ಗಣೇಶೋತ್ಸವಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿ ಇರುವ ಹಿನ್ನೆಲೆಯಲ್ಲಿ ಬೆಳಗಾವಿ ಮಹಾನಗರ ಪಾಲಿಕೆ ಆಡಳಿತವು ನಗರದ ಗಣೇಶೋತ್ಸವ ವಿಸರ್ಜನಾ ಹೊಂಡಗಳನ್ನು ಸ್ವಚ್ಛಗೊಳಿಸುವ ಕಾರ್ಯಕ್ಕೆ ಮುಂದಾಗಿದೆ
ಬೆಳಗಾವಿ ಮಹಾನಗರ ಪಾಲಿಕೆ ವತಿಯಿಂದ ನಗರದ ಇಂದ್ರಪ್ರಸ್ಥನಗರದಲ್ಲಿರುವ ಜಕ್ಕಿನಹೊಂಡ ಕೆರೆಯನ್ನು ಸ್ವಚ್ಛಗೊಳಿಸಲಾಯಿತು.
ನಗರದಲ್ಲಿ ಸಾರ್ವಜನಿಕ ಗಣೇಶ ಮೂರ್ತಿ ವಿಸರ್ಜನೆಯನ್ನು ಕಪಿಲೇಶ್ವರ ಕೆರೆ, ಜಕ್ಕಿನಹೊಂಡ ಕೆರೆ, ಅಂಗೋಲ್ ಕೆರೆ ಮುಂತಾದೆಡೆ ಮಾಡಲಾಗುತ್ತದೆ. ಈ ಎಲ್ಲ ಕೆರೆಗಳ ಸ್ವಚ್ಛತೆ, ಸಣ್ಣಪುಟ್ಟ ದುರಸ್ತಿ, ಬಣ್ಣ
ಬಳಿಯುವುದು ಇತ್ಯಾದಿ ಕಾರ್ಯ ಪ್ರಗತಿಯಲ್ಲಿದೆ. ಗಣೇಶ ಬರುವ ಮುನ್ನವೇ ಈ ಎಲ್ಲ ಕಾಮಗಾರಿಗಳನ್ನು ಪೂರ್ಣಗೊಳಿಸಲು ನಗರಸಭೆ ನಿರ್ಧರಿಸಿದೆ.
ಗಣೇಶೋತ್ಸವ ಸಮೀಪಿಸುತ್ತಿದ್ದಂತೆ ಮಳೆನೀರು ಹೊಂಡದಲ್ಲಿನ ಕಲುಷಿತ ನೀರನ್ನು ವಿದ್ಯುತ್ ಪಂಪ್ ಮೂಲಕ ಹೊರ ಹಾಕಲಾಯಿತು. ಕೆರೆಯಲ್ಲಿ ನೀರು ಕಡಿಮೆಯಾದ ನಂತರ ಹೂಳು ತೆಗೆಯಲಾಯಿತು