Breaking News

ಸೂಪರ್​ ಸ್ಟಾರ್​’ ರಜನಿಕಾಂತ್‌ಗೆ ರಾಜ್ಯಪಾಲ ಹುದ್ದೆ?

Spread the love

ಮಧುರೈ (ತಮಿಳುನಾಡು): ”ಎಲ್ಲವೂ ದೇವರ ಕೈಯಲ್ಲಿದೆ.

ರಜಿನಿ ಅವರಿಗೆ ಇದು (ರಾಜ್ಯಪಾಲರ ಹುದ್ದೆ) ಇಷ್ಟವಿಲ್ಲ. ಆದರೆ, ಬಹುಶಃ ಅವರು ಸಿಕ್ಕರೆ ಹಿಂಜರಿಯುವುದಿಲ್ಲ” ಎಂದು ನಟ ರಜನಿಕಾಂತ್ ಅವರ ಸಹೋದರ ಸತ್ಯನಾರಾಯಣ ರಾವ್ ಹೇಳಿದ್ದಾರೆ. ತಮಿಳುನಾಡಿನ ಮಧುರೈ ಜಿಲ್ಲೆಯಲ್ಲಿ ಭಾನುವಾರ ನಡೆದ ಎರಡು ಮದುವೆ ಸಮಾರಂಭಗಳಲ್ಲಿ ಭಾಗವಹಿಸಿದ ಬಳಿಕ, ಮಾಧ್ಯಮದವರು ಕೇಳಿದ ಪ್ರಶ್ನೆಯೊಂದಕ್ಕೆ ಅವರು ಉತ್ತರ ನೀಡಿದ್ದಾರೆ.

ರಜನಿಕಾಂತ್​ಗೆ ರಾಜ್ಯಪಾಲರ ಹುದ್ದೆ?: ”ರಜನಿಕಾಂತ್ ರಾಜಕೀಯಕ್ಕೆ ಬರಲು ಯೋಚಿಸಿಲ್ಲ” ಎಂದು ರಜನಿ ಸಹೋದರ ಸತ್ಯನಾರಾಯಣ ರಾವ್ ತಿಳಿಸಿದ್ದಾರೆ. ಇದಕ್ಕೂ ಮುನ್ನ, ಶನಿವಾರ ತಮಿಳುನಾಡು ಮಾಜಿ ಮುಖ್ಯಮಂತ್ರಿ ಒ. ಪನ್ನೀರಸೆಲ್ವಂ ರಜನಿಕಾಂತ್ ಅವರನ್ನು ಅವರ ನಿವಾಸದಲ್ಲಿ ಭೇಟಿಯಾದರು. ಅಲ್ಲದೆ, ಈ ಬಗ್ಗೆ ಒಪಿಎಸ್ ಅವರು ಸಾಮಾಜಿಕ ಜಾಲತಾಣ ‘ಎಕ್ಸ್’ ಖಾತೆಯಲ್ಲಿ, “ಹಲವು ಎತ್ತರಗಳನ್ನು ತಲುಪಿದ ಹಾಗೂ ಚಿರಸ್ಥಾಯಿಯಾಗಿರುವ ಸೂಪರ್‌ಸ್ಟಾರ್ ರಜನಿಕಾಂತ್ ಅವರೊಂದಿಗಿನ ಭೇಟಿಯು ಅತ್ಯಂತ ಸಂತೋಷ ಮತ್ತು ತೃಪ್ತಿ ತಂದಿದೆ” ಎಂದು ಹೇಳಿದರು.

 ಮಾಜಿ ಮುಖ್ಯಮಂತ್ರಿ ಒ. ಪನ್ನೀರಸೆಲ್ವಂ ಹಾಗೂ ರಜನಿಕಾಂತ್ಒಪಿಎಸ್ – ರಜನಿ ಭೇಟಿ ಬಳಿಕ ರಾಜ್ಯದಲ್ಲಿ ಮತ್ತೆ ರಜನಿಕಾಂತ್ ರಾಜಕೀಯ ಪ್ರವೇಶ ವಿಚಾರ ಭಾರಿ ಚರ್ಚೆಗೆ ಗ್ರಾಸವಾಗಿದೆ. ಆದರೆ, ‘ರಾಜಕೀಯಕ್ಕಾಗಿ ರಜನಿಕಾಂತ್-ಒಪಿಎಸ್ ಭೇಟಿ’ ಮಾಡಿದ್ದಾರೆ ಎಂಬುದನ್ನು ಸತ್ಯನಾರಾಯಣ ನಿರಾಕರಿಸಿದ್ದಾರೆ. ಅದಕ್ಕೂ ಮುನ್ನ, ಒ. ಪನ್ನೀರಸೆಲ್ವಂ ಅವರು ಎಐಎಡಿಎಂಕೆ ಕಾನೂನು ಪ್ರಕರಣಗಳಲ್ಲಿ ನಿರಂತರವಾಗಿ ಹಿನ್ನಡೆ ಅನುಭವಿಸುತ್ತಿದ್ದಾರೆ. ಅಲ್ಲದೆ, ರಾಜ್ಯದಲ್ಲಿ ಒಪಿಎಸ್​ ಅವರು ವೈಯಕ್ತಿಕ ಪಕ್ಷವನ್ನು ಪ್ರಾರಂಭಿಸುತ್ತಾರೆ ಎಂಬ ವಿಷಯವು ಕೂಡಾ ಹಬ್ಬಿದೆ. ಆದರೆ, ಅವರು ಅಮ್ಮ ಮಕ್ಕಳ್ ಮುನ್ನೇತ್ರ ಕಳಗಂ(ಎಐಎಡಿಎಂಕೆ) ಜೊತೆಗೆ ಸಕ್ರಿಯರಾಗಿದ್ದಾರೆ.

ಬ್ಲಾಕ್​ಬಸ್ಟರ್ ಜೈಲರ್ ಬಿಡುಗಡೆಗೆ ಮುನ್ನ ರಜನಿ ಹಿಮಾಲಯ ಪ್ರವಾಸಕ್ಕೆ ತೆರಳಿದ್ದರು. ಅವರು ಯುಪಿ ಸಿಎಂ ಪಾದ ಮುಟ್ಟಿ ರಕ್ಷಿಸಿದ್ದರು. ಈ ಘಟನೆ ಇಡೀ ದೇಶದಲ್ಲಿ ವಿವಾದ ಸೃಷ್ಟಿಸಿತ್ತು. ಆದರೆ, ಈ ವಿಚಾರದ ಬಗ್ಗೆ ರಜನಿಕಾಂತ್ ಖಾರವಾಗಿಯೇ ಉತ್ತರ ನೀಡಿದ್ದರು. ಜೈಲರ್ ಚಿತ್ರದ ಯಶಸ್ಸಿನ ಅಲೆಯಲ್ಲಿ ತೇಲುತ್ತಿರುವ ‘ಸೂಪರ್ ​ಸ್ಟಾರ್’ ರಜನಿಕಾಂತ್​ ಇತ್ತೀಚೆಗೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಅವರನ್ನು ಭೇಟಿ ಮಾಡಿದ್ದರು. ಲಕ್ನೋದಲ್ಲಿ ಭೇಟಿ ವೇಳೆಯಲ್ಲಿ ಹಿರಿಯ ನಟ ರಜನಿಕಾಂತ್, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರ ಪಾದ ಮುಟ್ಟಿ ನಮಸ್ಕಾರ ಸಲ್ಲಿಸಿದ್ದ ವಿಚಾರ ಭಾರಿ ಚರ್ಚೆಗೆ ಕಾರಣವಾಗಿತ್ತು. ಜೊತೆಗೆ ಈ ಬಗ್ಗೆ ನಟ ರಜನಿಕಾಂತ್​ ಸ್ಪಷ್ಟನೆ ನೀಡಿದ್ದರು. ”ಯೋಗಿಗಳು ಅಥವಾ ಸನ್ಯಾಸಿಗಳ ಪಾದ ಸ್ಪರ್ಶಿಸುವುದು ನನ್ನ ಅಭ್ಯಾಸವಾಗಿದೆ. ಯೋಗಿಗಳು, ಸನ್ಯಾಸಿಗಳು ನನಗಿಂತ ಚಿಕ್ಕವರಾಗಿದ್ದರೂ ಕೂಡ ಅವರ ಪಾದ ಮುಟ್ಟಿ ಆಶೀರ್ವಾದ ಪಡೆಯುತ್ತೇನೆ” ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಯೊಂದಕ್ಕೆ ಉತ್ತರಿಸಿದ್ದರು.


Spread the love

About Laxminews 24x7

Check Also

ಬೆಳಗಾವಿ ಜಲಾಶಯಗಳಲ್ಲಿ ಜೀವಕಳೆ

Spread the love ಬೆಳಗಾವಿ: ಜಿಲ್ಲೆಯಲ್ಲಿ ಈ ಬಾರಿ ಪೂರ್ವ ಮುಂಗಾರು ಉತ್ತಮವಾಗಿದೆ. ಜೂನ್‌ ಅಂತ್ಯದವರೆಗೆ ಮುಂಗಾರು 286.46 ಮಿ.ಮೀ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ