Breaking News

ಟಾಸ್​ ಗೆದ್ದು ಬ್ಯಾಟಿಂಗ್​ ಆಯ್ದುಕೊಂಡ ಲಂಕಾ.. ಪಂದ್ಯ ಜಯಿಸಿದವರಿಗೆ ಸೂಪರ್​ ಫೋರ್​ನಲ್ಲಿ ಸ್ಥಾನ

Spread the love

ಲಾಹೋರ್​(ಪಾಕಿಸ್ತಾನ): ಏಷ್ಯಾಕಪ್​ನ ಗುಂಪು ಹಂತದ ಕೊನೆಯ ಪಂದ್ಯದಲ್ಲಿ ಶ್ರೀಲಂಕಾ ಮತ್ತು ಅಫ್ಘಾನಿಸ್ತಾನ ಮುಖಾಮುಖಿ ಆಗುತ್ತಿದೆ.

ಈ ಪಂದ್ಯದ ಫಲಿತಾಂಶದಿಂದ ಬಿ ಗುಂಪಿನಲ್ಲಿ ಯಾರು ಸೂಪರ್​ ಫೋರ್​ಗೆ ಪ್ರವೇಶ ಪಡೆಯುತ್ತಾರೆ ಎಂಬುದು ತಿಳಿದು ಬರಲಿದೆ. ಟಾಸ್​ ಗೆದ್ದ ಶ್ರೀಲಂಕಾ ತಂಡ ಬ್ಯಾಟಿಂಗ್​ ಆಯ್ಕೆ ಮಾಡಿಕೊಂಡಿದೆ. ಅಫ್ಘಾನಿಸ್ತಾನ ಮತ್ತು ಶ್ರೀಲಂಕಾ ಹಿಂದಿನ ಪಂದ್ಯದ ತಂಡದಲ್ಲೇ ಮುಂದುವರೆದಿವೆ.

 

 

ಏಷ್ಯಾಕಪ್​ನ ಬಿ ಗುಂಪಿನಲ್ಲಿ ಶ್ರೀಲಂಕಾ, ಬಾಂಗ್ಲಾದೇಶ ಮತ್ತುಅಫ್ಘಾನಿಸ್ತಾನ ಇದೆ. ಬಾಂಗ್ಲಾದೇಶ, ಶ್ರೀಲಂಕಾದ ವಿರುದ್ಧ ಸೋಲು ಕಂಡಿದ್ದು, ಅಫ್ಘಾನಿಸ್ತಾನದ ಮೇಲೆ ಜಯಿಸಿ 2 ಅಂಕಗಳನ್ನು ಪಡೆದುಕೊಂಡಿದೆ. ಶ್ರೀಲಂಕಾ, ಬಾಂಗ್ಲಾದೇಶವನ್ನು ಮಣಿಸಿರುವ ಭರವಸೆಯಲ್ಲೇ ಇಂದು ಮೈದಾನಕ್ಕಿಳಿದೆ. ಇಂದು ಶ್ರೀಲಂಕಾ ಗೆದ್ದಲ್ಲಿ ಅಫ್ಘಾನಿಸ್ತಾನ ಏಷ್ಯಾಕಪ್​ನ ಸೂಪರ್​ ಫೋರ್​ನಿಂದ ಹೊರ ಬೀಳಲಿದೆ. ಅಫ್ಘಾನಿಸ್ತಾನ ಗೆದ್ದಲ್ಲಿ ರನ್​ ರೇಟ್ ಆಧಾರದಲ್ಲಿ ಯಾರು ಸೂಪರ್​ ಫೋರ್​ ಪ್ರವೇಶ ಪಡೆಯುತ್ತಾರೆ ಎಂಬುದು ತಿಳಿದು ಬರಲಿದೆ.

ಏಷ್ಯಾಕಪ್​ಗೂ ಮುನ್ನ ಅಫ್ಘಾನಿಸ್ಥಾನ ಪಾಕಿಸ್ತಾನದ ವಿರುದ್ಧ ಪಂದ್ಯಗಳನ್ನು ಈ ಮೈದಾನದಲ್ಲಿ ಪಂದ್ಯಗಳನ್ನು ಆಡಿತ್ತು. ಹೀಗಾಗಿ ಲಂಕಾಗೆ ಕಠಿಣ ಆಗಲಿದೆ. ಪಾಕಿಸ್ತಾನದ ಪಿಚ್​ಗಳು ಹೆಚ್ಚು ರನ್​ ಗಳಿಸಲು ಸಹಕಾರಿಯಾಗಿರುವುದರಿಂದ ದೊಡ್ಡ ಮೊತ್ತವನ್ನು ಕಲೆಹಾಕುವ ಅಗತ್ಯ ಮೊದಲು ಬ್ಯಾಟ್​ ಮಾಡುತ್ತಿರುವ ಲಂಕಾ ಮೇಲಿದೆ.

ಏಕದಿನ ವಿಶ್ವಕಪ್​ನ ಅರ್ಹತಾ ಪಂದ್ಯದಲ್ಲಿ ಶ್ರೀಲಂಕಾ ತಂಡ ಉತ್ತಮ ಪ್ರದರ್ಶನ ನೀಡಿದೆ. ಈ ಹಿನ್ನೆಲೆಯಲ್ಲಿ ಅಫ್ಘಾನಿಸ್ತಾನವನ್ನು ಸುಲಭವಾಗಿ ಮಣಿಸಬಹುದು ಎಂಬ ಲೆಕ್ಕಾಚಾರವೂ ಇದೆ. ಆದರೆ, ಲಂಕಾ ಏಷ್ಯಾಕಪ್​ ವೇಳೆಗೆ ನಾಲ್ವರು ಪ್ರಮುಖ ಆಟಗಾರರನ್ನು ಗಾಯದ ಕಾರಣಕ್ಕೆ ಕಳೆದುಕೊಂಡಿರುವುದರಿಂದ ತಂಡ ಕೊಂಚ ದುರ್ಬಲವಾಗಿ ಕಾಣುತ್ತಿದೆ.

ಬಿಸಿಸಿಐ ಅಧಿಕಾರಿಗಳಿಂದ ಪಂದ್ಯ ವೀಕ್ಷಣೆ: ಭಾರತೀಯ ಕ್ರಿಕೆಟ್​ ನಿಯಂತ್ರಣ ಮಂಡಳಿಯ ಅಧ್ಯಕ್ಷ ರೋಜರ್​ ಬಿನ್ನಿ ಮತ್ತು ಉಪಾಧ್ಯಕ್ಷ ರಾಜೀವ್​ ಶುಕ್ಲಾ ನಿನ್ನೆ ವಾಘಾ ಗಡಿಯ ಮೂಲಕ ಪಾಕಿಸ್ತಾನಕ್ಕೆ ತೆರಳಿದ್ದರು. ಇಂದು ಮತ್ತು ನಾಳೆ ಲಾಹೋರ್​ನ ಗಢಾಫಿ ಮೈದಾನದಲ್ಲಿ ನಡೆಯಲಿರುವ ಪಂದ್ಯವನ್ನು ವೀಕ್ಷಿಸಲಿದ್ದಾರೆ.


Spread the love

About Laxminews 24x7

Check Also

ಗೋಕಾಕ ನಗರದ ಶೆಪರ್ಡ್ ಮಿಷನ್ ಆಂಗ್ಲ ಮಾದ್ಯಮ ಶಾಲೆಯ 16 ನೆಯ ವಾರ್ಷಿಕ ಸ್ನೇಹ ಸಮ್ಮೇಳನ ಕಾರ್ಯಕ್ರಮ

Spread the loveಗೋಕಾಕ ನಗರದ ಶೆಪರ್ಡ್ ಮಿಷನ್ ಆಂಗ್ಲ ಮಾದ್ಯಮ ಶಾಲೆಯ 16 ನೆಯ ವಾರ್ಷಿಕ ಸ್ನೇಹ ಸಮ್ಮೇಳನ ಕಾರ್ಯಕ್ರಮದಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ