Breaking News

ದಿ. ಜಯಶ್ರೀ ಚಂದ್ರಶೇಖರ ಕೊಣ್ಣೂರ ಇವರ ಸ್ಮರಣಾರ್ಥ ನೂತನ ಶ್ರೀ ಮಲ್ಲಿಕಾರ್ಜುನ ಕಲ್ಯಾಣ ಮಂಟಪ ಉದ್ಘಾಟನೆ ಸಮಾರಂಭ

Spread the love

ಗೋಕಾಕ : ಖಾತ್ಯ ಉದ್ಯಮಿ ಚಂದ್ರಶೇಖರ ಕೊಣ್ಣೂರು ಅವರ ಧರ್ಮಪತ್ನಿ ಅವರ ದಿ. ಜಯಶ್ರೀ ಚಂದ್ರಶೇಖರ ಕೊಣ್ಣೂರು ಅವರ ಸ್ಮರಣಾರ್ಥವಾಗಿ ನೂತನವಾಗಿ ನಿರ್ಮಿಸಿರುವ ನೂತನ ಶ್ರೀ ಮಲ್ಲಿಕಾರ್ಜುನ ಕಲ್ಯಾಣ ಮಂಟಪ ಉದ್ಘಾಟನೆ ಸಮಾರಂಭ ನೆರವೇರಿತು.

ಮರಡಿ ಶಿವಾಪುರದ ಹೊರವಲಯದಲ್ಲಿ ನಿರ್ಮಿಸಿರುವ ಶ್ರೀ ಮಲ್ಲಿಕಾರ್ಜುನ ಕಲ್ಯಾಣ ಮಂಟಪ ಉದ್ಘಾಟನೆಯನ್ನು ಮಠಾಧೀಶರು ಹಾಗೂ ಗಣ್ಯರು ನೆರವೇರಿಸಿದರು.

ಈ ಸಂದರ್ಭದಲ್ಲಿ ದಿವ್ಯ ಸಾನಿಧ್ಯ ವಹಿಸಿರುವ ಸುಕ್ಷೇತ್ರ ಇಂಚಲ ಮಠದ ಪರಮಪೂಜ್ಯ ಶ್ರೀ ಡಾ ಶಿವಾನಂದ ಭಾರತಿ ಸ್ವಾಮೀಜಿ ಅವರು ಆಶೀರ್ವಚನವನ್ನು ನೀಡುತ್ತಾ ಜೀವನ ಸಾರ್ಥಕವಾಗಬೇಕೆಂದರೆ ಸಂಪತ್ತುವಿದ್ದಾಗ ಒಳ್ಳೆಯ ಕಾರ್ಯ, ದಾನ ಧರ್ಮ ಮಾಡಿದರೆ ಸಂಪತ್ತು ಐಶ್ವರ್ಯ ವೃದ್ದಿಯಾಗುತ್ತದೆ ಈ ಕಾರ್ಯವನ್ನು ಕೊಣ್ಣೂರು ಕುಟುಂಬದವರು ಮಾಡಿದ್ದಾರೆ ಎಂದು ಹೇಳಿದರು.

ನಂತರ ಶೂನ್ಯ ಸಂಪಾದನಮಠದ ಶ್ರೀ ಮುರುಘರಾಜೇಂದ್ರ ಸ್ವಾಮೀಜಿ ಅವರು ಮಾತನಾಡಿ ಗುರುಸೇವೆ ಮಾಡಿದರೆ ಒಂದು ದಿನದ ಆನಂದ , ಲಿಂಗ ಪೂಜೆ ಮಾಡಿದರೆ ಒಂದು ತಿಂಗಳ ಆನಂದ, ಜಂಗಮ ಸೇವೆ ಮಾಡಿದರೆ ಒಂದು ವರ್ಷ ಆನಂದ ಆದರೆ ಯಾವ ವ್ಯಕ್ತಿ ಜನಸೇವೆ ಮಾಡುತ್ತಾರೆ ಅವರಿಗೆ ನಿತ್ಯ ಆನಂದ ಸಿಗುತ್ತದೆ. ಚಂದ್ರಶೇಖರ ಕೊಣ್ಣೂರು ಅವರು ಮಾಡುತ್ತಿರುವ ಜನರ ಸೇವೆ ಅತ್ಯುತ್ತಮವಾದುದ್ದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಹರಳಿಕಟ್ಟಿ ಬ್ರಹ್ಮ ವಿದ್ಯಾಶ್ರಮದ ಶ್ರೀ ನಿಜಗುಣ ಸ್ವಾಮೀಜಿಗಳು, ಮಮದಾಪುರದ ಶ್ರೀ ಚರಮೂರ್ತೀಶ್ವರ ಸ್ವಾಮೀಜಿ, ಮರಡಿಶಿವಾಪುರದ ಗಂಗಯ್ಯಾ ಹೀರೆಮಠ ಸ್ವಾಮಿಜೀ, ಅಭಿಷೇಕ ಕಂಬಿ, ಸಾನಿಧ್ಯವನ್ನು ವಹಿಸಿದರು.

ಉದ್ಘಾಟಕರಾಗಿ ಯುವ ನಾಯಕ ರಾಹುಲ್ ಜಾರಕಿಹೊಳಿ, ಸರ್ವೋತ್ತಮ ಜಾರಕಿಹೊಳಿ, ಅಥಿತಿಗಳಾಗಿ ಸಿದ್ದಲಿಂಗ ದಳವಾಯಿ, ರಾಜು ಮುನ್ನವಳಿ, ಶ್ಯಾಮಾನಂದ ಪೂಜಾರಿ ಸೇರಿದಂತೆ ಅನೇಕ ಗಣ್ಯರು ಸೇರಿದಂತೆ ಆಗಮಿಸಿದರು.

ಈ ಸಂದರ್ಭದಲ್ಲಿ ಚಂದ್ರಶೇಖರ ಕೊಣ್ಣೂರು ಹಾಗೂ ಕುಟುಂಬದವರು, ಊರಿನ ಹಿರಿಯರು, ಯುವಕರು ಉಪಸ್ಥಿತರಿದ್ದರು.


Spread the love

About Laxminews 24x7

Check Also

ರಾಜ್ಯದಲ್ಲಿ ವಿವಿಧ ಬೆಳೆಗಳ ಬಿತ್ತನೆ ನಡೆಯುತ್ತಿದ್ದು, ರಾಸಾಯನಿಕ ಗೊಬ್ಬರದ ಬೇಡಿಕೆ ಹೆಚ್ಚಿದೆ. ಈ ಬಗ್ಗೆ ಕೃಷಿ ಸಚಿವ ಚಲುವರಾಯಸ್ವಾಮಿ ಸ್ಪಷ್ಟನೆ

Spread the loveಮೈಸೂರು: ಪ್ರಸಕ್ತ ಸಾಲಿಗೆ ರಾಸಾಯನಿಕ ಗೊಬ್ಬರದ ಕೊರತೆಯಿಲ್ಲ. ಆದರೆ, ಕೇಂದ್ರ ಸರ್ಕಾರ ಮುಂದಿನ ವರ್ಷದಿಂದ ಯೂರಿಯಾ ಪೂರೈಕೆಯನ್ನು ಶೇ.50ರಷ್ಟು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ