Breaking News

ಇಂಡಿಯಾ ಬದಲು ಭಾರತದ ಪ್ರಧಾನಿ ಎಂದು ಉಲ್ಲೇಖ.. ಮೋದಿ ಇಂಡೋನೇಷ್ಯಾ ಭೇಟಿಯ ಅಧಿಕೃತ ಪತ್ರ ಹಂಚಿಕೊಂಡ ಬಿಜೆಪಿ

Spread the love

ನವದೆಹಲಿ: ಇಂದು ಪ್ರಧಾನಿ ನರೇಂದ್ರ ಮೋದಿ ಅವರು ಇಂಡೋನೇಷ್ಯಾಗೆ ಭೇಟಿ ನೀಡುತ್ತಿದ್ದಾರೆ. ಈ ಅಧಿಕೃತ ಮಾಹಿತಿಯನ್ನು ಬಿಜೆಪಿ ವಕ್ತಾರ ಸಂಬಿತ್ ಪಾತ್ರ ಹಂಚಿಕೊಂಡಿದ್ದಾರೆ. ಅವರು ಹಂಚಿಕೊಂಡಿರುವ ಮಾಹಿತಿಯಲ್ಲಿ ಮೋದಿ ಅವರನ್ನು “ಭಾರತದ ಪ್ರಧಾನಿ” ಎಂದು ಉಲ್ಲೇಖಿಸಲಾಗಿದೆ. ಇದಲ್ಲದೆ, ಆಗಸ್ಟ್ 22-25 ರಂದು ದಕ್ಷಿಣ ಆಫ್ರಿಕಾ ಮತ್ತು ಗ್ರೀಸ್‌ಗೆ ಅವರ ಇತ್ತೀಚಿನ ಭೇಟಿಯ ಸಂದರ್ಭದಲ್ಲಿ ಸಮಾರಂಭದ ಪತ್ರಗಳಲ್ಲಿ ಮೋದಿ ಅವರನ್ನು ‘ಭಾರತದ ಪ್ರಧಾನ ಮಂತ್ರಿ’ ಎಂದು ಉಲ್ಲೇಖಿಸಲಾಗಿತ್ತು.

20ನೇ ಆಸಿಯಾನ್ಚ-ಭಾರತ ಶೃಂಗಸಭೆ ಮತ್ತು 18ನೇ ಪೂರ್ವ ಏಷ್ಯಾ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಪ್ರಧಾನಿ ಮೋದಿ ಇಂದು ರಾತ್ರಿ ಇಂಡೋನೇಷ್ಯಾಕ್ಕೆ ತೆರಳಲಿದ್ದಾರೆ. ಪ್ರಧಾನಿ ಮೋದಿಯವರನ್ನು ‘ಭಾರತದ ಪ್ರಧಾನಮಂತ್ರಿ’ ಎಂದು ಹೇಳುವ ಮೊದಲು, ಅಧ್ಯಕ್ಷ ದ್ರೌಪದಿ ಮುರ್ಮು ಅವರಿಗೆ ಜಿ20 ಔತಣಕೂಟಕ್ಕೆ ಕಳುಹಿಸಿದ ಆಮಂತ್ರಣ ಪತ್ರದಲ್ಲಿ ಅವರನ್ನು ‘ಭಾರತದ ರಾಷ್ಟ್ರಪತಿ’ ಎಂದು ಉಲ್ಲೇಖಿಸಲಾಗಿದೆ. ಈ ವಿಚಾರವಾಗಿ ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ತೀವ್ರ ವಾಗ್ವಾದ ನಡೆಯಿತು.

ಇಂಡಿಯಾ’ ಎಂಬ ಪದವನ್ನು ತೆಗೆದುಹಾಕಲು ಸರ್ಕಾರ ಯೋಜಿಸುತ್ತಿದೆ ಮತ್ತು ದೇಶದ ಹೆಸರು ‘ಭಾರತ’ ಎಂದು ಮಾತ್ರ ಉಳಿಯುತ್ತದೆ ಎಂದು ವಿರೋಧ ಪಕ್ಷಗಳು ಆರೋಪಿಸಿದವು. ಬಿಜೆಪಿಯ ಹಿರಿಯ ನಾಯಕರು ಮತ್ತು ಸಚಿವರು ರಾಷ್ಟ್ರಪತಿ ಭವನದ ಈ ಕ್ರಮವನ್ನು ಶ್ಲಾಘಿಸಿದರು. ದೇಶದ ಹೆಸರೇ ಭಾರತ ಎಂದಿರುವಾಗ ‘ಭಾರತದ ರಾಷ್ಟ್ರಪತಿ’ ಎಂದು ಹೇಳುವುದರಲ್ಲಿ ಏನು ತೊಂದರೆ ಎಂದು ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಪ್ರಶ್ನಿಸಿದರು.

ಈ ನಡೆಯ ಬಗ್ಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್, ಮೋದಿ ಸರ್ಕಾರ ಎಷ್ಟು ಗೊಂದಲದಲ್ಲಿದೆ ನೋಡಿ.. ವಿರೋಧ ಪಕ್ಷಗಳು ಸೇರಿ ಇಂಡಿಯಾ ಎಂದು ಕರೆದುಕೊಂಡ ಮಾತ್ರಕ್ಕೆ ಇದೆಲ್ಲಾ ನಾಟಕಗಳು ಶುರುವಾದವು ಎಂದು ಸಾಮಾಜಿಕ ಮಾಧ್ಯಮ ಎಕ್ಸ್​ ಪೋಸ್ಟ್​ನಲ್ಲಿ ಬರೆದುಕೊಂಡಿದ್ದಾರೆ.


Spread the love

About Laxminews 24x7

Check Also

ವರದಕ್ಷಿಣೆ ಕಿರುಕುಳ ಆರೋಪ, ಐಎಸ್‌ಡಿ ಡಿವೈಎಸ್‌ಪಿ ವಿರುದ್ಧ ಎಫ್ಐಆರ್

Spread the love ಬೆಂಗಳೂರು : ಡಿವೈಎಸ್‌ಪಿಯೊಬ್ಬರ ವಿರುದ್ಧ ಪತ್ನಿಗೆ ವರದಕ್ಷಿಣೆ ಕಿರುಕುಳ ನೀಡಿದ ಆರೋಪ ಕೇಳಿ ಬಂದಿದೆ. 41 ವರ್ಷದ ಮಹಿಳೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ