Home / ರಾಜಕೀಯ / ಶ್ರಾವಣ ಮಾಸ ಇಂದಿನಿಂದ ಆರಂಭವಾಗಿದೆ. ಎಲ್ಲೆಲ್ಲೂ ದೇವರ ಸ್ಮರಣೆ, ಧ್ಯಾನ

ಶ್ರಾವಣ ಮಾಸ ಇಂದಿನಿಂದ ಆರಂಭವಾಗಿದೆ. ಎಲ್ಲೆಲ್ಲೂ ದೇವರ ಸ್ಮರಣೆ, ಧ್ಯಾನ

Spread the love

ಬೆಳಗಾವಿ: ಶ್ರಾವಣ ಮಾಸ ಇಂದಿನಿಂದ ಆರಂಭವಾಗಿದೆ. ಎಲ್ಲೆಲ್ಲೂ ದೇವರ ಸ್ಮರಣೆ, ಧ್ಯಾನ ನಡೆಯುತ್ತಿದೆ.

ಇನ್ನು ಎಲ್ಲ ಊರುಗಳಲ್ಲಿ ವರ್ಷದಲ್ಲಿ ಒಂದು ತಿಂಗಳು ಮಾತ್ರ ಶ್ರಾವಣ ಇದ್ದರೆ ಈ ಊರಲ್ಲಿ ಮಾತ್ರ ಪ್ರತಿದಿನವೂ ಶ್ರಾವಣ. ಮಾಂಸಾಹಾರ ಸೇವನೆ ನಿಷಿದ್ಧ.‌ ಇಂತಹ ಅಪರೂಪದ‌ ಊರಿನ ಪರಿಚಯ ನಿಮಗಾಗಿ.

ಕುಂದಾನಗರಿ ಬೆಳಗಾವಿಗೆ ಹೊಂದಿಕೊಂಡಿರುವ ಹಲವು ಐತಿಹಾಸಿಕ ಹಿನ್ನೆಲೆ ಇರುವ ಬಸವನಕುಡಚಿ ಗ್ರಾಮದಲ್ಲಿಯೇ ನಿತ್ಯ ಶ್ರಾವಣ ಸಂಭ್ರಮ ಮೇಳೈಸಿದೆ. ಇಂದಿನಿಂದ ಎಲ್ಲೆಡೆ ಶ್ರಾವಣ ಆರಂಭವಾಗಿದ್ದರಿಂದ ಶ್ರಾವಣ ಪಾಲಿಸುವವರು ಒಂದು ತಿಂಗಳವರೆಗೂ ಮಾಂಸಾಹಾರ, ಮದ್ಯಪಾನಕ್ಕೆ ಗುಡ್ ಬೈ ಹೇಳುತ್ತಾರೆ. ಆದರೆ, ಈ ಗ್ರಾಮದಲ್ಲಿ ನೂರಾರು ವರ್ಷಗಳಿಂದ ಶ್ರಾವಣ ಅಷ್ಟೇ ಅಲ್ಲದೇ ಇನ್ನುಳಿದ ಸಮಯದಲ್ಲೂ ಯಾವ ಮನೆಯಲ್ಲಿಯೂ ಮಾಂಸಾಹಾರ ಊಟವನ್ನು‌ ತಯಾರಿಸುವುದಿಲ್ಲ ಮತ್ತು ಬೇರೆ ಕಡೆಯಿಂದ ತಂದು ಸೇವಿಸುವುದನ್ನೂ ಕೂಡ ಮಾಡುವುದಿಲ್ಲ. ಅಪ್ಪಟ ಸಸ್ಯಾಹಾರವನ್ನೇ ತಮ್ಮ ಜೀವನ ಪದ್ಧತಿಯನ್ನಾಗಿ ಇಲ್ಲಿನ ಜನ ರೂಢಿಸಿಕೊಂಡಿದ್ದಾರೆ. ಅಲ್ಲದೇ ಗ್ರಾಮದಲ್ಲಿ ಮುಸ್ಲಿಂ ಮತ್ತು ಮರಾಠಾ ಸೇರಿ ಇನ್ನುಳಿದ ಸಮಾಜದವರೂ ಮಾಂಸಾಹಾರ ತಯಾರಿಸುವುದಿಲ್ಲ ಎನ್ನುವುದು ಮತ್ತೊಂದು ವಿಶೇಷತೆ. ಇದಲ್ಲದೇ ಸಾರಾಯಿ ಕೂಡ ಇಲ್ಲಿ ನಿಷಿದ್ಧ.

ಈ ಬಗ್ಗೆ ಈಟಿವಿ ಭಾರತ್ ಜೊತೆಗೆ ಮಾತನಾಡಿದ ಗ್ರಾಮದ ಹಿರಿಯ‌ ಬಸವರಾಜ ಹಣ್ಣಿಕೇರಿ ಮತ್ತು ಮಹಾಂತೇಶ ರಣಗಟ್ಟಿಮಠ ಮಾತನಾಡಿ, ನಮ್ಮೂರಿನಲ್ಲಿ ಕಡ್ಡಾಯವಾಗಿ ಯಾರೂ ಮಾಂಸಾಹಾರ ಮುಟ್ಟುವುದಿಲ್ಲ ಮತ್ತು ತಿನ್ನುವುದಿಲ್ಲ. ಇದು ನೂರಾರು ವರ್ಷಗಳಿಂದ ನಡೆದುಕೊಂಡು ಬಂದಿದೆ. ಊರು ಬಿಟ್ಟು ಹೊರಗಡೆ ಕೆಲವರು ತಿನ್ನುತ್ತಾರೆ. ಆದರೆ, ಹೀಗೆ ತಿಂದು ಬರುವವರು ದೇವಸ್ಥಾನಕ್ಕೆ ಬರುವುದಿಲ್ಲ. ದೇಶ, ವಿದೇಶಗಳಿಂದಲೂ ಭಕ್ತರು ದೇವಸ್ಥಾನಕ್ಕೆ ಬರುತ್ತಾರೆ ಇದೊಂದು ವಿಶಿಷ್ಟ ಗ್ರಾಮ ಎಂದು ವಿವರಿಸಿದರು.

ಮಹಡಿಯ ಮೇಲೆ ಬಸವಣ್ಣ ದೇವಾಲಯ: ಗ್ರಾಮದ ಮಧ್ಯಭಾಗದಲ್ಲಿ ಚೌಕಾಕಾರ ಗದ್ದುಗೆಯ ಮೇಲೆ ಶಿಲಾಗಂಭಗಳಿಂದ ನಿರ್ಮಿಸಿರುವ ಬಸವನ ದೇವಸ್ಥಾನಕ್ಕೆ ಚಪ್ಪಡಿಗಲ್ಲುಗಳ ಮಳಿಗೆಗಳನ್ನು ವಿಶಿಷ್ಟವಾಗಿ ರೂಪಿಸಲಾಗಿದೆ. ಈ ದೇವಾಲಯದ ಮಧ್ಯಭಾಗದಲ್ಲಿ ಒಂದು ಅಖಂಡ ಶಿಲಾಗಂಭವಿದ್ದು, ಇದು ದೇವಾಲಯದ ಆಧಾರಗಂಭ ಎನ್ನಬಹುದು. ಬಸವನ ವಿಗ್ರಹವನ್ನು ಮಹಡಿಯ ಮೇಲೆ ಪ್ರತಿಷ್ಠಾಪಿಸಿರುವುದು ಇಲ್ಲಿನ ವಿಶೇಷತೆಗಳಲ್ಲೊಂದು, ಇಂತಹ ಶೈಲಿಯ ದೇವಸ್ಥಾನ ಕರ್ನಾಟಕದಲ್ಲಿ ದೊರೆಯುವುದು ಬಲು ಅಪರೂಪ ಎಂದೇ ಹೇಳಬಹುದು.


Spread the love

About Laxminews 24x7

Check Also

ಅಧಿಕಾರಿಗಳ ಭರವಸೆ: ಧರಣಿ ಅಂತ್ಯ.

Spread the love ರಾಮದುರ್ಗ: ಗ್ರಾಮ ಪಂಚಾಯ್ತಿಗಳಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರಗಳ ಹಣವನ್ನು ಸಂಬಂಧಿಸಿದ ಅಧಿಕಾರಿಗಳಿಂದ ಸರ್ಕಾರಕ್ಕೆ ಭರಿಸುವ ಭರವಸೆಯನ್ನು ತಾಲ್ಲೂಕು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ