Home / ರಾಜಕೀಯ / ಖರ್ಜೂರ ಸೇವನೆಯಿಂದ ಸಿಗುವ ಆರೋಗ್ಯ ಪ್ರಯೋಜನಗಳು ಗೊತ್ತೇ?

ಖರ್ಜೂರ ಸೇವನೆಯಿಂದ ಸಿಗುವ ಆರೋಗ್ಯ ಪ್ರಯೋಜನಗಳು ಗೊತ್ತೇ?

Spread the love

ಖರ್ಜೂರ ರುಚಿಕರ ಒಣ ಹಣ್ಣುಗಳ ಪೈಕಿ ಒಂದು. ತಾಜಾ ಹಣ್ಣುಗಳಿಗಿಂತ ಹೆಚ್ಚಿನ ಪೋಷಕಾಂಶಗಳನ್ನು ಇದು ಒಳಗೊಂಡಿದೆ. ಪ್ರೊಟೀನ್​​, ಕಾರ್ಬೋಹೈಡ್ರೇಟ್​​, ಅಗತ್ಯ ವಿಟಮಿನ್ಸ್​, ಮಿನರಲ್ಸ್ ಹಾಗು ಫೈಬರ್​​ನಂತಹ ಅತ್ಯಗತ್ಯ ಅಂಶಗಳು ಇದರಲ್ಲಿವೆ.

ಆರೋಗ್ಯಕರ ಜೀವನ ಶೈಲಿಗೆ ಬೇಕಾದ ಎಲ್ಲ ಅಂಶಗಳನ್ನೂ ಒಣ ಹಣ್ಣು ಖರ್ಜೂರ ಸೇವಿಸುವ ಮೂಲಕ ಪಡೆಯಬಹುದು.

ಒಣ ಖರ್ಜೂರಗಳಲ್ಲಿ ದೇಹಕ್ಕೆ ಅಗತ್ಯವಿರುವ ಕಾರ್ಬೋಹೈಡ್ರೇಟ್​ ಅಧಿಕವಿದೆ. 100 ಗ್ರಾಂ ಖರ್ಜೂರ 75 ಗ್ರಾಂನಷ್ಟು ಕಾರ್ಬೋಹೈಡ್ರೇಟ್​ ಹೊಂದಿರುತ್ತದೆ. ಉಳಿದಂತೆ, 7 ಗ್ರಾಂ ಫೈಬರ್, 2 ಗ್ರಾಂ ಪ್ರೊಟೀನ್​​ ಇದರಲ್ಲಿದೆ. ಅಲ್ಲದೇ ಪೊಟ್ಯಾಶಿಯಂ, ಮ್ಯಾಂಗನೀಸ್​​, ಕಾಪರ್​​, ಐರನ್​​, ವಿಟಮಿನ್​​ ಬಿ6, ಆಯಂಟಿಆಕ್ಸಿಡೆಂಟ್ಸ್‌ನಂತಹ ಸಾಕಷ್ಟು ಪೋಷಕಾಂಶಗಳು ಹೇರಳವಾಗಿವೆ.

ಉತ್ತಮ ತ್ವಚೆ: ಖರ್ಜೂರದಲ್ಲಿರುವ ಆಯಂಟಿಆಕ್ಸಿಡೆಂಟ್ಸ್​ ದೇಹದಲ್ಲಿನ ಜೀವಕೋಶಗಳ ಹಾನಿ ತಪ್ಪಿಸುತ್ತದೆ. ಅನೇಕ ಕಾಯಿಲೆಗಳನ್ನೂ ತಡೆಹಿಡಿಯುತ್ತದೆ. ಇತರೆ ಒಣ ಹಣ್ಣುಗಳಿಗೆ ಹೋಲಿಸಿದರೆ ಖರ್ಜೂರದಲ್ಲಿ ಆಯಂಟಿಆಕ್ಸಿಡೆಂಟ್ಸ್​ ಅಂಶ ತುಸು ಹೆಚ್ಚೇ. ಕ್ಯಾರೊಟಿನಾಯ್ಡ್ ಎಂಬ ಆಯಂಟಿಆಕ್ಸಿಡೆಂಟ್ಸ್ ನಿಮ್ಮ ಹೃದಯದ ಆರೋಗ್ಯವನ್ನು ರಕ್ಷಿಸುವಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತದೆ. ಅಲ್ಲದೇ ಕಣ್ಣಿನ ಸಮಸ್ಯೆ, ಕ್ಯಾನ್ಸರ್ ಅಪಾಯವನ್ನೂ ತಡೆಯಬಲ್ಲದು.

ಗರ್ಭಿಣಿಯರಿಗೆ ಉತ್ತಮ: ಖರ್ಜೂರ ಮಹಿಳೆಯರಿಗೆ ವಿಶೇಷ ಪ್ರಯೋಜನ ನೀಡುತ್ತದೆ. ಏಕೆಂದರೆ ಇದರಲ್ಲಿ ಫೈಬರ್, ಐರನ್​, ವಿಟಮಿನ್​ ಸಿ, ಡಿ, ವಿಟಮಿನ್ ಬಿ ಕಾಂಪ್ಲೆಕ್ಸ್​​​ ಅಂಶಗಳು ಸಮೃದ್ಧವಾಗಿವೆ. ಹಾಗಾಗಿ ಇದು ಗರ್ಭಿಣಿಯರ ಆರೋಗ್ಯಕ್ಕೂ ಪೂರಕ. ಸುಲಭ ಹೆರಿಗೆಗೆ ಒಳ್ಳೆಯದು. ವೈದ್ಯರ ಸಲಹೆಯ ಮೇರೆಗೆ ಸೇವಿಸುವುದು ಸೂಕ್ತ. ಇದರಲ್ಲಿರುವ ಪೋಷಕಾಂಶಗಳು ಕೂದಲ ಆರೈಕೆಗೂ ಸಹಾಯಕ.

ಜೀರ್ಣಕ್ರಿಯೆ: ಖರ್ಜೂರದಲ್ಲಿ ಫೈಬರ್​ ಅಂಶ ಹೆಚ್ಚಿರುವುದರಿಂದ ಉತ್ತಮ ಜೀರ್ಣಾಂಗ ವ್ಯವಸ್ಥೆ ಹೊಂದಲು ನೆರವಾಗುತ್ತದೆ. ಮಲಬದ್ಧತೆ ನಿಯಂತ್ರಿಸುತ್ತದೆ. ಖರ್ಜೂರ ಸೇವಿಸುವವರಲ್ಲಿ ಮಲಬದ್ಧತೆ ಸಮಸ್ಯೆ ಇರುವುದಿಲ್ಲ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ. ರಕ್ತದ ಸಕ್ಕರೆ ಮಟ್ಟವನ್ನೂ ನಿಯಂತ್ರಣದಲ್ಲಿಡುತ್ತದೆ.

ಜ್ಞಾಪಕಶಕ್ತಿ ವೃದ್ಧಿ: ಖರ್ಜೂರ ಸೇವನೆ ಮೆದುಳಿಗೆ ಬಹಳ ಪ್ರಯೋಜನಕಾರಿ. ಮೆದುಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ತಡೆಯುತ್ತದೆ. ಕಲಿಕಾ ಸಾಮರ್ಥ್ಯ, ಜ್ಞಾಪಕಶಕ್ತಿ ವೃದ್ಧಿಸುವುದರ ಜೊತೆಗೆ ಆತಂಕ ಕಡಿಮೆ ಮಾಡುತ್ತದೆ ಎಂದು ಸಂಶೋಧಕರು ಹೇಳುತ್ತಾರೆ. ಸ್ನಾಯುಗಳ ಆರೋಗ್ಯ, ಉರಿಯೂತ ನಿಯಂತ್ರಣಕ್ಕೆ ಖರ್ಜೂರ ಉತ್ತಮ ಆಯ್ಕೆ.


Spread the love

About Laxminews 24x7

Check Also

ಅಧಿಕಾರಿಗಳ ಭರವಸೆ: ಧರಣಿ ಅಂತ್ಯ.

Spread the love ರಾಮದುರ್ಗ: ಗ್ರಾಮ ಪಂಚಾಯ್ತಿಗಳಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರಗಳ ಹಣವನ್ನು ಸಂಬಂಧಿಸಿದ ಅಧಿಕಾರಿಗಳಿಂದ ಸರ್ಕಾರಕ್ಕೆ ಭರಿಸುವ ಭರವಸೆಯನ್ನು ತಾಲ್ಲೂಕು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ