ರೇಷನ್ ಸರಿಯಾಗಿ ವಿತರಿಸುತ್ತಿಲ್ಲ ಎಂದು ಆರೋಪಿಸಿ ಗ್ರಾಮಸ್ಥರಿಂದ ಪ್ರತಿಭಟನೆ ನಡೆಸಿದ ಘಟನೆ ವಿಜಯಪುರ ಜಿಲ್ಲೆಯ ಸಿಂದಗಿ ಪಟ್ಟಣದ ತಹಶಿಲ್ದಾರ ಕಚೇರಿ ಎದುರು ನಡೆದಿದೆ.
ಸಿಂದಗಿ ತಾಲೂಕಿನ ಹಂದಿಗನೂರ ಗ್ರಾಮಸ್ಥರು ಅಹೋರಾತ್ರಿ ಪ್ರತಿಭಟನೆ ನಡೆಸಿದ್ದು, ಅಕ್ಕಿ ಸರಿಯಾಗಿ ವಿತರಣೆ ಮಾಡಲ್ಲ ಜೊತೆಗೆ ರೇಷನ್ ಅಂಗಡಿಯಲ್ಲಿ ಮರ್ಯಾದೆ ಕೊಟ್ಟು ಮಾತನಾಡಲ್ಲ ಎಂದು ಆರೋಪಿಸಿ ಪ್ರತಿಭಟನೆ ನಡೆಸಿದರು. ಅಂಗಡಿ ಮಾಲೀಕ ಸರಿಯಾಗಿ ರೇಷನ್ ವಿತರಣೆ ಮಾಡುವದಿಲ್ಲ,
ಕೇಳಲು ಹೋದರೆ ಗಲಾಟೆ ಮಾಡುತ್ತಾರೆ ಅವರನ್ನು ಬದಲಿಸಿ ಬೇರೆಯವರಿಗೆ ರೇಷನ್ ಹಂಚಲು ಕೊಡಬೇಕು ಎಂದು ಸಿಂದಗಿ ತಹಶಿಲ್ದಾರ ಕಚೇರಿ ಎದುರು ಬಸವ್ವ ಡಾಂಗಿ ಮಾದ್ಯಮದವರನ್ನು ಉದ್ದೇಶಿಸಿ ಮಾತನಾಡುತ್ತಾ ಅಧಿಕಾರಿಗಳಿಗೆ ಮನವಿ ಮಾಡಿದರು.
Laxmi News 24×7