Breaking News

ಬಾಲಿವುಡ್​ ಕಿಲಾಡಿ ಅಕ್ಷಯ್​ ಕುಮಾರ್​ ಭಾರತದ ಅತ್ಯಂತ ಯಶಸ್ವಿ ನಟನಾಗಿ ಹೊರಹೊಮ್ಮಿದ್ದಾರೆ.

Spread the love

ಬಣ್ಣದ ಲೋಕವೇ ಹೀಗೆ ಅಲ್ಲವೇ! ನೂರು ಸಿನಿಮಾ ಮಾಡಿದ್ರೂ ಸಿಗದೇ ಇರೋ ಕ್ರೇಜ್​, ಸ್ಟಾರ್​ ಗಿರಿ ಪಟ್ಟ ಕೆಲವೊಬ್ಬರಿಗೆ ಒಂದೇ ಚಿತ್ರದಲ್ಲಿ ದಕ್ಕಿಬಿಡುತ್ತದೆ.

ಇನ್ನು ಕೆಲವರಿಗೆ ಹೀಗಲ್ಲ. ಅನೇಕ ವರ್ಷಗಳಿಂದ ಚಿತ್ರರಂಗದಲ್ಲಿದ್ದು, ತಮ್ಮ ಅಭಿನಯದ ಮೂಲಕ ಪ್ರೇಕ್ಷಕರ ಮನಸ್ಸನ್ನು ಪ್ರತಿ ಬಾರಿಯೂ ಗೆಲ್ಲುತ್ತಾ ಸ್ಟಾರ್​ ಹೀರೋಗಳಾಗಿದ್ದಾರೆ. ಡಾ.ರಾಜ್​ಕುಮಾರ್​, ಎನ್​ಟಿಆರ್​, ಅಮಿತಾಭ್​ ಬಚ್ಚನ್​ರಿಂದ ಹಿಡಿದು ರಜನಿಕಾಂತ್​, ಶಾರುಖ್​ ಖಾನ್​, ಯಶ್​, ಪ್ರಭಾಸ್​ ಹೀಗೆ ಅನೇಕರು ತಮ್ಮ ಕಠಿಣ ಶ್ರಮ, ಛಲದಿಂದ ಸ್ಟಾರ್​ ಪಟ್ಟಕ್ಕೆ ಏರಿದ್ದಾರೆ.

ಇವರೆಲ್ಲರೂ ತಮ್ಮ ಅದ್ಭುತ ಸಿನಿಮಾಗಳ ಮೂಲಕ ಬಾಕ್ಸ್​ ಆಫೀಸ್​ನಲ್ಲಿ ಹಲವು ದಾಖಲೆಗಳನ್ನು ಸೃಷ್ಟಿಸಿದ್ದಾರೆ. ಈ ಮಧ್ಯೆ ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ ಅತ್ಯಂತ ಯಶಸ್ವಿ ನಟನ ಪಟ್ಟವನ್ನು ಬಾಲಿವುಡ್​ ಸ್ಟಾರ್​ ನಟರೊಬ್ಬರು ಪಡೆದುಕೊಂಡಿದ್ದಾರೆ. ಇತ್ತೀಚೆಗಷ್ಟೇ ‘ಓ ಮೈ ಗಾಡ್​ 2’ ಸಿನಿಮಾ ಮೂಲಕ ಬಾಕ್ಸ್​ ಆಫೀಸ್​ ಕೊಳ್ಳೆ ಹೊಡೆದ ಸ್ಟಾರ್​ ನಟ ಅಕ್ಷಯ್​ ಕುಮಾರ್​ ಭಾರತದ ಅತ್ಯಂತ ಯಶಸ್ವಿ ನಟನಾಗಿ ಹೊರಹೊಮ್ಮಿದ್ದಾರೆ.

ಅಕ್ಷಯ್​ ಕುಮಾರ್​ ಸಿನಿಮಾಗಳು: ಸುಮಾರು 32 ವರ್ಷಗಳಿಂದ ಅಕ್ಷಯ್​ ತಮ್ಮ ಸಿನಿಮಾಗಳ ಮೂಲಕ ಪ್ರೇಕ್ಷಕರ ಮನಗೆದ್ದಿದ್ದಾರೆ. ಅವರ ಅನೇಕ ಸಿನಿಮಾಗಳು ಚಿತ್ರಮಂದಿರಗಳಲ್ಲಿ ಭಾರೀ ಸದ್ದು ಮಾಡಿ ಗಲ್ಲಾಪೆಟ್ಟಿಗೆಯಲ್ಲಿ ಹಣದ ಸುರಿಮಳೆಯನ್ನೇ ಹರಿಸಿವೆ. ಇವರ ಚಿತ್ರಗಳು ಭಾರತದಲ್ಲಿ 2023ರ ವೇಳೆಗೆ ಒಟ್ಟು 4,834 ಕೋಟಿ ರೂಪಾಯಿ ಸಂಗ್ರಹಿಸಿದೆ. ಆದರೆ, ಇದುವರೆಗೂ ಅವರ ಚಿತ್ರಗಳು ದೊಡ್ಡ ಮಟ್ಟದಲ್ಲಿ ಹಿಟ್​ ಕಾಣದೇ ಇದ್ದರೂ ಸಹ, ಅಕ್ಷಯ್​ ನಟನೆಯ 126 ಚಿತ್ರಗಳು ಸುಮಾರು 250 ಮಿಲಿಯನ್​ ಗಳಿಸಿದೆ. ಹಾಗಾಗಿ ಈ ಸ್ಟಾರ್ ಹೀರೋ ಸಿನಿಮಾಗಳು ವಿಶ್ವವ್ಯಾಪಿಯಾಗಿ 8000 ಕೋಟಿ ರೂಪಾಯಿ ಸಂಗ್ರಹಿಸಿವೆ.​


Spread the love

About Laxminews 24x7

Check Also

ಇನ್ಮುಂದೆ ಆನ್​ಲೈನ್ ಬೆಟ್ಟಿಂಗ್ ನಿಷೇಧ:

Spread the loveಬೆಂಗಳೂರು: ಆನ್​ಲೈನ್ ಬೆಟ್ಟಿಂಗ್ ಹಾಗೂ ಗ್ಯಾಂಬ್ಲಿಂಗ್​ಗೆ ಅಂಕುಶ ಹಾಕಲು ರಾಜ್ಯ ಸರ್ಕಾರ ಹೊಸ ಮಸೂದೆಯನ್ನು ರೂಪಿಸಿದೆ.‌ ಕರ್ನಾಟಕ ಪೊಲೀಸ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ