Breaking News

370ನೇ ವಿಧಿ ರದ್ದತಿ ವಿಚಾರಣೆ: ಮುಖ್ಯ ಅರ್ಜಿದಾರ, ಸಂಸದ ಅಕ್ಬರ್​ ಸಂವಿಧಾನ ನಿಷ್ಠೆ ಸಾಬೀತಿಗೆ ಕೋರ್ಟ್​ ಸೂಚನೆ

Spread the love

ಶ್ರೀನಗರ (ಜಮ್ಮು ಮತ್ತು ಕಾಶ್ಮೀರ): ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷಾಧಿಕಾರ ನೀಡಿದ್ದ 370 ನೇ ವಿಧಿ ರದ್ದತಿ ಬಗ್ಗೆ ಸುಪ್ರೀಂಕೋರ್ಟ್​ ನಿತ್ಯ ವಿಚಾರಣೆ ನಡೆಸುತ್ತಿದ್ದು, ಮುಖ್ಯ ಅರ್ಜಿದಾರರಾಗಿರುವ ಬಾರಾಮುಲ್ಲಾ ಕ್ಷೇತ್ರದ ಸಂಸದ ಮುಹಮದ್​ ಅಕ್ಬರ್​ ಲೋನ್​ ಪಾಕಿಸ್ತಾನ ಪ್ರಾಯೋಜಿತ ಭಯೋತ್ಪಾದನೆಯನ್ನು ಖಂಡಿಸಿ, ದೇಶದ ಸಂವಿಧಾನದ ಮೇಲೆ ಇರುವ ನಿಷ್ಠೆಯ ಬಗ್ಗೆ ಅಫಿಡವಿಟ್​ ಸಲ್ಲಿಸಲು ಕೋರ್ಟ್​ ಸೂಚಿಸಿದೆ.

 

15ನೇ ದಿನದ ವಿಚಾರಣೆಯಲ್ಲಿ ಮುಖ್ಯ ಅರ್ಜಿದಾರ ಅಕ್ಬರ್​ ಲೋನ್​ ವಿರುದ್ಧವೇ ಭಾರತ ವಿರೋಧಿ ನಡೆಯ ಬಗ್ಗೆ ವಾದ ನಡೆಯಿತು. ಕೇಂದ್ರ ಸರ್ಕಾರದ ಪರ ವಾದ ಮಂಡಿಸುತ್ತಿರುವ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು, ಅರ್ಜಿದಾರ ಅಕ್ಬರ್​ ಲೋನ್​ ದೇಶದ ಸಂವಿಧಾನ ನೀಡಿರುವ ಅವಕಾಶದಂತೆ ಇಲ್ಲಿನ ಸಂಸದರಾಗಿದ್ದಾರೆ. ಈ ಹಿಂದೆ ಅವರು ಶಾಸಕಾಗಿದ್ದ ವೇಳೆ ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಯಲ್ಲೇ ‘ಪಾಕಿಸ್ತಾನ್​ ಜಿಂದಾಬಾದ್​’ ಎಂದು ಘೋಷಣೆ ಕೂಗಿದ ಆರೋಪವಿದೆ. ಹೀಗಾಗಿ ಅವರು ಮೊದಲು ದೇಶದ ಸಂವಿಧಾನದ ನಿಷ್ಠೆಯನ್ನು ಸಾಬೀತು ಮಾಡಲಿ. ಪಾಕಿಸ್ತಾನ ನಡೆಸುತ್ತಿರುವ ಭಯೋತ್ಪಾದನೆ ಮತ್ತು ಪ್ರತ್ಯೇಕತಾವಾದವನ್ನು ವಿರೋಧಿಸಿ ಅಫಿಡವಿಟ್​ ಸಲ್ಲಿಸಬೇಕು ಎಂದು ಕೇಳಿದರು.

ಮಾಹಿತಿ ನೀಡಲು ಸೂಚಿಸಿದ ಕೋರ್ಟ್​: ಮನ್ನಿಸಿದ ಕೋರ್ಟ್​, ಸಂಸದ ಅಕ್ಬರ್​ ಲೋನ್​ಗೆ ಭಾರತದ ಸಂವಿಧಾನದ ಮೇಲೆ ಇರುವ ನಿಷ್ಠೆಯ ಬಗ್ಗೆ ಅಫಿಡವಿಟ್​ ಸಲ್ಲಿಸಲು ಸೂಚಿಸಿದೆ. ಜೊತೆಗೆ ಜಮ್ಮು ಮತ್ತು ಕಾಶ್ಮೀರದಲ್ಲಿ ಪಾಕಿಸ್ತಾನದ ಉಗ್ರಗಾಮಿತ್ವ ಮತ್ತು ಪ್ರತ್ಯೇಕತಾವಾದವನ್ನು ವಿರೋಧಿಸುವ ಬಗ್ಗೆಯೂ ಲೋನ್ ದೃಢೀಕರಣ ನೀಡಬೇಕು ಎಂದೂ ಹೇಳಿದೆ.

ಜಮ್ಮು ಕಾಶ್ಮೀರಕ್ಕಿದ್ದ ವಿಶೇಷಾಧಿಕಾರವನ್ನು ರದ್ದು ಮಾಡಿರುವ ಕೇಂದ್ರ ಸರ್ಕಾರದ ವಿರುದ್ಧ ಸಂಸದ ಅಕ್ಬರ್​ ಲೋನ್​ ಸುಪ್ರೀಂಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದು, ಸರ್ಕಾರ ಕ್ರಮ ಅಸಾಂವಿಧಾನಿಕವಾಗಿದೆ. ಜಮ್ಮು ಕಾಶ್ಮೀರಕ್ಕೆ ರಾಜ್ಯ ಸ್ಥಾನಮಾನ ಮರಳಿ ನೀಡಿ ವಿಶೇಷಾಧಿಕಾರ ಪುನಸ್ಥಾಪಿಸಬೇಕು ಎಂದು ಕೋರಿದ್ದಾರೆ.


Spread the love

About Laxminews 24x7

Check Also

ಆನ್‌ಲೈನ್ ಗೇಮಿಂಗ್ ಪ್ರಚಾರ-ನಿಯಂತ್ರಣ ಕಾಯಿದೆ ಪ್ರಶ್ನಿಸಿ ಹೈಕೋರ್ಟ್​ಗೆ ಅರ್ಜಿ: ಆ.30ಕ್ಕೆ ವಿಚಾರಣೆ

Spread the love ಬೆಂಗಳೂರು: ಹಣವನ್ನು ಪಣಕ್ಕಿಟ್ಟು ಆಡುವಂತಹ ಆನ್‌ಲೈನ್​ ಗೇಮ್​ಗಳಿಗೆ ನಿಷೇಧ ಹೇರುವುದಕ್ಕೆ ಅವಕಾಶ ಕಲ್ಪಿಸುವ ಆನ್‌ಲೈನ್ ಗೇಮಿಂಗ್ ಪ್ರಚಾರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ