ ಮೋದಿ ಕ್ರಿಕೆಟ್ ಕಪ್ ಕೂಡ ಆಯೋಜಿಸಿದ್ದರು.
ಪ್ರಧಾನಿ ಹುಟ್ಟುಹಬ್ಬದ ಹಿನ್ನೆಲೆ ರಕ್ತದಾನ ಶಿಬಿರಆಯುಷ್ಮಾನ್ ಭಾರತ್ ಕಾರ್ಡ್ಗಳ ನೋಂದಣಿ: ಮೋದಿ ಕ್ರಿಕೆಟ್ ಕಪ್ ಜೊತೆ ಜೊತೆಯಲ್ಲಿಯೇ ಸ್ವಯಂ ಸೇವಕರ ತಂಡವು ಆಯುಷ್ಮಾನ್ ಭಾರತ್ ಕಾರ್ಡ್ಗಳ ನೋಂದಣಿ ( 1 ಕುಟುಂಬಕ್ಕೆ ವಾರ್ಷಿಕ 5 ಲಕ್ಷ ರೂ.ವರೆಗಿನ ವಿಮಾ ಸೌಲಭ್ಯ) ಮತ್ತು ಕ್ಷೇತ್ರದಾದ್ಯಂತ ಹಲವಾರು ಸ್ವಚ್ಛತಾ ಅಭಿಯಾನಗಳನ್ನು ಹಮ್ಮಿಕೊಂಡಿದ್ದರು.