Breaking News

ಸ್ಯಾಮ್​ಸಂಗ್​ ಮಡಚುವ ಸ್ಮಾರ್ಟ್​ಪೋನ್​​ಗಳಿಗೆ ದೇಶದಲ್ಲಿ ವ್ಯಾಪಕ ಬೇಡಿಕೆ ವ್ಯಕ್ತವಾಗುತ್ತಿದೆ.

Spread the love

ನವದೆಹಲಿ : ತಾನು ಹೊಸದಾಗಿ ಲಾಂಚ್ ಮಾಡಲು ಯೋಜಿಸಿರುವ ಮಡಚುವ ಸ್ಮಾರ್ಟ್​ಪೋನ್​ಗಳಿಗೆ ಮೂರು ವಾರಗಳ ಅವಧಿಯಲ್ಲಿ (ಜುಲೈ 27-ಆಗಸ್ಟ್ 17) 1.5 ಲಕ್ಷ ಪ್ರೀ-ಆರ್ಡರ್​ಗಳು ಬಂದಿವೆ ಎಂದು ಸ್ಯಾಮ್​​ಸಂಗ್​ ಹೇಳಿದೆ.

ಕಳೆದ ವರ್ಷಕ್ಕೆ ಹೋಲಿಸಿದರೆ ಆರ್ಡರ್​​ ಪ್ರಮಾಣದಲ್ಲಿ 1.5 ಪಟ್ಟು ಹೆಚ್ಚಾಗಿದೆ. ತನ್ನ ಮಡಚುವ ಮೇಕ್​ ಇನ್ ಇಂಡಿಯಾ ಫೋನ್​ಗಳಿಗೆ ದೇಶಾದ್ಯಂತ ಸಿಕ್ಕ ಅದ್ಭುತ ಪ್ರತಿಕ್ರಿಯೆಯಿಂದ ಸ್ಯಾಮ್​ಸಂಗ್​ ಉತ್ತೇಜಿತವಾಗಿದೆ.

ಶ್ರೇಣಿ 2, 3 ಮತ್ತು 4 ನಗರಗಳಲ್ಲಿ ತ್ವರಿತ ಲಭ್ಯತೆ, ವಿಶಿಷ್ಟ 24 ತಿಂಗಳ ಇಎಂಐ ಯೋಜನೆಗಳ ಮೂಲಕ ಸ್ಯಾಮ್​ಸಂಗ್​​ ದೇಶದ ಅಲ್ಟ್ರಾ-ಪ್ರೀಮಿಯಂ ವಿಭಾಗದಲ್ಲಿ ತನ್ನ ಸ್ಥಾನವನ್ನು ಮತ್ತಷ್ಟು ಭದ್ರಪಡಿಸಿಕೊಂಡಿದೆ. ಹೊಸ ಫೋಲ್ಡಬಲ್​ ಫೋನ್​ಗಳೊಂದಿಗೆ ಸ್ಯಾಮ್ಸಂಗ್ ಸೂಪರ್-ಪ್ರೀಮಿಯಂ ($ 1,000 ಮತ್ತು ಅದಕ್ಕಿಂತ ಹೆಚ್ಚಿನ) ವಿಭಾಗದಲ್ಲಿ ಭಾರತದಲ್ಲಿ ಶೇಕಡಾ 50 ಕ್ಕಿಂತ ಹೆಚ್ಚು ಮಾರುಕಟ್ಟೆ ಪಾಲನ್ನು ತಲುಪುವ ಗುರಿಯನ್ನು ಹೊಂದಿದೆ.

ಫೋಲ್ಡಬಲ್ ಸ್ಮಾರ್ಟ್​ಫೋನ್​ಗಳನ್ನು ಮುಖ್ಯವಾಹಿನಿಗೆ ತರಲು, ಸ್ಯಾಮ್ ಸಂಗ್ ತನ್ನ ವಿತರಣಾ ವ್ಯಾಪ್ತಿಯನ್ನು ವಿಸ್ತರಿಸಿಕೊಂಡಿದೆ. ಗ್ಯಾಲಕ್ಸಿ ಝಡ್ ಫ್ಲಿಪ್ 5 ಮತ್ತು ಗ್ಯಾಲಕ್ಸಿ ಝಡ್ ಫೋಲ್ಡ್ 5 ಭಾರತದಲ್ಲಿ 10,000 ಮಳಿಗೆಗಳಲ್ಲಿ ಲಭ್ಯವಿದೆ ಎಂದು ತಿಳಿಸಿದೆ. ಗ್ರಾಹಕರು ಗ್ಯಾಲಕ್ಸಿ ಝಡ್ ಫ್ಲಿಪ್ 5 (256 ಜಿಬಿ) ಅನ್ನು 85,999 ರೂ.ಗಳ ನಿವ್ವಳ ಪರಿಣಾಮಕಾರಿ ಬೆಲೆಗೆ ಖರೀದಿಸಬಹುದು. ಗ್ಯಾಲಕ್ಸಿ ಝಡ್ ಫೋಲ್ಡ್ 5 (256 ಜಿಬಿ) ದೇಶದಲ್ಲಿ ಸೀಮಿತ ಅವಧಿಗೆ 1,38,999 ರೂ.ಗೆ ಲಭ್ಯವಿದೆ.

ಸ್ಯಾಮ್​ಸಂಗ್ ಇದು ದಕ್ಷಿಣ ಕೊರಿಯಾದ ಕಂಪನಿಯಾಗಿದ್ದು ವಿಶ್ವದ ಅತಿದೊಡ್ಡ ಎಲೆಕ್ಟ್ರಾನಿಕ್ ಸಾಧನಗಳ ಉತ್ಪಾದಕರಲ್ಲಿ ಒಂದಾಗಿದೆ. ಸ್ಯಾಮ್​ಸಂಗ್​ ಉಪಕರಣಗಳು, ಡಿಜಿಟಲ್ ಮಾಧ್ಯಮ ಸಾಧನಗಳು, ಅರೆವಾಹಕಗಳು, ಮೆಮೊರಿ ಚಿಪ್​ಗಳು ಮತ್ತು ಸಂಯೋಜಿತ ವ್ಯವಸ್ಥೆಗಳು ಸೇರಿದಂತೆ ವಿವಿಧ ರೀತಿಯ ಗ್ರಾಹಕ ಮತ್ತು ಉದ್ಯಮ ಎಲೆಕ್ಟ್ರಾನಿಕ್ಸ್ ಉತ್ಪಾದನೆಯಲ್ಲಿ ಪರಿಣತಿ ಹೊಂದಿದೆ. ಇದು ತಂತ್ರಜ್ಞಾನದಲ್ಲಿ ಹೆಚ್ಚು ಗುರುತಿಸಬಹುದಾದ ಹೆಸರುಗಳಲ್ಲಿ ಒಂದಾಗಿದೆ ಮತ್ತು ದಕ್ಷಿಣ ಕೊರಿಯಾದ ಒಟ್ಟು ರಫ್ತುಗಳಲ್ಲಿ ಐದನೇ ಒಂದು ಭಾಗವನ್ನು ಉತ್ಪಾದಿಸುತ್ತದೆ.


Spread the love

About Laxminews 24x7

Check Also

ವರದಕ್ಷಿಣೆ ಕಿರುಕುಳ ಆರೋಪ, ಐಎಸ್‌ಡಿ ಡಿವೈಎಸ್‌ಪಿ ವಿರುದ್ಧ ಎಫ್ಐಆರ್

Spread the love ಬೆಂಗಳೂರು : ಡಿವೈಎಸ್‌ಪಿಯೊಬ್ಬರ ವಿರುದ್ಧ ಪತ್ನಿಗೆ ವರದಕ್ಷಿಣೆ ಕಿರುಕುಳ ನೀಡಿದ ಆರೋಪ ಕೇಳಿ ಬಂದಿದೆ. 41 ವರ್ಷದ ಮಹಿಳೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ