Breaking News

ಸೆ.8 ರಿಂದ 10 ರವರೆಗೆ ವ್ಯಾಪಾರ ಚಟುವಟಿಕೆಗಳನ್ನು ಮತ್ತು ಆನ್​ಲೈನ್​ ವಿತರಣಾ ಸೇವೆಗಳನ್ನು ನಿಷೇಧಿಸಲಾಗಿದೆ.

Spread the love

ನವದೆಹಲಿ: ಸೆಪ್ಟೆಂಬರ್ 8 ರಿಂದ 10 ರವರೆಗೆ ಜಿ20 ಶೃಂಗಸಭೆಯ ನಡೆಯಲಿರುವ ಕಾರಣ ದೆಹಲಿಯಲ್ಲಿ ವ್ಯಾಪಾರ ಚಟುವಟಿಕೆಗಳಿಗೆ ಮತ್ತು ಆನ್​ಲೈನ್ ವಿತರಣಾ ಸೇವೆಗಳಿಗೆ ನಿಷೇಧ ಹೇರಲಾಗಿದೆ.

ಈ ವೇಳೆ ದೆಹಲಿ ಪೊಲೀಸರು ವೈದ್ಯಕೀಯ ತುರ್ತು ಪರಿಸ್ಥಿತಿಗಳಿಗೆ ಮತ್ತು ರೈಲುಗಳು, ವಿಮಾನ ಪ್ರಮಾಣಿಕರಿಗೆ ಮಾತ್ರ ವಿನಾಯಿತಿ ನೀಡಲಿದ್ದಾರೆ. ಆದ್ದರಿಂದ, ಇತರ ಸಾರ್ವಜನಿಕರು ಮನೆಯಿಂದ ಹೊರ ಹೋಗದಿದ್ದರೆ ಉತ್ತಮ ಎಂದು ಪೊಲೀಸರು ತಿಳಿಸಿದ್ದಾರೆ.

 

  •  

 

ಇನ್ನು ಆಗಸ್ಟ್ 25 ರಂದು ಹೊರಡಿಸಲಾದ ಸಂಚಾರ ಡೈರೆಕ್ಟರಿಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಆದರೆ, ನವದೆಹಲಿಯಲ್ಲಿ ಆಹಾರ ಮತ್ತು ಇತರ ವಸ್ತುಗಳ ವಿತರಣೆ ಸೇವೆಯನ್ನು ನಿಷೇಧಿಸಲಾಗುವುದು ಎಂದು ದೆಹಲಿಯ ಸಂಚಾರ ಪೊಲೀಸ್ ಘಟಕದ ವಿಶೇಷ ಆಯುಕ್ತ ಸುರೇಂದ್ರ ಯಾದವ್ ಮಾಧ್ಯಮಗಳ ಮೂಲಕ ಮಾಹಿತಿ ನೀಡಿದ್ದಾರೆ.

ಅಗತ್ಯ ಸೇವೆಗಳನ್ನು ಹೊರತುಪಡಿಸಿ, ದೆಹಲಿಯಲ್ಲಿ ವಾಣಿಜ್ಯ ವಾಹನಗಳನ್ನು ಅನುಮತಿಸಲಾಗುವುದಿಲ್ಲ. ಅಂತಾರಾಜ್ಯ ಬಸ್​​​​ಗಳು ಸರೈ ಕಾಲೆ ಖಾನ್, ಆನಂದ್ ವಿಹಾರ್, ಕಾಶ್ಮೀರಿ ಗೇಟ್ ಮತ್ತು ಇತರ ಡಿಪೋಗಳಿಂದ ಕಾರ್ಯನಿರ್ವಹಿಸಲಿವೆ. ಜನರು ಟಿಕೆಟ್ ತೋರಿಸುವ ಮೂಲಕ ರೈಲ್ವೆ ನಿಲ್ದಾಣ ಮತ್ತು ವಿಮಾನ ನಿಲ್ದಾಣಕ್ಕೆ ತೆರಳಲು ಅವಕಾಶ ಮಾಡಿಕೊಡಲಾಗುತ್ತದೆ. ಪ್ರಯಾಣಿಕರನ್ನು ಕರೆದೊಯ್ಯುವ ಟ್ಯಾಕ್ಸಿಗಳಿಗೂ ಯಾವುದೇ ನಿರ್ಬಂಧವಿರುವುದಿಲ್ಲ.

ಹೊರ ವರ್ತುಲ ರಸ್ತೆಯನ್ನು ಬಳಸಿಕೊಂಡು ದೆಹಲಿಯಲ್ಲಿ ಸಂಚರಿಸಬಹುದಾಗಿದೆ. ನವದೆಹಲಿಯ ನಿರ್ಬಂಧಿತ ಪ್ರದೇಶಕ್ಕೆ ಮಾತ್ರ ಪ್ರವೇಶವನ್ನು ನಿಷೇಧಿಸಲಾಗಿದೆ. ದೆಹಲಿಯಾದ್ಯಂತ ಶೃಂಗಸಭೆಯ ನಡೆಯಲಿರುವ ದಿನಗಳಂದು ಫುಡ್ ಡೆಲಿವರಿ ಸರ್ವಿಸ್​ಗೆ ​ನಿಷೇಧವಿರುತ್ತದೆ. ವೈದ್ಯಕೀಯ ಸೇವೆಗಳಿಗೆ ವಿನಾಯಿತಿ ನೀಡಲಾಗಿದೆ. ದೆಹಲಿ ಸಂಚಾರ ಪೊಲೀಸ್ ವೆಬ್​ಸೈಟ್​ಗೆ ಭೇಟಿ ನೀಡುವ ಮೂಲಕ ಜನರು ಸಂಚಾರ ಮಾರ್ಗಗಳ ಬಗ್ಗೆ ಸಂಪೂರ್ಣ ವಿವರಗಳನ್ನು ನೋಡಬಹುದು ಎಂದು ಪೊಲೀಸರು ತಿಳಿಸಿದ್ದಾರೆ.


Spread the love

About Laxminews 24x7

Check Also

ಕುಕ್ಕೆ ಸುಬ್ರಹ್ಮಣ್ಯದಲ್ಲಿ ಕುಮಾರಧಾರ ನದಿಗೆ ತ್ಯಾಜ್ಯ ಬಿಸಾಡಿದರೆ ಬೀಳುತ್ತೆ ದಂಡ

Spread the loveಸುಬ್ರಹ್ಮಣ್ಯ (ದಕ್ಷಿಣ ಕನ್ನಡ): ಕುಕ್ಕೆಯ ಕುಮಾರಧಾರ ನದಿಯ ಪಾವಿತ್ರ್ಯತೆಯನ್ನು ಕಾಪಾಡುವ ನಿಟ್ಟಿನಲ್ಲಿ ಗ್ರಾಮ ಪಂಚಾಯತಿ ಹಾಗೂ ಪೊಲೀಸ್ ಇಲಾಖೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ