ಬೆಳಗಾವಿ : ಕಾರು ಮತ್ತು ಬೈಕ್ ಮಧ್ಯೆ ಮುಖಾಮುಖಿ ಡಿಕ್ಕಿಯಾದ ಪರಿಣಾಮ ದ್ವಿಚಕ್ರ ವಾಹನ ಮೇಲಿದ್ದ ಅಣ್ಣ-ತಂಗಿ ಸಾವನ್ನಪ್ಪಿರುವ ಘಟನೆ ಮಲಿಕವಾಡ-ನಣದಿವಾಡಿ ರಸ್ತೆಯಲ್ಲಿ ನಡೆದಿದೆ.
ಪ್ರಶಾಂತ ನಾಗರಾಜ ತುಳಸಿಕಟ್ಟಿ(21) ಮತ್ತು ಪ್ರಿಯಾಂಕ ನಾಗರಾಜ ತುಳಸಿಕಟ್ಟಿ (19) ಸಾವಿನಲ್ಲೂ ಒಂದಾದ ಅಣ್ಣ-ತಂಗಿ ಎಂದು ತಿಳಿದು ಬಂದಿದೆ.
ಮೂಲತಃ ಸದಲಗಾ ಪಟ್ಟಣದ ನಿವಾಸಿಗಳಾಗಿದ್ದು, ಮಂಗಳವಾರ ಮಧ್ಯಾಹ್ನ ಚಿಕ್ಕೋಡಿಯ ಪರಟಿನಾಗಲಿಂಗೇಶ್ವರ ದೇವಸ್ಥಾನಕ್ಕೆ ಎಂದು ದ್ವಿಚಕ್ರ ವಾಹನ ಮೇಲೆ ಹೋಗುತ್ತಿರುವ ಸಂದರ್ಭದಲ್ಲಿ ಕಾರ ಡಿಕ್ಕಿ ಹೊಡೆದಿದೆ. ಪರಿಣಾಮ ರಸ್ತೆ ಪಕ್ಕಕ್ಕೆ ಬಿದ್ದು ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದರು. ತಕ್ಷಣವೇ ಅವರನ್ನು ಚಿಕ್ಕೋಡಿ ಸಾರ್ವಜನಿಕ ಆಸ್ಪತ್ರೆಯ ಮೂಲಕ ಕೊಲ್ಹಾಪೂರದ ಕಣೇರಿಯ ಆಸ್ಪತ್ರೆಗೆ ಸಾಗಿಸುವಾಗ ದಾರಿ ಮಧ್ಯದಲ್ಲಿ ಸಾವನ್ನಪ್ಪಿದ್ದಾರೆ. ಇನ್ನು ಈ ಬಗ್ಗೆ ಸದಲಗಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Laxmi News 24×7