Breaking News

ಸವದತ್ತಿ ನಗರದ ಹೊರವಲಯದಲ್ಲಿರುವ ಜೋಗುಳಭಾವಿಯಲ್ಲಿ ನೀರುಪಾಲಾದ ವ್ಯಕ್ತಿ ಶವವಾಗಿ ಇಂದು ಪತ್ತೆ

Spread the love

ಸವದತ್ತಿ ನಗರದ ಹೊರವಲಯದಲ್ಲಿರುವ ಜೋಗುಳಭಾವಿಯಲ್ಲಿ ನೀರುಪಾಲಾದ ವ್ಯಕ್ತಿ ಶವವಾಗಿ ಇಂದು ಪತ್ತೆಯಾಗಿದ್ದಾನೆ.
ಶ್ರಾವಣ ಮಾಸದ ನಿಮಿತ್ಯವಾಗಿ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಸಂಡ ಗ್ರಾಮದ ರಜಪೂತ ಕುಟುಂಬದವರು ಯಲ್ಲಮ್ಮ ದೇವಿಯ ದೇವಸ್ಥಾನಕ್ಕೆ ಆಗಮಿಸಿದ್ದರು.

ನಿನ್ನೆಯ ದಿನ ಸ್ನಾನಕ್ಕೆಂದು ಜೋಗುಳಭಾವಿಗೆ ಇಳಿದಾಗ ಮೃತ 35 ವರ್ಷದ ವಿನಾಯಕ್ ಸಿಂಗ್ ರಜಪೂತ್ ನಿಶಕ್ತಿಯಿಂದ ಈಜಲಾಗದೇ ಬಾವಿಯಲ್ಲಿ ಮುಳುಗಿ ಮತ್ತೆ ಮೇಲೆ ಬರಲಿಲ್ಲ. ಘಟನೆಯ ಮಾಹಿತಿ ಪಡೆದಂತಹ ಅಗ್ನಿಶಾಮಕ ಮತ್ತು ಪೊಲೀಸ್ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ನುರಿತ ಈಜುಗಾರರರೊಂದಿಗೆ ನಿನ್ನೇ ದಿನ ನಿರಂತರವಾಗಿ ಶೋಧ ಕಾರ್ಯಾಚರಣೆಯನ್ನು ನಡೆಸಿದರು.

ಆದರೆ ವ್ಯಕ್ತಿ ಪತ್ತೆಯಾಗಿರಲಿಲ್ಲ. ಸದ್ಯ ಇಂದು ಮುಂಜಾನೆ ಕಾರ್ಯಾಚರಣೆ ಮುಂದುವರೆದಾಗ ವ್ಯಕ್ತಿಯ ಶವವಾಗಿ ಪತ್ತೆಯಾಗಿದ್ದಾನೆ. ಶವವನ್ನು ಹೊರ ತೆಗೆದಂತಹ ಸಿಬ್ಬಂದಿಗಳು ಮರಣೋತ್ತರ ಪರೀಕ್ಷೆಗೆ ಕಳುಹಿಸಿ ನಂತರದಲ್ಲಿ ಕುಟುಂಬಸ್ಥರಿಗೆ ಹಸ್ತಾಂತರಿಸಿದರು


Spread the love

About Laxminews 24x7

Check Also

ಜನರಲ್ಲಿ ವೈಚಾರಿಕತೆ, ವೈಜ್ಞಾನಿಕತೆ ಬೆಳೆಯದಿದ್ದರೆ, ಕೇವಲ ಮೌಢ್ಯ ನಿಷೇಧ ಕಾನೂನಿನ ಮೂಲಕ ನಿರೀಕ್ಷಿತ ಬದಲಾವಣೆ ಸಾಧ್ಯವಿಲ್ಲ ಎಂದ ಸಿಎಂ

Spread the loveಬೆಂಗಳೂರು: ”ದ್ವಿಭಾಷಾ ಸೂತ್ರ ನನ್ನ ಅಭಿಪ್ರಾಯವಾಗಿದೆ. ಅದನ್ನು ಸರ್ಕಾರದ ಅಭಿಪ್ರಾಯ ಮಾಡುವ ದಿಕ್ಕಿನಲ್ಲಿ ಪ್ರಯತ್ನಿಸುತ್ತೇನೆ” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ