Breaking News

KSRTC: ಕೆಂಪು ಬಣ್ಣದ ಬಸ್​ಗಳಿಗೆ ಹೈಟೆಕ್ ಸ್ಪರ್ಶ

Spread the love

ಬೆಂಗಳೂರು : ಇನ್ಮುಂದೆ ಕೆಎಸ್‌ಆರ್​ಟಿಸಿಯ ಕೆಂಪು ಬಣ್ಣದ ಬಸ್​ಗಳಲ್ಲಿ ಪ್ರಯಾಸದ ಪ್ರಯಾಣಕ್ಕೆ ಗುಡ್ ಬೈ ಹೇಳಿ ಆರಾಮದಾಯಕ ಅನುಭವದ ಪ್ರಯಾಣ ಮಾಡಬಹುದಾಗಿದೆ.

ಪುಷ್ ಬ್ಯಾಕ್ ಹೊರತುಪಡಿಸಿ ಬಹುತೇಕ ರಾಜಹಂಸ ಬಸ್ ಪ್ರಯಾಣದ ಅನುಭವ ನೀಡುವ ವ್ಯವಸ್ಥೆಯನ್ನು ಸಾಮಾನ್ಯ ಸಾರಿಗೆಯಲ್ಲಿ ನೀಡಲು ಸಂಸ್ಥೆ ಸಿದ್ಧತೆ ಆರಂಭಿಸಿದೆ. ಅದಕ್ಕಾಗಿಯೇ ವಿಶೇಷವಾಗಿ ವಿನ್ಯಾಸಗೊಂಡ ಪ್ರೋಟೋಟೈಪ್ ಬಸ್​ಗಳು ಅಕ್ಟೋಬರ್ ವೇಳೆಗೆ ರಸ್ತೆಗಿಳಿಯಲಿವೆ.

ಹತ್ತು ಹಲವು ಪ್ರಯೋಗಗಳ ಮೂಲಕ ಹೆಸರಾಗಿರುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಅತ್ಯುತ್ತಮ ಸ್ಥಿತಿಯಲ್ಲಿರುವ ಸಾಮಾನ್ಯ ಬಸ್ (ಕೆಂಪುಬಣ್ಣದ ಬಸ್)ಗಳನ್ನು ಓಡಿಸುತ್ತಿದೆ. ಇತರ ರಾಜ್ಯಗಳ ಸಾಮಾನ್ಯ ಸಾರಿಗೆ ಬಸ್​ಗಳಿಗೆ ಹೋಲಿಸಿದಲ್ಲಿ ಕೆಎಸ್‌ಆರ್​ಟಿಸಿ ಸಾಮಾನ್ಯ ಸಾರಿಗೆ ಬಸ್ ಗಳ ಸ್ಥಿತಿ ಅತ್ಯುತ್ತಮವಾಗಿದೆ. ಆದರೂ ಈಗ ಮತ್ತೊಂದು ಹಂತ ಮುಂದೆ ಹೋಗಲು ನಿರ್ಧರಿಸಿದೆ. ಸಾಮಾನ್ಯ ಸಾರಿಗೆ ಬಸ್​ಗಳನ್ನು ಪ್ರೋಟೋಟೈಪ್ ವಾಹನಗಳನ್ನಾಗಿ ವಿನ್ಯಾಸ ಮಾಡುತ್ತಿದ್ದು, ಐಷಾರಾಮಿ ಪ್ರಯಾಣದ ಅನುಭವ ಪ್ರಯಾಣಿಕರಿಗೆ ಸಾಮಾನ್ಯ ಬಸ್​ಗಳಲ್ಲೇ ಸಿಗುವಂತೆ ಮಾಡಲು ಮುಂದಾಗಿದೆ.

 ನೂತನ ಕೆಎಸ್​ಆರ್​ಟಿಸಿ ಪ್ರೋಟೋ ಟೈಪ್ ಬಸ್​ ಪರಿಶೀಲನೆ ನಡೆಸಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿಈಗಾಗಲೇ ಪಾಯಿಂಟ್ ಟು ಪಾಯಿಂಟ್ ಮತ್ತು ವೇಗಧೂತ ಕಾರ್ಯಾಚರಣೆಗೆ ನಿಯೋಜಿಸಲಾಗುವ ನೂತನ ಕರ್ನಾಟಕ ಸಾರಿಗೆ ವಾಹನದ ಪ್ರೋಟೋ ಟೈಪ್ ವಾಹನದ ಮಾದರಿ ಸಿದ್ಧವಾಗಿದ್ದು, ಹೊಸ ವಿನ್ಯಾಸದಲ್ಲಿ ಸಿದ್ಧಗೊಂಡಿರುವ ಹೊಸ ಬಸ್ ಅನ್ನು ನಿಗಮದ ಕೇಂದ್ರ ಕಚೇರಿಯಲ್ಲಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಪರಿಶೀಲನೆ ನಡೆಸಿ ಸಣ್ಣಪುಟ್ಟ ಮಾರ್ಪಾಡಿನೊಂದಿಗೆ ಈ ಹೊಸ ವಿನ್ಯಾಸಕ್ಕೆ ಒಪ್ಪಿಗೆ ನೀಡಿದ್ದಾರೆ. ಹಾಗಾಗಿ ಇನ್ನೊಂದು ತಿಂಗಳಿನಲ್ಲಿ ರಾಜ್ಯದಲ್ಲಿ ಪ್ರೋಟೋಟೈಪ್ ಬಸ್​ಗಳ ಸಂಚಾರ ಆರಂಭವಾಗಲಿದೆ. ಖಾಸಗಿ ಬಸ್​ಗಳಿಗೆ ಈ ಹೊಸ ಕೆಂಪು ಬಣ್ಣದ ಬಸ್​ಗಳು ಸ್ಪರ್ಧೆ ನೀಡಲಿವೆ.


Spread the love

About Laxminews 24x7

Check Also

ಬಜೆಟ್ ನಲ್ಲಿ ಸಾರಿಗೆ ಇಲಾಖೆಗೆ ಸಿಕ್ಕಿದ್ದೇನು?

Spread the loveಶಕ್ತಿ ಯೋಜನೆಗೆ 5,300 ಕೋಟಿ ರೂ. ಸಾರಿಗೆ ಸಿಬ್ಬಂದಿ ವೇತನ ಬಾಕಿ ಪಾವತಿಗೆ 1,271 ಕೋಟಿ ರೂ. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ