Breaking News

ಕಾಂಗ್ರೆಸ್​ ಕಾರ್ಯಕಾರಿ ಸಮಿತಿಯಲ್ಲಿ ಮಹಿಳಾ ಶಕ್ತಿ: 39 ಸದಸ್ಯರ ಪೈಕಿ 15 ಮಂದಿಗೆ ಸ್ಥಾನ

Spread the love

ನವದೆಹಲಿ : ಈ ವರ್ಷಾಂತ್ಯದ ಪಂಚರಾಜ್ಯಗಳ ವಿಧಾನಸಭೆ ಮತ್ತು ಮುಂದಿನ ವರ್ಷದಲ್ಲಿ ನಡೆಯುವ ಲೋಕಸಭೆ ಚುನಾವಣೆಗೆ ಸಜ್ಜಾಗುತ್ತಿರುವ ಕಾಂಗ್ರೆಸ್ ಪಕ್ಷ​, ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ್​ ಖರ್ಗೆ ಅವರ ನೇತೃತ್ವದಲ್ಲಿ 84 ಜನರ ಕಾಂಗ್ರೆಸ್​ ಕಾರ್ಯಕಾರಿ ಸಮಿತಿಯನ್ನು ಹೊಸದಾಗಿ ರಚಿಸಿದೆ.

ಅದರಲ್ಲಿ ಪಕ್ಷದ ವಿರುದ್ಧ ಬಹಿರಂಗವಾಗಿ ಬಂಡಾಯವೇಳುತ್ತಿದ್ದ ನಾಯಕರೂ ಸೇರಿದಂತೆ 15 ಮಹಿಳೆಯರಿಗೆ ಅವಕಾಶ ನೀಡಲಾಗಿದೆ.

ಪಕ್ಷದ ಅತ್ಯುನ್ನತ ನೀತಿ ನಿರ್ಧಾರಗಳನ್ನು ಕೈಗೊಳ್ಳುವ ಸಂಸ್ಥೆಯಾದ ಸಿಡಬ್ಲ್ಯೂಸಿಗೆ ಇಷ್ಟು ಪ್ರಮಾಣದಲ್ಲಿ ಮಹಿಳೆಯರಿಗೆ ಅವಕಾಶ ನೀಡಿದ್ದು, ಒಟ್ಟು ಸದಸ್ಯರಲ್ಲಿ ಶೇ.66.6 ರಷ್ಟು ಮಹಿಳೆಯರೇ ಇದ್ದಾರೆ. ಇದು ಮಹಿಳಾ ಸಬಲೀಕರಣ ದ್ಯೋತಕ ಎಂದು ಪಕ್ಷ ಹೇಳಿಕೊಂಡಿದೆ.

ಕಾರ್ಯಕಾರಿ ಸಮಿತಿಯಲ್ಲಿರುವ ಮಹಿಳೆಯರು ಯಾರು?: ಪಕ್ಷದಹಿರಿಯ ನಾಯಕಿ ಸೋನಿಯಾ ಗಾಂಧಿ, ಪ್ರಿಯಾಂಕಾ ಗಾಂಧಿ ವಾದ್ರಾ, ಕೇಂದ್ರದ ಮಾಜಿ ಸಚಿವೆ ಅಂಬಿಕಾ ಸೋನಿ, ಕುಮಾರಿ ಸೆಲ್ಜಾ, ಮಾಜಿ ಸ್ಪೀಕರ್​ ಮೀರಾ ಕುಮಾರ್, ರಜನಿ ಪಾಟೀಲ್, ದೀಪಾ ದಾಸ್ ಮುನ್ಷಿ, ಮಾಜಿ ರಾಷ್ಟ್ರಪತಿಗಳಾದ ಪ್ರತಿಭಾ ಸಿಂಗ್, ಮೀನಾಕ್ಷಿ ನಟರಾಜನ್, ಫುಲೋ ದೇವಿ ನೇತಮ್, ಯಶೋಮತಿ ಠಾಕೂರ್, ಪ್ರಣಿತಿ ಶಿಂಧೆ, ಸುಪ್ರಿಯಾ ಶ್ರೀನತೆ, ಅಲ್ಕಾ ಲಾಂಬಾ ಮತ್ತು ನೆಟ್ಟಾ ಡಿಸೋಜಾ.

ಪಕ್ಷದೊಳಗೆ ಹೆಚ್ಚಿನ ಪ್ರಾತಿನಿಧ್ಯ ನೀಡುವ ಮೂಲಕ ಮಹಿಳಾ ಸಬಲೀಕರಣಕ್ಕೆ ಸೋನಿಯಾ ಗಾಂಧಿ ಬದ್ಧತೆ ತೋರಿದ್ದಾರೆ. ಟಿಕೆಟ್ ಹಂಚಿಕೆಯಲ್ಲೂ ಇದು ಪ್ರತಿಫಲಿಸಲಿದೆ. ಸಿಡಬ್ಲ್ಯುಸಿಯಲ್ಲಿ 15 ಮಹಿಳಾ ಸದಸ್ಯರಿಗೆ ಅವಕಾಶ ನೀಡಿದ್ದು, ದಿಟ್ಟ ಹೆಜ್ಜೆಯಾಗಿದೆ ಎಂದು ಚುನಾವಣೆ ಅಂಚಿನಲ್ಲಿರುವ ಛತ್ತೀಸ್‌ಗಢದ ಉಸ್ತುವಾರಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕುಮಾರಿ ಸೆಲ್ಜಾ ಹೇಳಿದ್ದಾರೆ.

ಜಮ್ಮು ಮತ್ತು ಕಾಶ್ಮೀರದ ಎಐಸಿಸಿ ಉಸ್ತುವಾರಿ ರಜನಿ ಪಾಟೀಲ್ ಹೇಳಿದಂತೆ, ಕಾಂಗ್ರೆಸ್ ಯಾವಾಗಲೂ ಮಹಿಳಾ ಸಬಲೀಕರಣಕ್ಕೆ ಬದ್ಧವಾಗಿದೆ. ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ 33 ಪ್ರತಿಶತ ಮೀಸಲಾತಿ ನೀಡಬೇಕೆಂಬುದನ್ನೂ ಬೆಂಬಲಿಸುತ್ತದೆ. ಆದರೆ, ಆಡಳಿತಾರೂಢ ಬಿಜೆಪಿ ಶಾಸನವನ್ನು ಅಂಗೀಕರಿಸದೇ ನಿರ್ಲಕ್ಷ್ಯ ತೋರಿದೆ ಎಂದು ತಿಳಿಸಿದರು


Spread the love

About Laxminews 24x7

Check Also

ಬೆಳಗಾವಿ ಜಲಾಶಯಗಳಲ್ಲಿ ಜೀವಕಳೆ

Spread the love ಬೆಳಗಾವಿ: ಜಿಲ್ಲೆಯಲ್ಲಿ ಈ ಬಾರಿ ಪೂರ್ವ ಮುಂಗಾರು ಉತ್ತಮವಾಗಿದೆ. ಜೂನ್‌ ಅಂತ್ಯದವರೆಗೆ ಮುಂಗಾರು 286.46 ಮಿ.ಮೀ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ