ಹುಕ್ಕೇರಿ ತಾಲೂಕಿನ ಯಮಕನಮರ್ಡಿ ಭಾಗದ ಸರಹದ್ದಿನಲ್ಲಿ ಗಣೇಶ ಮತ್ತು ಈದ ಮಿಲಾದ ಹಬ್ಬವನ್ನು ಹಿಂದೂ ಮುಸ್ಲಿಂ ಸಮಾಜದವರು ಭಾವಕ್ಯದಿಂದ ಆಚರಿಸ ಬೇಕು ಎಂದು ಯಮಕನಮರ್ಡಿ ಪೋಲಿಸ್ ಠಾಣೆಯ ಇನ್ಸಪೇಕ್ಟರ ರಮೇಶ ಛಾಯಾಗೋಳ ಹೇಳಿದರು.
ಅವರು ಇಂದು ಯಮಕನಮರ್ಡಿ ಪೋಲಿಸ್ ಠಾಣೆಯಲ್ಲಿ ಜರುಗಿದ ಶಾಂತತಾ ಸಭೆಯಲ್ಲಿ ಭಾಗವಹಿಸಿ ಮುಂಬರುವ ಸೆಪ್ಟೆಂಬರ್ 19 ರಿಂದ ಗಣೇಶ ಚತುರ್ಥಿ ಮತ್ತು 28 ರಂದು ಜರಗಲಿರುವ ಈದ ಮಿಲಾದ ಹಬ್ಬವನ್ನು ಹಿಂದೂ ಮುಸ್ಲಿಂ ಬಾಂಧವರು ಶ್ರದ್ದಾ ಭಕ್ತಿ ಯಿಂದ ಶಾಂತ ರಿತಿಯಲ್ಲಿ ಭಾವಕ್ಯದಿಂದ ಆಚರಿಸ ಬೇಕು ,
ಕಾನೂನು ಬಾಹಿರ ಚಟುವಟಿಕೆ ಮಾಡುವ ವ್ಯಕ್ತಿಗಳ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸಲಾಗುವದು ಎಂದು ಎಚ್ಚರಿಕೆ ನೀಡಿದರು.
Laxmi News 24×7